ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನಾಂಬೆ ದರ್ಶನ ಪಡೆದು ಪುನೀತರಾದ ಎಚ್.ಡಿ.ಕುಮಾರಸ್ವಾಮಿ

|
Google Oneindia Kannada News

ಹಾಸನ, ನವೆಂಬರ್ 02 : ಹಾಸನ ನಗರದ ಅಧಿದೇವತೆಯಾದ ಹಾಸನಾಂಬ ದೇವಾಲಯದ ಬಾಗಿಲು ತೆರಯಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೇವರ ದರ್ಶನದನ್ನು ಪಡೆದರು. ನವೆಂಬರ್ 9ರ ತನಕ ದೇವಾಲಯದ ಬಾಗಿಲು ತೆರೆದಿರುತ್ತದೆ.

ದೀಪಾವಳಿ ವಿಶೇಷ ಪುರವಣಿ

ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಮತ್ತು ದೇವೇಗೌಡರ ಪತ್ನಿ ಚನ್ನಮ್ಮ ಅವರು ಹಾಸನಾಂಬ ದೇವಿಯ ದರ್ಶನ ಪಡೆದರು. ಆದರೆ, ಎಚ್.ಡಿ.ರೇವಣ್ಣ ಅವರು ಮಾತ್ರ ಇಂದು ದರ್ಶನ ಪಡೆಯಲಿಲ್ಲ.

ಹಾಸನಾಂಬೆ ದರ್ಶನ : ವಿಶೇಷ ದರ್ಶನಕ್ಕೆ 1 ಸಾವಿರ ರೂ. ಟಿಕೆಟ್ಹಾಸನಾಂಬೆ ದರ್ಶನ : ವಿಶೇಷ ದರ್ಶನಕ್ಕೆ 1 ಸಾವಿರ ರೂ. ಟಿಕೆಟ್

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬ ಸದಸ್ಯರೆಲ್ಲರೂ ಹಾಸನಾಂಬ ದೇವಿಯ ಪರಮ ಭಕ್ತರು. ಪ್ರತಿವರ್ಷ ದೇವಾಲಯದ ಬಾಗಿಲು ತೆರೆದ ಬಳಿಕ ಕುಟುಂಬ ಸಮೇತರಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.

ತೆರೆದ ಹಾಸನಾಂಬ ದೇವಾಲಯ ಬಾಗಿಲು, ಭಕ್ತಾದಿಗಳ ನೂಕು-ನುಗ್ಗಲುತೆರೆದ ಹಾಸನಾಂಬ ದೇವಾಲಯ ಬಾಗಿಲು, ಭಕ್ತಾದಿಗಳ ನೂಕು-ನುಗ್ಗಲು

ನವೆಂಬರ್ 1ರ ಗುರುವಾರ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ನವೆಂಬರ್ 1 ರಿಂದ 9ರ ತನಕ ದೇವಾಲಯದ ಬಾಗಿಲು ತೆರೆದಿರುತ್ತದೆ.

ಹಾಸನಾಂಬೆ, ಹಸನ್ಮುಖಿ ಮಾತೆ ಕುರಿತ ಸ್ಥಳ ಪುರಾಣಹಾಸನಾಂಬೆ, ಹಸನ್ಮುಖಿ ಮಾತೆ ಕುರಿತ ಸ್ಥಳ ಪುರಾಣ

ಎಚ್.ಡಿ.ಕುಮಾರಸ್ವಾಮಿ ಭೇಟಿ

ಎಚ್.ಡಿ.ಕುಮಾರಸ್ವಾಮಿ ಭೇಟಿ

ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಮತ್ತು ದೇವೇಗೌಡರ ಪತ್ನಿ ಚನ್ನಮ್ಮ ಅವರು ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಆದರೆ, ಎಚ್.ಡಿ.ರೇವಣ್ಣ ಅವರು ಮಾತ್ರ ಇಂದು ದರ್ಶನ ಪಡೆಯಲಿಲ್ಲ.

ವರ್ಷಕ್ಕೊಮ್ಮೆ ಮಾತ್ರ ದರ್ಶನ

ವರ್ಷಕ್ಕೊಮ್ಮೆ ಮಾತ್ರ ದರ್ಶನ

ಹಾಸನ ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ನವೆಂಬರ್ 1 ರಂದು ಪೂಜಾವಿಧಿವಿಧಾನಗಳನ್ನು ನೆರವೇರಿಸಿ ಬಾಗಿಲು ತೆರೆಯಲಾಗಿದೆ. ನವೆಂಬರ್ 9ರಂದು ಬಾಗಿಲನ್ನು ಮುಚ್ಚಲಾಗುತ್ತದೆ.

ಭಕ್ತರು ದರ್ಶನ ಮಾಡಬಹುದು

ಭಕ್ತರು ದರ್ಶನ ಮಾಡಬಹುದು

ಪ್ರತಿ ವರ್ಷ ಅಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ದೀಪಾವಳಿಯ ಬಲಿಪಾಡ್ಯಮಿಯ ಮೂರನೇ ದಿನ ಬಾಗಿಲು ಮುಚ್ಚಲಾಗುತ್ತದೆ. ಆದ್ದರಿಂದ, ಪ್ರತಿ ವರ್ಷ 8 ಅಥವ 10 ದಿನಗಳ ಕಾಲ ಭಕ್ತರು ದೇವಿಯ ದರ್ಶನ ಮಾಡಲು ಅವಕಾಶ ಸಿಗುತ್ತದೆ.

ದೇವಿಯ ದರ್ಶನ ಪಡೆಯಿರಿ

ದೇವಿಯ ದರ್ಶನ ಪಡೆಯಿರಿ

ನವೆಂಬರ್ 1ರಂದು ಹಾಸನಾಂಬೆ ದೇವಾಲಯದ ಬಾಗಿಲು ತೆರಯಲಾಗಿದೆ. ನವೆಂಬರ್ 9ರಂದು ಬಾಗಿಲು ಮುಚ್ಚಲಾಗುತ್ತದೆ. ನವೆಂಬರ್ 1 ಮತ್ತು ನವೆಂಬರ್ 9ರಂದು ದೇವಿಯ ದರ್ಶನ ಪಡೆಯಲು ಅವಕಾಶವಿಲ್ಲ. ಆದ್ದರಿಂದ, 7 ದಿನಗಳ ಕಾಲ ದರ್ಶನ ಪಡೆಯಬಹುದಾಗಿದೆ.

English summary
Karnataka Chief Minister H.D.Kumaraswamy on November 2, 2018 visited the historical Hasanamba temple in Hassan, Karnataka. Hasanamba temple is opened for devotes only during the Ashwija month once in a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X