ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಹೇಮಾವತಿ
ಹಾಸನ, ಜೂನ್ 11: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿದೆ, ಚಿಕ್ಕಮಗಳೂರು, ಹಾಸನ, ಮಂಗಳೂರು, ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಸನ ಜಿಲ್ಲೆಯ ಮಲೆನಾಡಿನಲ್ಲಿ ಭಾರಿ ವರ್ಷಧಾರೆಯಿಂದ ಹೇಮಾವತಿ ನದಿ ತುಂಬಿ ತುಳುಕುತ್ತಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಆಲೂರು ತಾಲೂಕುಗಳ ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.ಹೇಮಾವತಿ ನದಿಯ ಗರಿಷ್ಠ ಮಟ್ಟ 2922 ಅಡಿ ಇದೆ, ಇಂದು 2874 ಅಡಿಗಳಷ್ಟು ಭರ್ತಿಯಾಗಿದೆ. ಒಳಹರಿವು 9115 ಕ್ಯೂಸೆಕ್ ಇದೆ, ಹೊರಹರಿವು 200 ಕ್ಯೂಸೆಕ್ ಇದೆ. ಕಳೆದ ಎರಡು ದಿನಗಳ ನಿರಂತರ ಮಳೆಗೆ ಹೇಮಾವತಿ ತುಂಬಿ ಹರಿಯುತ್ತಿದ್ದಾಳೆ.

ಭಾಗಮಂಡಲ, ಕಾರವಾರ, ನಾಪೊಕ್ಲು, ಮುಲ್ಕಿ, ಕೋರಾ, ಕಡೂರು, ಹಾಸನ, ಬೇಗೂರು, ಕುಶಾಲನಗರ, ಅಜ್ಜಂಪುರ, ಚೆನ್ನಗಿರಿ ಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇನ್ನು 48 ಗಂಟೆಗಳ ಕಾಲ ಮುಂಗಾರು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.












Click it and Unblock the Notifications