ಹಾಸನದಲ್ಲಿ ಬಿರುಗಾಳಿಗೆ ತೂರಿಕೊಂಡು ಹೋದ ಮನೆಯ ಮೇಲ್ಚಾವಣಿ, ಮದುವೆ ಮನೆಯ ಸಂಭ್ರಮವನ್ನೇ ಕಿತ್ತುಕೊಂಡ ಮಳೆರಾಯ

ಹಾಸನ, ಮೇ, 22: ರಾಜ್ಯದ ಹಲವೆಡೆ ಈಗಾಗಲೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದು, ಇದರ ಪರಿಣಾಮ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಕೆಲವರು ಕೃಷಿ ಭೂಮಿ, ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇನ್ನು ಕೆಲವರು ಸಾವನಪ್ಪಿರುವ ದುರ್ಘಟನೆಗಳು ಕೂಡ ನಡೆದಿವೆ. ಅದೇ ರೀತಿ ಭಾನುವಾರ ರಾತ್ರಿ ಹಾಸನ ಜಿಲ್ಲೆಯಲ್ಲೀ ಮಳೆರಾ ಭಾರಿ ಅವಾಂತರ ಸೃಷ್ಟಿಸಿದ್ದಾನೆ.

ಹಾಸನದಲ್ಲಿ ಬಡ ಮುಸ್ಲಿಂ ಕುಟುಂಬವೊಂದು ಸಾಲಸೋಲ ಮಾಡಿ ಮನೆಯಲ್ಲಿದ್ದ ಹೆಣ್ಣುಮಗಳ ಮದುವೆಯನ್ನು ಜೂನ್‌ 4ಕ್ಕೆ ದಿನಾಂಕ ನಿಗದಿ ಮಾಡಿದ್ದರು. ಅಲ್ಲದೆ ಮದುವೆಗೆ ಬೇಕಾದ ಬಟ್ಟೆ ಸೇರಿ ಎಲ್ಲಾ ವಸ್ತುಗಳನ್ನು ತಂದಿದ್ದರು. ಆದರೆ ತಡರಾತ್ರಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸಂಪೂರ್ಣ ಜಲಾವೃತವಾಗಿವೆ. ಹೀಗೆ ನೀರಿನಲ್ಲಿ ನೆನೆದಿದ್ದ ಎಲ್ಲಾ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಟ್ಟು, ಮದುವೆಗೆ ತಯಾರಿ ಮಾಡಲು ಆಗದೇ ಬೀದಿಯಲ್ಲಿ ನಿಂತು ಕಣ್ಣೀರಿಡುತ್ತಿದ್ದಾರೆ.

heavy rain in Hassan

ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ವರುಣ ಅವಕೃಪೆಯಿಂದ ಆತಂಕದ ಛಾಯೆ ಆವರಿಸಿದೆ. ಸಾಲಸೋಲ ಮಾಡಿ ತಂದಿದ್ದ ಬಟ್ಟೆ ಬರೆಗಳೆಲ್ಲವೂ ನೀರುಪಾಲಾಗಿವೆ. ಸುಣ್ಣಬಣ್ಣ ಬಳಿಯುವ ಪ್ಲಾನ್ ಮಾಡಿದ್ದ ಕುಟುಂಬ ಈಗ ಮುರಿದುಬಿದ್ದಿರುವ ಮನೆ ರೆಡಿ ಮಾಡುವುದಕ್ಕೆ ಮುಂದಾಗಬೇಕಿದೆ. ಇನ್ನು ಇದಕ್ಕೆ ಸಂಬಂಧಪಟಗಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ಕೊಡಿಸಬೇಕು ಎಂದು ಕುಟುಂಬ ಕಣ್ಣೀರಿಡುತ್ತಾ ಒತ್ತಾಯ ಮಾಡಿದೆ.

ಮದುವೆಗೆ ತಂದಿದ್ದ ಹೊಸ ಬಟ್ಟೆಗಳೂ ಕೂಡ ನೀರಿನಲ್ಲಿ ಹರಿದುಕೊಂಡು ಹೋಗಿವೆ. ಅಷ್ಟೇ ಅಲ್ಲದೇ ಅವರಿದ್ದ ಜಾಗದಲ್ಲಿ ವರುಣಾರ್ಭಟ ಹೆಚ್ಚಿದ್ದ ಕಾರಣ, ಮನೆಗಳ ಹೆಂಚು, ಶೀಟ್‌ಗಳು ಗಾರಿಗೆ ಹಾರಿಹೋಗಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಇಷ್ಟೆಲ್ಲ ಅವಾಂತರವಾಗಿದ್ದರೂ ಬಂದು ನೋಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬಡಾವಣೆಯ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ನಗರದ ಹೊರ ವಲಯ ದೇವೇಗೌಡ ನಗರದಲ್ಲಿ ನಿನ್ನೆ ಬಿರುಗಾಗಿ ಸಮೇತ ಭಾರಿ ಮಳೆ ಸುರಿದ ಪರಿಣಾಮ ಮನೆಯ ಮೇಲ್ಚಾವಣಿಗಳು ಹಾರಿಹೋಗಿವೆ. ಹೀಗೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಹಲವು ಕುಟುಂಬಗಳು ಬೀದಿಗೆ ಬಂದ ಘಟನೆಯೂ ನಡೆದಿದೆ.
ಅಲ್ಲದೆ ಗುಡುಗು, ಗಾಳಿ ಸಹಿತದ ಭಾರೀ ಮಳೆಗೆ ಬಡಾವಣೆಯ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಹೀಗೆ ಬಿರುಗಾಳಿಗೆ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಮನೆಗಳ ಹೆಂಚುಗಳು, ಶೀಟ್‌ಗಳು ನೂರು ಮೀಟರ್‌ಗೂ ಹೆಚ್ಚು ದೂರ ಹಾರಿ ಬಿದ್ದಿವೆ. ವಿದ್ಯುತ್ ಕಂಬಗಳು ಮನೆ ಹಾಗೂ ಬೈಕ್‌ಗಳ‌ ಮೇಲೂ ಬಿದ್ದಿದ್ದು, ಬೈಕ್ ಸೇರಿ ಹಲವು ಮನೆಗಳು ಜಖಂಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+