ದೇವೇಗೌಡ ಬಗ್ಗೆ ಆಕ್ಷೇಪಾರ್ಹ ಮಾತು: ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆ

Recommended Video

      ದೇವೇಗೌಡ ಬಗ್ಗೆ ಆಕ್ಷೇಪಾರ್ಹ ಮಾತು: ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆ | Oneindia Kannada

      ಹಾಸನ, ಫೆಬ್ರವರಿ 13: ಹಾಸನ ನಗರ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ದೇವೇಗೌಡ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರೀತಂ ಗೌಡ ಮನೆಗೆ ಮುತ್ತಿಗೆ ಹಾಕಿದ್ದಾರೆ.

      ಹಾಸನದಲ್ಲಿನ ಪ್ರೀತಂ ಗೌಡ ಅವರ ಮನೆಗೆ ಮುತ್ತಿಗೆ ಹಾಕಿದ ನೂರಾರು ಜೆಡಿಎಸ್‌ ಶಾಸಕರು ಪ್ರತಿಭಟನೆ ಮಾಡಿದ್ದಾರೆ, ದೇವೇಗೌಡ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರಾದರೇ ಪ್ರೀತಂಗೌಡ ಎಂದು ಆಕ್ರೋಶ ಹೊರಹಾಕಿದ್ದಾರೆ.

      'ದೇವೇಗೌಡನ ವಿಕೆಟ್ ಕೆಲವೇ ದಿನದಲ್ಲಿ ಉರುಳುತ್ತದೆ' ಎಂದು ಪ್ರೀತಂಗೌಡ ಅವರು ಹೇಳಿದ್ದಾರೆ ಎಂದು ಕೆಲವು ವಾಹಿನಿಗಳಲ್ಲಿ ವರದಿ ಆಗಿದೆ. ಇದರಿಂದಾಗಿ ಸಿಟ್ಟಿಗೆದ್ದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

      JDS party workers protest in front of Hassan BJP MLAs house

      ಆದರೆ ಪ್ರತಿಭಟನೆ ಮುಗಿದ ಮೇಲೆ ಯಾರೋ ಕೆಲವರು ಕಿಡಿಗೇಡಿಗಳು ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಪ್ರೀತಂ ಗೌಡ ಬೆಂಬಲಿಗ ರಾಹುಲ್ ಅವರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

      ಸ್ಥಳಕ್ಕೆ ಹಾಸನ ಎಸ್‌ಪಿ ಬಂದು ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಪ್ರತಿಭಟನೆ ಮುಗಿದಿದೆ ಆದರೆ ಶಾಸಕ ಪ್ರೀತಂ ಗೌಡ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+