ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರನನು ಭೇಟಿ ಮಾಡಿದ ಎಚ್‌ಡಿ ರೇವಣ್ಣ ಹೇಳಿದ್ದೇನು?

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಆಗಸ್ಟ್‌ 24: ಕಳೆದ ಎರಡು ದಿನದ ಹಿಂದೆಯಷ್ಟೇ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಾವಿರಾರು ಜನರನ್ನು ಸೇರಿಸಿ ಶಕ್ತಿಪ್ರದರ್ಶನ ಮಾಡಿದ್ದರು, ಈ ನಡುವೆ ಜೆಡಿಎಸ್ ಪಕ್ಷವನ್ನು ತೊರೆಯದಂತೆ ನಾಯಕರು ಶಿವಲಿಂಗೇಗೌಡರ ಮನವೊಲಿಕೆ ಮಾಡುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಎರಡೂವರೆ ಗಂಟೆಗೂ ಹೆಚ್ಚು ಕಾಲ ಶಿವಲಿಂಗೇಗೌಡರೊಂದಿಗೆ ಗುಪ್ತ ಮಾತುಕತೆ ನಡೆಸಿರುವ ರೇವಣ್ಣ ಪಕ್ಷ ತೊರೆಯದಂತೆ ಮನವಿ‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಜೆಡಿಎಸ್‌ನಿಂದ ಕೆಲವು ತಿಂಗಳಿನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನೇನು ಪಕ್ಷವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾತುಗಳ ಕೇಳಿ ಬರುತ್ತಿರುವ ನಡುವೆಯೇ ಮಾಜಿ ಸಚಿವ ಎಚ್.ಡಿ.‌ರೇವಣ್ಣ ಶಿವಲಿಂಗೇಗೌಡರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡ್ತಿದ್ದಾರೆ.

ಮುಂದಿನ ಚುನಾವಣೆ: ಸಿದ್ದರಾಮಯ್ಯ ಬಹುತೇಕ ಇಲ್ಲಿಂದಲೇ ಸ್ಪರ್ಧೆ?ಮುಂದಿನ ಚುನಾವಣೆ: ಸಿದ್ದರಾಮಯ್ಯ ಬಹುತೇಕ ಇಲ್ಲಿಂದಲೇ ಸ್ಪರ್ಧೆ?

ಸೋಮವಾರ ಅರಸೀಕೆರೆಯಲ್ಲಿ ಮೂರೂ ಪಕ್ಷಗಳಿಗೂ ಶಕ್ತಿಪ್ರದರ್ಶನ ತೋರಿಸಿದ್ದ ಬೆನ್ನಲ್ಲೇ, ಕೆಎಂ ಶಿವಲಿಂಗೇಗೌಡರ ತೋಟದ ಮನೆಯಲ್ಲಿಯೇ ರೇವಣ್ಣ ಭೇಟಿ ಮಾಡಿದ್ದಾರೆ. ಎರಡೂ ಗಂಟೆಗೂ ಹೆಚ್ಚು ಹೊತ್ತು ಮಾತನಾಡಿರುವ ರೇವಣ್ಣ, ಪಕ್ಷದಲ್ಲಿಯೇ ಉಳಿಯುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಶಿವಲಿಂಗೇಗೌಡರು ಜೆಡಿಎಸ್‌ನ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿರುವುದಲ್ಲದೇ, ತಾವು ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ಜೆಡಿಎಸ್ ನಾಯಕರ ಫೋಟೋ ಹಾಗೂ ಪಕ್ಷದ ಚಿಹ್ನೆಯನ್ನ ಬಳಸುತ್ತಿಲ್ಲ. ಇಷ್ಟೇ ಅಲ್ಲದೇ ಕಾಂಗ್ರೆಸ್ ನಾಯಕರನ್ನೂ ಭೇಟಿ ಮಾಡಿದ್ದು, ಕಾಂಗ್ರೆಸ್ ನಿಂದ ಟಿಕೆಟ್ ಖಚಿತ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

HD Revanna Secret Conversation with Arsikere MLA KM Shivalinge Gowda

ಇದೆಲ್ಲದರ ನಡುವೆ ರೇವಣ್ಣ ಮನಸ್ಸು ಬದಲಾವಣೆ ಮಾಡಿಕೊಂಡು, ಜೆಡಿಎಸ್‌ನಲ್ಲಿಯೇ ಉಳಿಯುವಂತೆ ಮನವೊಲಿಕೆ ಮಾಡಲಾಗುತ್ತಿದೆ. ಗೌಪ್ಯ ಮಾತುಕತೆಯಲ್ಲಿ ಎರಡು ದಿನ ಕಾಲಾವಕಾಶ ಕೊಡಿ, ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ ಎಂಬ ಮಾಹಿತಿ ಇದೆ.

ಇನ್ನು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಚ್.ಡಿ.‌ರೇವಣ್ಣ, "ನಾನು ಶಿವಲಿಂಗೇಗೌಡರ ಜೊತೆ‌ ಮಾತುಕತೆ‌ ಮಾಡಿದ್ದೇನೆ, ನಾನು ಎಲ್ಲೂ ಹೋಗುವುದಿಲ್ಲ ಎಂದು ನನ್ನ ಬಳಿ ಹೇಳಿದ್ದಾರೆ. ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿದ್ದಕ್ಕೆ ಕಾರ್ಯಕ್ರಮ ಮಾಡಿದ್ದಾರೆ, ನಾನು ಅವರ ಜೊತೆ ಮುಕ್ತವಾಗಿ ಮಾತಾಡಿದ್ದೇನೆ, ಎಲ್ಲಾ ವಿಚಾರಗಳನ್ನೂ ಚರ್ಚೆ ಮಾಡಿದ್ದೇವೆ.

ಪ್ರತಿಭಟನಾ ಸಭೆ ಮುಗಿದ ಬಳಿಕ ಎರಡು ಗಂಟೆ ಅವರ ಬಳಿ ಚರ್ಚೆ ಮಾಡಿದ್ದೇನೆ, ಅವರು ನಮ್ಮಲ್ಲಿಯೇ ಉಳಿಯುತ್ತಾರೆ ಎಂಬ ಆತ್ಮವಿಶ್ವಾಸ ಇದೆ, 2023 ರ ಚುನಾವಣೆಯಲ್ಲಿ ನಮ್ಮಲ್ಲಿಯೇ ಸ್ಪರ್ಧಿಸುತ್ತಾರೆ. ಇದುವರೆಗೂ ಯಾವ ಪಕ್ಷದವರ ಜೊತೆಗೂ ಮಾತುಕತೆ ಮಾಡಿಲ್ಲ ಎಂದೂ ನನ್ನ ಬಳಿ ಹೇಳಿದ್ದಾರೆ ಎಂದಿದ್ದಾರೆ.

HD Revanna Secret Conversation with Arsikere MLA KM Shivalinge Gowda

ಒಟ್ಟಿನಲ್ಲಿ ಜೆಡಿಎಸ್‌ನಿಂದ ಗೆದ್ದು ಮೂರು ಭಾರಿ ಶಾಸಕರಾಗಿರುವ ಕೆ.ಎಂ. ಶಿವಲಿಂಗೇಗೌಡರು, ಈ ಬಾರಿ ಜೆಡಿಎಸ್ ತೊರೆಯುವ‌ ನಿರ್ಧಾರ ಮಾಡಿರುವುದಂತೂ ಸುಳ್ಳಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಕೆ.ಎಂ. ಶಿವಲಿಂಗೇಗೌಡರನ್ನು ಉಳಿಸಿಕೊಳ್ಳುವುದಕ್ಕೆ ಜೆಡಿಎಸ್ ನಾಯಕರು ಪ್ರಯತ್ನ‌ ಮಾಡುತ್ತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರೂ ಕೂಡಾ ಕೆಎಂ ಶಿವಲಿಂಗೇಗೌಡರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಶಿವಲಿಂಗೇಗೌಡರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಕೂತೂಹಲ ಮೂಡಿಸಿದೆ.

ಕುತೂಹಲ ಮೂಡಿಸುತ್ತಿರುವ ಅಸಮಾಧಾನಿತರ ನಡೆ?
ಜೆಡಿಎಸ್‌ನ ಅಸಮಾಧಾನಿತ ಶಾಸಕರ ಪೈಕಿ ಜಿ.ಟಿ.ದೇವೇಗೌಡರು ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಕೊನೆಗಳಿಗೆಯ ತನಕವೂ ಕಾಯುವ, ಒಂದು ವೇಳೆ ಯಾವ ಪಕ್ಷಕ್ಕೂ ಹೋಗದೆ ಪಕ್ಷೇತರರಾಗಿ ಗೆಲ್ಲುವ ಸಾಮರ್ಥ್ಯವೂ ಅವರಲ್ಲಿದೆ. ಈ ನಡುವೆ ಜೆಡಿಎಸ್ ಶಾಸಕ ಒಂದು ಕಾಲದ ವೈರಿ ಸಾ.ರಾ.ಮಹೇಶ್ ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಸಂಧಾನ ಎಂಬುದು ಗೊತ್ತಿಲ್ಲ. ಹೀಗಾಗಿ ಕೊನೆಗಳಿಗೆಯಲ್ಲಿ ಜಿ.ಟಿ.ದೇವೇಗೌಡರು ಜೆಡಿಎಸ್‌ನಲ್ಲೇ ಉಳಿದರೂ ಅಚ್ಚರಿ ಪಡಬೇಕಾಗಿಲ್ಲ.

ಇನ್ನು ಅರಸೀಕರೆ ಶಾಸಕ ಶಿವಲಿಂಗೇಗೌಡರು ಜೆಡಿಎಸ್ ನಾಯಕರೊಂದಿಗೆ ಸಂಬಂಧ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನೊಂದಿಗೆ ಸಖ್ಯ ಹೊಂದಿದ್ದಾರೆ. ಸಿದ್ದರಾಮೋತ್ಸವಕ್ಕೆ ತೆರಳುವ ಕಾರ್ಯಕರ್ತರಿಗೆ ಸಹಾಯ ಮಾಡುವ ಮೂಲಕವೂ ಗಮನಸೆಳೆದಿದ್ದಾರೆ. ಆದರೆ ಅವರು ಕೂಡ ಸದ್ಯಕ್ಕೆ ಜೆಡಿಎಸ್ ಬಿಟ್ಟು ಹೊರ ಬಾರದೆ ಚುನಾವಣೆ ತನಕವೂ ಕಾಯುವ ತಂತ್ರದಲ್ಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರು ಕೂಡ ಅಸಮಾಧಾನಗೊಂಡಿದ್ದಾರೆ. ಇಷ್ಟರಲ್ಲೇ ಕಾರ್ಯಕರ್ತರ ಸಭೆ ನಡೆಸಿರುವ ಅವರ ತೀರ್ಮಾನವೂ ಚುನಾವಣೆ ಹೊತ್ತಿಗೆ ಗೊತ್ತಾಗಲಿದೆ. ಇನ್ನು ಹಲವು ನಾಯಕರು ತಾವಿರುವ ಪಕ್ಷದಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ. ಆದರೆ ಯಾರು? ಯಾವಾಗ? ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದಕ್ಕೆ ಇನ್ನೊಂದಷ್ಟು ದಿನ ಕಾದು ನೋಡಬೇಕಿದೆ.

English summary
JDS Leader HD Revanna meet Arasikere MLA KM Shivalinge Gowda on Tuesday. He said Shivalinge Gowda will not quit Party,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X