ಹಾಸನಾಂಬೆ ದರ್ಶನಕ್ಕೆ ಕ್ಷಣಗನೆ: 13 ದಿನಗಳ ದರ್ಶನದ ಸಮಯ ಇಲ್ಲಿದೆ ನೋಡಿ

ಹಾಸನ, ಅಕ್ಟೋಬರ್ 13: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಗುರುವಾರ ಆರಂಭವಾಗುವ ಜಿಲ್ಲೆಯ ಜಾತ್ರೆ ಅಕ್ಟೋಬರ್ 27ರ ತನಕವೂ ನಡೆಯಲಿದೆ. ಹಾಸನಾಂಬೆಯ ದೇಗುಲದ ಗರ್ಭಗುಡಿಯ ಬಾಗಿಲು ಗುರುವಾರ ಮಧ್ಯಾಹ್ನ 12 ಗಂಟೆಗೆ ತೆರೆಯಲಿದೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ತಾಯಿಯ ದರ್ಶನಕ್ಕಾಗಿ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ.

ಈಗಾಗಲೇ ಹಾಸನಾಂಬೆಗೆ ವಿಶೇಷ ಅಲಂಕಾರ ಕಾರ್ಯಗಳು ನಡೆದಿದ್ದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಇಂದಿನಿಂದ ಶುರುವಾಗುವ ಜಾತ್ರೆ ಒಟ್ಟು 12 ದಿನಗಳ ಕಾಲ ನಡೆಯಲಿದ್ದು, ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ. ಅರಸು ಮನೆತನದವರು ಮಧ್ಯಾಹ್ನ 12:30ಕ್ಕೆ ದೇವಾಲಯದ ಮುಂಭಾಗ ಬಾಳೆಕಂಬ ಕಡಿಯುತ್ತಿದ್ದಂತೆ ಗರ್ಭಗುಡಿಯ ಬಾಗಿಲು ತೆಗೆಯಲಾಗುತ್ತದೆ.

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಅ.13ರಿಂದ ಚಾಲನೆ- ಸಿದ್ಧತೆ ಹೇಗಿದೆ? ಇಲ್ಲಿದೆ ಮಾಹಿತಿ
ಸಾರ್ವಜನಿಕರು ದರ್ಶನಕ್ಕೆ ಅವಕಾಶವಿಲ್ಲ

ಹಾಸನಾಂಬೆ ದೇಗುಲ ಗುರುವಾರ ತೆರೆದರೂ ಸಾರ್ಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಇಂದು ಕೇವಲ ತಾಯಿಯ ಗರ್ಭಗುಡಿ ಸ್ವಚ್ಛತೆ, ಪೂಜೆ, ನೈವೇದ್ಯಕ್ಕೆ ಮಾತ್ರ ಅವಕಾಶ ಇರಲಿದೆ. ಆದರೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಭಕ್ತರು ದೇವಿಯ ದರ್ಶನ ಪಡೆಯಬಹದಾಗಿದೆ. ಸಂಜೆ 4 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.

Hassanamba Temple will be Open from 13th October Check timings and other details

ಅಕ್ಟೋಬರ್ 15ರಿಂದ ಅಕ್ಟೋಬರ್ 25ರವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 1ರ ವರೆಗೆ , ಮಧ್ಯಾಹ್ನ 3:30ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಧ್ಯಾಹ್ನ 1ರಿಂದ 3:30ರವರೆಗಿನ ನೈವೇದ್ಯದ ಸಂದರ್ಭದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.

Hassanamba Temple will be Open from 13th October Check timings and other details

ಅಕ್ಟೋಬರ್ 25 ಮಂಗಳವಾರದಂದು ಸೂರ್ಯಗ್ರಹಣ ಇರುವುದರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮತ್ತೆ ಅ.26 ದೀಪಾವಳಿ ದಿನದಂದು ವಿಶೇಷ ದರ್ಶನಕ್ಕೆ ಅವಕಾಶ ಇರಲಿದ್ದು, ಬೆಳಗ್ಗೆ 6 ರಿಂದ ಸಂಜೆ 4ರ ತನಕ ದರ್ಶನ ನಡೆಯಲಿದೆ. ಮತ್ತೆ ರಾತ್ರಿ 11ರಿಂದ ಬೆಳಗ್ಗೆ 7ರ ತನಕ ಅವಕಾಶ ಇರಲಿದೆ. ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 27ರಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+