ಗಂಡನ ಚಿಕಿತ್ಸೆಗೆಂದು ಕರುಳ ಕುಡಿಯನ್ನೇ ಮಾರಿದ ಮಹಿಳೆ

Posted By:
Subscribe to Oneindia Kannada

ಹಾಸನ, ನವೆಂಬರ್ 24 : ಗಂಡನನ್ನು ಉಳಿಸಿಕೊಳ್ಳಲು ಸತಿ ಸಾವಿತ್ರಿ ಯಮನಿಗೆ ಸವಾಲು ಹಾಕಿದ್ದಳು, ಆದರೆ ಇಲ್ಲೊಬ್ಬ ಸತಿ ಸಾವಿತ್ರಿ ತನ್ನ ಕರುಳ ಕುಡಿಯನ್ನೇ ಪಣಕ್ಕಿಟ್ಟು ಗಂಡನ ಉಳಿಸಿಕೊಳ್ಳಲು ಮುಂದಾಗಿದ್ದಾಳೆ.

ಮೊಬೈಲ್ ಖರೀದಿಸಲು ಮಗನನ್ನೇ ಮಾರಿದ ತಂದೆ!

ಹೌದು, ಹಾಸನ ಜಿಲ್ಲೆಯ ಬೆಲೂರಿನಲ್ಲಿ ಮಹಿಳೆಯೊಬ್ಬಾಕೆ ಗಂಡನ ಚಿಕಿತ್ಸೆಯ ವೆಚ್ಚ ಭರಿಸುವುದಕ್ಕಾಗಿ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ್ದಾಳೆ.

Lady sels her baby to arrange money for husbands treatment

ಪತಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಹಾಸನದ ಮಹಿಳೆಯೊಬ್ಬರು ತನ್ನ ಮೂರು ತಿಂಗಳ ಗಂಡು ಮಗುವನ್ನು ವಾರದ ಹಿಂದೆ 22 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಆ ಮಗುವನ್ನು ಹಾಸನದ ರಂಗೋಲಿಹಳ್ಳದ ಗಾಯತ್ರಿ ನಾಗರಾಜ್‌ ಅವರು ಖರೀದಿಸಿದ್ದರು. ಮಾರಾಟ ಮಾಡಿದ ಮಹಿಳೆಯ ವಿವರ ತಿಳಿದು ಬಂದಿಲ್ಲ.

ಮಗುವನ್ನು ಕೊಂಡ ಗಾಯತ್ರಿ ಆ ಮಗುವನ್ನು ಬೇಲೂರಿನ ಹೊಸನಗರ ಬಡಾವಣೆಯ ಮಂಜುಳಾ ದೇವರಾಜ್‌ ಎಂಬುವರಿಗೆ ಮರು ಮಾರಾಟ ಮಾಡಿದರು. ನಂತರ ಈ ವಿಚಾರವನ್ನು ಬೇಲೂರು ಆಸ್ಪತ್ರೆಯ ನಿವೃತ್ತ ನರ್ಸ್‌ ಶಾಂತಮ್ಮ ಅವರಿಗೆ ಗಾಯತ್ರಿ ತಿಳಿಸಿದ್ದು, ಆಗ ಮಗು ಮಾರಾಟದ ವಿಚಾರ ಹೊರಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಸಂರಕ್ಷಣಾ ಇಲಾಖೆ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಂಜುಳಾ ಮನೆಗೆ ತೆರಳಿ ಮಗುವನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A lady in Hassan district Beluru sold her baby to arrange money for her husband treatment. now baby girl is in chindren wellfare department custody.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ