• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೀನ್ಸ್‌ ಪ್ಯಾಂಟ್ ತೊಟ್ಟು ಕಚೇರಿಗೆ ಬಂದಿದ್ದ ಪಿಡಿಓಗೆ ನೋಟಿಸ್

|

ಹಾಸನ, ಡಿಸೆಂಬರ್ 23: ವಿದ್ಯಾರ್ಥಿಗಳು ಸಮವಸ್ತ್ರಕ್ಕೆ ಬದಲಾಗಿ ಜೀನ್ಸ್ ತೊಟ್ಟು ಶಾಲೆ ಕಾಲೇಜುಗಳಿಗೆ ಆಗಮಿಸಿದರೆ ಕ್ರಮ ಕೈಗೊಳ್ಳುವುದನ್ನು ನೋಡಿದ್ದೇವೆ.

ಆದರೆ ಜೀನ್ಸ್‌ ಪ್ಯಾಂಟ್ ಧರಿಸಿ ಕಚೇರಿಗೆ ಬಂದ ಪಿಡಿಓಗೆ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ.

ಆಲೂರು ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರುದ್ರೇಗೌಡ ಅವರು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದು ಶಿಸ್ತು ಕ್ರಮ ಜರುಗಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಈ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಟೀ ಶರ್ಟ್ ಜೊತೆಗೆ ಜೀನ್ಸ್ ಪ್ಯಾಂಟ್ ಧರಿಸಿದ್ದೇ ಸರ್ಕಾರಿ ನೌಕರರ ವಸ್ತ್ರ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ. ಆದರೆ ಪಿಡಿಯೋ ರುದ್ರೇಗೌಡರು , ಜೀನ್ಸ್ ಪ್ಯಾಂಟ್ ಮತ್ತು ಮಾಮೂಲಿ ಷರ್ಟ್ ಧರಿಸಿದ್ದರು. ಇದು ಸರ್ಕಾರಿ ನೌಕರರ ವಸ್ತ್ರ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

ಡಿಸೆಂಬರ್ 20 ರಂದು ರುದ್ರೇಗೌಡರು ಜೀನ್ಸ್‌ ಪ್ಯಾಂಟ್ ಮತ್ತು ಅದರ ಮೇಲೆ ಫಾರ್ಮಲ್ ಶರ್ಟ್ ಧರಿಸಿಕೊಂಡು ಜಿಲ್ಲಾಪಂಚಾಯ್ತಿ ಕಚೇರಿಗೆ ಕೆಲಸದ ನಿಮಿತ್ತ ಬಂದಿದ್ದರು.

ಇದನ್ನು ಕಂಡ ಸಿಇಓ ಸರ್ಕಾರಿ ನೌಕರರಿಗೆ ಶೋಭೆ ತರುವಂತಹ ಸಭ್ಯ ವಸ್ತ್ರ ಧರಿಸದೇ ಜೀನ್ಸ್ ಪ್ಯಾಂಟ್ ತೊಟ್ಟು ಜಿಲ್ಲಾ ಪಂಚಾಯ್ತಿ ಕಚೇರಿಗೆ ಬಂದು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿತ್ತು.

English summary
Notice To PDO Who Came To Office Wearing Jeans Pantsin Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X