ರೇವಣ್ಣ ಸಿಎಂ ಆಗೋದು ಭಗವಂತನ ಇಚ್ಛೆ: ಭವಾನಿ ರೇವಣ್ಣ

ಹಾಸನ, ಮೇ 18: ತಮ್ಮ ಪತಿ ರೇವಣ್ಣ ಅವರು ಮುಖ್ಯಮಂತ್ರಿ ಹುದ್ದೆಗೆ ಏರುವುದು ಭಗವಂತನ ಇಚ್ಛೆ ಎಂದು ಹಾಸನ ಜಿಲ್ಲಾಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರು ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಈಗ ನಮ್ಮ ಕುಟುಂಬದವರೇ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಪಕ್ಕಕ್ಕೆ ಸರಿಸಿ ರೇವಣ್ಣ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಇಚ್ಛೆ ನಮ್ಮದಲ್ಲ. ಇವತ್ತಿನ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೇ ಸಿಎಂ. ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದರೆ ಒಳ್ಳೆಯದು. ನಮ್ಮ ಮನೆಯವರೇ ಸಿಎಂ ಆಗಿರುವುದರಿಂದ ಅವರೇ ಇರಲಿ ಎನ್ನುವುದು ಬಯಕೆ ಎಂದರು.

hassan revanna as chief minister bhavani revanna gods wish

ರೇವಣ್ಣ ಅವರು ಮುಖ್ಯಮಂತ್ರಿ ಆಗುವ ಸನ್ನಿವೇಶ ಬಂದಾಗ ಆಗುತ್ತಾರೆ. ಅವರು ಸಿಎಂ ಆಗುವುದು, ಡಿಸಿಎಂ ಆಗುವುದು ಭಗವಂತನ ಇಚ್ಛೆ. ಭಗವಂತನ ಇಚ್ಛೆಗೆ ನಾವು ಬದ್ಧ ಎಂದು ಭವಾನಿ ಹೇಳಿದರು.

ಮೇ 23ರಂದು ಫಲಿತಾಂಶ ಪ್ರಕಟವಾದ ಬಳಿಕ ಸಿದ್ದರಾಮಯ್ಯ ಅವರನ್ನು ಹಾಸನ ಜಿಲ್ಲೆಗೆ ಕರೆಯಿಸಿ ಭೇಟಿ ಮಾಡಿ, ಒಟ್ಟಿಗೆ ಮಾತನಾಡೋಣ ಎಂದುಕೊಂಡಿದ್ದೇವೆ. ಸಿದ್ದರಾಮಯ್ಯ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+