ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ಹಾಕುತ್ತಿದ್ದಾರೆ-ಮಾಜಿ ಸಚಿವ ಎಚ್.ಡಿ ರೇವಣ್ಣ
ನಮ್ಮ ಕಾರ್ಯಕರ್ತರ ಮೇಲೆ 107 ಕೇಸ್ ಹಾಕುತ್ತಿದ್ದಾರೆ, ಚುನಾವಣೆ ಸಮಯದಲ್ಲಿ ಗಲಾಟೆ ಮಾಡಿಸಿ ಜೈಲಿಗೆ ಕಳುಹಿಸುವುದು ಅಥವಾ ಗಡಿಪಾರು ಮಾಡಬೇಕು ಎಂದು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪಿಸಿದ್ದಾರೆ.
ಹಾಸನ, ಫೆಬ್ರವರಿ 25: ಕುಮಾರಸ್ವಾಮಿ ಸರ್ಕಾರ ಹೋದ ಮೇಲೆ ಹಾಸನದಲ್ಲಿ ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ನೋವು ಕೊಡುತ್ತಿದ್ದಾರೆ ನನಗೆ ಗೊತ್ತಿದೆ. 107 ಕೇಸ್ ಹಾಕುತ್ತಿದ್ದಾರೆ, ಚುನಾವಣೆ ಸಮಯದಲ್ಲಿ ಗಲಾಟೆ ಮಾಡಿಸಿ ಜೈಲಿಗೆ ಕಳುಹಿಸುವುದು ಅಥವಾ ಗಡಿಪಾರು ಮಾಡಬೇಕು ಎಂದು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ಹಾಕುತ್ತಿದ್ದಾರೆ. ನಿನ್ನೆ ಉಗನೆ ಗ್ರಾಮಕ್ಕೆ ಹೋಗಿದ್ದೆ, ಅಲ್ಲಿ ಜನ ನಮಗೆ ರಕ್ಷಣೆ ಕೊಡಿ ಎನ್ನುತ್ತಿದ್ದರು. ಈ ಕ್ಷೇತವನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡು ಯಾವ ರೀತಿ ಮಾಡಬೇಕು ಎನ್ನುವುದನ್ನು ನಮ್ಮ ಮುಖಂಡರುಗಳ ಜೊತೆ ಕುಳಿತು ಮಾತನಾಡಿ ಒಂದು ನಿರ್ಣಯಕ್ಕೆ ಬರಬೇಕಾಗುತ್ತದೆ ಎಂದರು.

ಹೆದರಿಕೊಂಡು ಓಡಿ ಹೋಗುವ ಪ್ರಶ್ನೆಯೇ ಇಲ್ಲ, ನೋಡೋಣ ಏನಾಗುತ್ತದೆ ಎಂದು. ನಮ್ಮ ಪಕ್ಷ ಏನು ತೀರ್ಮಾನ ಮಾಡುತ್ತದೆ ಎನ್ನುವುದನ್ನು ಕಾದು ನೋಡುತ್ತೇನೆ. ಕಳೆದ ಅರವತ್ತು ವರ್ಷದಿಂದ ದೇವೇ ಗೌಡರು ಈ ಮಟ್ಟಕ್ಕೆ ಬರಬೇಕಿದ್ದರೆ ನೀವೇ ಕಾರಣ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ದೇವೇಗೌಡರು ಹಾಗೂ ನಾನು ಈ ತಾಲೂಕಿಗೆ, ಜಿಲ್ಲೆಗೆ, ಹಾಸನ ನಗರಕ್ಕೆ ಏನು ಕೊಡುಗೆ ಕೊಟ್ಟಿದ್ದೇವೆ ಎನ್ನುವುದು ಒಂದು ಪರೀಕ್ಷೆ ಆಗಬೇಕಾಗುತ್ತದೆ ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಮೇಲೆ ಭ್ರಷ್ಟಾಚಾರ ಎಂದು ಹೇಳಲು ಆಗುತ್ತಿಲ್ಲ. ಕುಟುಂಬ ರಾಜಕಾರಣ ಎನ್ನುವುದು ಬಿಟ್ಟರೆ ನಮ್ಮ ಮೇಲೆ ಇನ್ನೇನು ಹೇಳುತ್ತಾರೆ. ಒಂದು ಕಡೆ ಕಾಂಗ್ರೆಸ್‌ನವರು ಬಿಜೆಪಿಯವರ ಮೇಲೆ ನಲವತ್ತು ಪರ್ಸೆಂಟ್ ಎನ್ನುತ್ತಾರೆ. ಮುಖ್ಯಮಂತ್ರಿಗಳು ಎಂಟು ಸಾವಿರ ಕೋಟಿ ಎಂದು ಸದನದಲ್ಲಿ ಕಾಂಗ್ರೆಸ್‌ನವರ ಮೇಲೆ ಆರೋಪಿಸುತ್ತಾರೆ. ಇಷ್ಟು ದಿನ ಸುಮ್ಮನಿದ್ದ ಚುನಾವಣೆ ಬಂದಾಗ ಯಾಕೆ ಕಾಂಗ್ರೆಸ್‌ನವರ ಮೇಲೆ ದೂರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಮೇಲೆ ದೂರುತ್ತಿದ್ದಾರೆ. ನಾಲ್ಕು ವರ್ಷ ಏನು ಮಾಡುತ್ತಿದ್ದರು. ಸುಪ್ರೀಂಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ನನ್ನದು ಬಿಜೆಪಿಯವರದು ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಬಿಜೆಪಿಯವರು ಯಾಕೆ ತನಿಖೆಗೆ ಹೆದರಬೇಕು. ಕೇಂದ್ರದಲ್ಲೂ, ರಾಜ್ಯದಲ್ಲೂ ಅವರದ್ದೇ ಸರ್ಕಾರ ಇದೆ. ಚುನಾವಣೆ ದೃಷ್ಟಿಯಿಂದ ಗಿಮಿಕ್ ಮಾಡುತ್ತಿದ್ದಾರೆ. ಜನ ಎಚ್ಚೆತ್ತುಕೊಳ್ಳಬೇಕು ಎಂದರು.
ಕಳಪೆ ಕಾಮಗಾರಿ ಮಾಡಿ ದುಡ್ಡು ಹೊಡೆಯುವುದು ಬಿಟ್ಟರೆ ಮತ್ತೇನೂ ಇಲ್ಲ. ಟಾರು ಹಾಕುವುದು ಮತ್ತೆ ಮಾರನೇ ಬೆಳಿಗ್ಗೆ ಇನ್ನೊಂದು ಸಾರಿ ಟಾರ್ ಹಾಕುವುದು.ಎರಡು ಸಾರಿ ಟಾರ್ ಹಾಕಿ ದುಡ್ಡು ಹೊಡೆಯುವ ಕೆಲಸ ಬಿಟ್ಟರೆ ಬೇರೆ ಏನು ಇಲ್ಲ. ಈ ದುರಾಡಳಿತಕ್ಕೆ ನಾವು ಕಡಿವಾಣ ಹಾಕಬೇಕಾಗುತ್ತದೆ. ಯಾರು ಧೃತಿಗೆಡಬೇಕಿಲ್ಲ, ಜೆಡಿಎಸ್‌ನ ಭದ್ರಕೋಟೆ ಇದು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದರು.












Click it and Unblock the Notifications