10 ಸಾವಿರ ಕೋಟಿ ರುಪಾಯಿ ಪರಿಹಾರ ಪ್ಯಾಕೇಜ್‌ಗೆ ಎಚ್‌ಡಿಕೆ ಆಗ್ರಹ
ಹಾಸನ, ಮೇ 14: ಕೊರೊನಾ ಲಾಕ್‌ಡೌನ್ ಪರಿಹಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೊಷಿಸಿರುವ 2200 ಕೋಟಿ ರುಪಾಯಿ ಪರಿಹಾರ ಪ್ಯಾಕೇಜ್ ಏನಕ್ಕೂ ಸಾಲುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
Recommended Video
ಶನಿವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಪರಿಹಾರವಾಗಿ ರಾಜ್ಯದಲ್ಲಿ ಕನಿಷ್ಟ ಹತ್ತು ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಹಿನ್ನೆಲೆ ಕೇಂದ್ರ ಸರ್ಕಾರ ಹಲವು ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ ಈ ಸಹಾಯ ಕೂಲಿಕಾರರು, ಮಹಿಳೆಯರು, ದಲಿತರಿಗೆ ಸಾಲದಾಗಿದೆ. ರಾಜ್ಯ ಸರ್ಕಾರದ 2200 ಕೋಟಿ ನೆರವೂ ಯಾವುದಕ್ಕೂ ಸಾಲಲ್ಲ. ಆಶಾ ಕಾರ್ಯಕರ್ತೆಯರು ಐವತ್ತು ದಿನ ಕೆಲಸ ಮಾಡಿದ್ದಾರೆ.

ಅವರಿಗೆ 3ಸಾವಿರ ಸಹಾಯ ಏನೂ ಅಲ್ಲ. ಆಶಾ ಕಾರ್ಯಕರ್ತೆ ಯರಿಗೆ ಕನಿಷ್ಟ 10 ಸಾವಿರ ಧನ ಸಹಾಯ ನೀಡಿ. ಎಲ್ಲಾ ವೃತ್ತಿಪರರಿಗೂ ನೆರವು ನೀಡಿ ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.
ಕೇಂದ್ರದಿಂದಲೂ ಕೇವಲ ಮೂಗಿಗೆ ತುಪ್ಪ ಸವರೋ ಕೆಲಸ ಆಗಿದೆ ಅಷ್ಟೇ. ನಿರ್ದಿಷ್ಟವಾಗಿ ಯಾವುದೇ ಜನರಿಗೆ ಕೇಂದ್ರದ ಪ್ಯಾಕೇಜ್ ನಿಂದ ಅನುಕೂಲ ಆಗಿಲ್ಲ. ಯುಪಿಎ ಸರ್ಕಾರದ ಮಾದರಿಯಲ್ಲಿ ಮೋದಿಯವರು ಕೂಡ ರೈತರ ಸಾಲಾ ಮನ್ನಾ ಮಾಡಲಿ. ಕೇವಲ ರೈತರ ಕಣ್ಣೊರೆಸೊ ತಂತ್ರ ಬಿಟ್ಟು ನಿಜವಾದ ಯೋಜನೆ ಜಾರಿ ಮಾಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.












Click it and Unblock the Notifications