ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಾಜಕೀಯ ಬದ್ಧ ವೈರಿಗಳಾದ ಪ್ರೀತಂ ಗೌಡ-ಭವಾನಿ ರೇವಣ್ಣ

|
Google Oneindia Kannada News

ಹಾಸನ, ಅಕ್ಟೋಬರ್ 6: ಹಾಸನದಲ್ಲಿ ರಾಜಕೀಯ ಬದ್ಧವೈರಿಗಾಳಾದ ಬಿಜೆಪಿ ಶಾಸಕ ಪ್ರೀತಂಗೌಡ ಹಾಗೂ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಒಂದೇ ಕಾಣಿಸಿಕೊಂಡಿದ್ದು, ಪ್ರೀತಂ ಕೋರಿಕೆ ಮೇರೆಗೆ ಭವಾನಿ ಕಾರ್ಯಕ್ರಮವನ್ನು ಟೇಪ್‌ ಕತ್ತರಿಸಿ ಉದ್ಘಾಟಿಸಿದ್ದಾರೆ. ಒಬ್ಬರನ್ನೊಬ್ಬರು ನೀವು ಉದ್ಘಾಟಿಸಿ ಎಂದು ಸೌಹಾರ್ದಯುತವಾಗಿ ಕೇಳಿಕೊಂಡರಾದರೂ ಕೊನೆಗೆ ಭವಾನಿಯವರೇ ಟೇಪ್‌ ಕತ್ತರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ನಗರದ ಎಸ್.ಎಸ್.ಎಸ್.ಎಂ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಉದ್ಘಾಟನೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ಅತಿಥಿಗಳಾಗಿ ಆಗಮಿಸಿದ್ದರು. ರಾಜಕೀಯವಾಗಿ ಬದ್ಧ ಎದುರಾಳಿಗಳಾಗಿರುವ ಇವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಆಶ್ಚರ್ಯವನ್ನುಂಟು ಮಾಡಿತು.

ಜೆಡಿಎಸ್-ಬಿಆರ್‌ಎಸ್‌ ಮೈತ್ರಿ ಚುನಾವಣೆಗೆ ಹೊಸ ದಿಕ್ಸೂಚಿ ನೀಡಲಿದೆ: ಎಚ್‌ಡಿ ಕುಮಾರಸ್ವಾಮಿಜೆಡಿಎಸ್-ಬಿಆರ್‌ಎಸ್‌ ಮೈತ್ರಿ ಚುನಾವಣೆಗೆ ಹೊಸ ದಿಕ್ಸೂಚಿ ನೀಡಲಿದೆ: ಎಚ್‌ಡಿ ಕುಮಾರಸ್ವಾಮಿ

ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆಗಳು ಈಗಾಗಲೇ ರಾಜಕೀಯ ವಲಯದಲ್ಲಿ ಗರಿಗೆದರಿವೆ. ಈ ನಡುವೆ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕುತೂಹಲ ಮೂಡಿಸಿತ್ತು. ಆದರೆ ರಾಜಕೀಯವನ್ನು ಬದಿಗೊತ್ತಿದ ಇಬ್ಬರು ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.

MLA Pritam Gowda-Bhavani Revanna Appeared in the same Programe in Hassan

ಈ ಹಿಂದೆ ಭವಾನಿ ರೇವಣ್ಣ ಚುನಾವಣೆಯಲ್ಲಿ ನನ್ನ ವಿರುದ್ದ ಸ್ಪರ್ಧೆ ಮಾಡಿದರೆ ಮೂರನೇ ಸ್ಥಾನಕ್ಕೆ ಹೋಗುತ್ತಾರೆಂದು ಈ ಹಿಂದೆ ಪ್ರೀತಂಗೌಡ ಟೀಕಿಸಿದ್ದರು. ಅಲ್ಲದೆ ಹಾಸನದಲ್ಲಿ ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲು ಜೆಡಿಎಸ್​ನ ಹಿರಿಯ ನಾಯಕ ಎಚ್​.ಡಿ.ರೇವಣ್ಣ ಮತ್ತು ಅವರ ಪತ್ನಿ ಭವಾನಿಗೆ ನಾನೇ ಆಹ್ವಾನ ನೀಡುತ್ತೇನೆ. ಅವರು ಸ್ಪರ್ಧಿಸಿದರೆ ನನಗೆ ಸಂತೋಷ. ನಾನು ಸಿದ್ಧನಿದ್ದೇನೆ ಎಂದು ಪ್ರೀತಂ ಸವಾಲ್ ಹಾಕಿದ್ದರು.

ಭವಾನಿ ರೇವಣ್ಣ ತಿರುಗೇಟು

ಇನ್ನು ಪ್ರೀತಂ ಗೌಡ ಸವಾಲಿಗೆ ತಿರುಗೇಟು ನೀಡಿದ್ದ ಭವಾನಿ, ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಬೇರೆಯವರಿಗೆ ಅದರ ಉಸಾಬರಿ ಬೇಡ. ಸ್ಥಳೀಯ ಶಾಸಕರು ಅವರ ಕೆಲಸ ಏನಿದೆ ಅದನ್ನು ಮಾಡಿಕೊಂಡು ಇರಲಿ. ಅವರು ನಮಗೇನು ಆಹ್ವಾನ ಮಾಡುವುದು ಬೇಡ ಎಂದು ತಿಳಿಸಿದ್ದರು.

MLA Pritam Gowda-Bhavani Revanna Appeared in the same Programe in Hassan

ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿಗೆ ಗೆಲುವು
ಪ್ರೀತಂ ಪಂಥಹ್ವಾನಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ನಮ್ಮ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದವರು ತೀರ್ಮಾನ ಮಾಡುತ್ತೀವಿ, ಇವರನ್ನ ಹೇಳಿ ಕೇಳಿ ಮಾಡುವುದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಗೆಲುವು ಸಾಧಿಸಿತು. ಇಲ್ಲ ಅಂದಿದ್ರೆ ಈ ಗಿರಾಕಿ ಇರುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದ ರೇವಣ್ಣ, ಮುಂದಿನ ದಿನಗಳಲ್ಲಿ ಭವಾನಿ ರೇವಣ್ಣ ಶಾಸಕರಾಗುತ್ತಾರೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. 5 ವರ್ಷ ಆಗಬಹುದು, 10 ವರ್ಷ ಆಗಬಹುದು ಎಂದಿದ್ದರು.

English summary
Political enemies of Hassan, MLA Pritam Gowda-Bhavani Revanna appeared in the same programme in Hassan town on wednesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X