ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಟ್ ಕರ್ಫ್ಯೂ ಕ್ರಮಕ್ಕೆ ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಆಕ್ರೋಶ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 28: ಇಂದು(ಡಿ.28, ಮಂಗಳವಾರ) ರಾತ್ರಿ 10 ಗಂಟೆಯಿಂದಲೇ ರಾಜ್ಯದಲ್ಲೆಡೆ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಅವಶ್ಯಕ ವಸ್ತು ಮತ್ತು ಸೇವೆ ಹೊರತುಪಡಿಸಿ ಬೇರೆಯಲ್ಲವೂ ಬಂದ್ ಆಗಿರಲಿದೆ.

ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ನಿಯಂತ್ರಿಸಲು ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಇಷ್ಟು ದಿನ ತಡರಾತ್ರಿವರೆಗೂ ಓಡಾಡುತ್ತಿದ್ದವರು ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕು. ತಡರಾತ್ರಿವರೆಗೂ ಕ್ಲಬ್, ಪಬ್ ಅಂತ ಸುತ್ತಾಡುತ್ತಿದ್ದವರು ಹಾಗೂ ವ್ಯಾಪಾರ- ವಹಿವಾಟು ಎಲ್ಲವೂ ರಾತ್ರಿ 10 ಗಂಟೆಯ ನಂತರ ನಡೆಯುವುದಿಲ್ಲ.

ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಕ್ರಮದಿಂದ ತುಂಬಾ ನೋವಾಗಿದೆ ಎಂದು ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರೊಬ್ಬರು ಅಸಹಾಯಕತೆ ಹೊರ ಹಾಕಿದ್ದಾರೆ.

Hassan: Homestay And Resort Owners Outrage Against Government For Night Curfew Implement in The State

ಸರ್ಕಾರ ಇಂದಿನಿಂದ ಹತ್ತು ದಿನಗಳ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆ ಸರ್ಕಾರದ ವಿರುದ್ಧ ಹಾಸನ ಜಿಲ್ಲೆ ಸಕಲೇಶಪುರದ ಹುಲಿಕಲ್ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕ ಪ್ರದೀಪ್ ವಿಡಿಯೋ ಮಾಡಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮಂಗಳವಾರದಿಂದ ನೈಟ್ ಕರ್ಫ್ಯೂ ಎಂದು ಸರ್ಕಾರ ಫೋಷಿಸಿದ ಬೆನ್ನಲ್ಲೆ ಜನರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಅದರಲ್ಲಿಯೂ ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಸರ್ಕಾರದ ಕ್ರಮಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ನೈಟ್ ಕರ್ಫ್ಯೂ ಹಿನ್ನೆಲೆ ಗ್ರಾಹಕರು ಹೋಂಸ್ಟೇ ಹಾಗೂ ರೆಸಾರ್ಟ್‌ನಲ್ಲಿ ಈಗಾಗಲೇ ಬುಕ್ಕಿಂಗ್‍ಗೆ ನೀಡಿದ್ದ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಈ ಪರಿಣಾಮ ಅನಿವಾರ್ಯವಾಗಿ ಮಾಲೀಕರು ಹಣವನ್ನು ವಾಪಸ್ ನೀಡಬೇಕಾದ ಪರಿಸ್ಥಿತಿಯಲ್ಲಿ ಇದ್ದಾರೆ. ನಮ್ಮ ಬದುಕು ಹೇಗೆ ನಡೆಸಬೇಕೆಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Hassan: Homestay And Resort Owners Outrage Against Government For Night Curfew Implement in The State

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಲೀಕರು, ಸರ್ಕಾರ ನೈಟ್ ಕರ್ಫ್ಯೂ ತಂದಿದ್ದು, ಇದರಿಂದ ತುಂಬಾ ನೋವಾಗಿದೆ. ಎರಡು ವರ್ಷದಿಂದ ಬ್ಯುಸಿನೆಸ್ ಇಲ್ಲದೆ ನಲುಗಿ ಹೋಗಿದ್ದೇವೆ. ಈಗ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಈಗಾಗಲೇ ಹೊಸ ವರ್ಷ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಅಡ್ವಾನ್ಸ್ ತೆಗೆದುಕೊಂಡು ಬುಕ್ಕಿಂಗ್ ಮಾಡಿಕೊಂಡಿದ್ದೇವೆ. ಈಗ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಹಣ ವಾಪಸ್ ಕೇಳುತ್ತಿದ್ದಾರೆ. ಆ ಹಣವನ್ನು ಸೆಲೆಬ್ರೇಷನ್ ಸಿದ್ಧತೆಗೆ ಉಪಯೋಗಿಸಿಕೊಂಡಿದ್ದೇವೆ. ಲೋನ್ ಕಟ್ಟಬೇಕು, ಕೆಲಸಗಾರರಿಗೆ ಸಂಬಳ ಕೊಡಬೇಕು. ಸರ್ಕಾರದ ಮಾರ್ಗಸೂಚಿ ನಿಯಮ ಮೀರಿ ಏನೂ ಮಾಡಲು ಆಗಲ್ಲ. ಈ ಬ್ಯುಸಿನೆಸ್ ಬಿಟ್ಟು ಬೇರೆ ಮಾಡೋಣ ಅಂದರೆ, ಇದಕ್ಕೆ ಸಾಲ ಮಾಡಿ ಬಂಡವಾಳ ಹಾಕಿದ್ದೀವಿ, ನೈಟ್ ಕರ್ಫ್ಯೂನಿಂದ ನಮಗೆ ಸಾಕಷ್ಟು ನಷ್ಟ ಉಂಟಾಗಲಿದೆ ಕೂಡಲೇ ಸರ್ಕಾರ ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಹೋಂಸ್ಟೇ ಮಾಲೀಕ ವಿಡಿಯೋ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಾರೆ, ಕೊರೊನಾದಿಂದ ಎರಡು ವರ್ಷಗಳಿಂದಲೂ ವ್ಯಾಪಾರ- ವಹಿವಾಟು ಕುಂಠಿತವಾಗಿತ್ತು, ಸದ್ಯ ಕೊರೊನಾ ದೂರವಾಗಿದ್ದು, ವ್ಯವಹಾರಗಳು ಚೇತರಿಕೆ ಕಂಡಿದ್ದವು. ಆದರೆ ಈಗ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಭೀತಿ ಶುರುವಾಗಿದ್ದು, ಸರ್ಕಾರ ಮತ್ತೆ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಸರ್ಕಾರದ ನಡೆಗೆ ಉದ್ದಿಮೆದಾರರಿಗೆ ಹೊಡೆತ ಬೀಳಲಿದ್ದು, ಸರ್ಕಾರದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ನೈಟ್ ಕರ್ಫ್ಯೂ
ಇಂದಿನಿಂದ ರಾಜ್ಯಾದ್ಯಂತ ಹತ್ತು ದಿನಗಳ ಕಾಲ‌ ನೈಟ್ ಕರ್ಫ್ಯೂ ಜಾರಿ ಹಿನ್ನಲೆ ಹಾಸನ ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದ್ದಾರೆ.

ಹತ್ತು ದಿನಗಳ ಕಾಲ ಪ್ರತಿದಿನ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದ್ದು, ವಿನಾಕಾರಣ ಯಾರೂ ಹೊರಗಡೆ ಓಡಾಡಬಾರದು. ಅನಾವಶ್ಯಕ ಓಡಾಟ ಕಂಡು ಬಂದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

Recommended Video

2021 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಾಡಿದ ಸಾಧನೆ,ದಾಖಲೆ | Oneindia Kannada

ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಡಿ.30ರಿಂದ ಜ.2ರವರೆಗೆ ಶೇ.50ರಷ್ಟು ಹೋಟೆಲ್ ಬುಕ್ಕಿಂಗ್ ಮಾಡಬೇಕು. ಡಿಜೆ, ಮ್ಯೂಸಿಕ್, ವಿಶೇಷ ಕಾರ್ಯಕ್ರಮಗಳು ನಿಷೇಧಿಸಲಾಗಿದೆ. ಹೋಂಸ್ಟೇ, ರೆಸಾರ್ಟ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪೊಲೀಸ್ ಸೂಚನೆ ಮೇರೆಗೆ ಈಗಾಗಲೇ ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಳೆದ ಏಳು ದಿನಗಳಲ್ಲಿ ಶೇ.0.15 ಪಾಸಿಟಿವಿಟಿ ದರ ಇದೆ, ಹದಿನೈದು ದಿನಗಳಲ್ಲಿ ಶೇ.0.18 ದರ ಇದೆ. ಪ್ರತಿದಿನ 3000 ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದರು.

English summary
Homestay and resort owner's expressed outrage against state government for night Curfew Implement in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X