ಹಾಸನ ಫಲಿತಾಂಶ LIVE: ಪ್ರಜ್ವಲ್ ರೇವಣ್ಣಗೆ ಭರ್ಜರಿ ಗೆಲುವು

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕರ್ಮಭೂಮಿ ಹಾಸನದಲ್ಲಿ ಈ ಬಾರಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ಸಿನಿಂದ ಮುನಿಸಿಕೊಂಡು ಬಿಜೆಪಿ ಸೇರಿರುವ ಮಾಜಿ ಸಚಿವ ಅರಕಲಗೂಡು ಮಂಜು ಅವರು ಸವಾಲು ಹಾಕಿದ್ದಾರೆ. ಹಾಸನ ಲೋಕಸಭೆ ಚುನಾವಣೆ ಏಪ್ರಿಲ್ 18ರಂದು ಮತದಾನ ನಡೆದಿತ್ತು, ಮೇ 23ರಂದು ಅಂತಿಮ ಫಲಿತಾಂಶ ಬರಲಿದೆ. ಸದ್ಯದ ಅಪ್ಡೇಟ್ಸ್ ಇಲ್ಲಿದೆ...

ಅರಕಲಗೂಡು ಮಂಜು ವಿರುದ್ಧ ಪ್ರಜ್ವಲ್ ರೇವಣ್ಣ ಜಯ ದಾಖಲಿಸಿ, ಚೊಚ್ಚಲ ಪ್ರಯತ್ನದಲ್ಲೇ ಸಂಸದರಾಗಿ ಆಯ್ಕೆಯಾಗಿದ್ದಾರೆ.

11.08: ಕೈ ತೆನೆ ಅಭ್ಯರ್ಥಿ ಪ್ರಜ್ವಲ್​ ರೇವಣ್ಣಗೆ 86,683 ಮತಗಳಿಂದ ಮುನ್ನಡೆ,
* ಪ್ರಜ್ವಲ್​ಗೆ 3,98,402 ಮತ. ಬಿಜೆಪಿ ಅಭ್ಯರ್ಥಿ ಎ. ಮಂಜುಗೆ 3,11,719 ಮತ.

10.21: ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ 52,582 ಸಾವಿರ ಅಂತರದ ಮುನ್ನಡೆ
10.00: 4ನೇ ಸುತ್ತಿನ ಎಣಿಕೆ ಮುಕ್ತಾಯ, ಪ್ರಜ್ವಲ್ ರೇವಣ್ಣಗೆ 40,998 ಮತಗಳ ಮುನ್ನಡೆ

9.45: 4ನೇ ಸುತ್ತಿನಲ್ಲಿ ಪ್ರಜ್ವಲ್ ರೇವಣ್ಣ 36, 555 ಮತಗಳ ಮುನ್ನಡೆ.

9.20: 24619 ಮತಗಳ ಅಂತರದ ಮುನ್ನಡೆ ಪಡೆದ ಪ್ರಜ್ವಲ್ ರೇವಣ್ಣ
9.13: 21 ಸಾವಿರ ಮತಗಳ ಅಂತರ ಕಾಯ್ದುಕೊಂಡ ಪ್ರಜ್ವಲ್ ರೇವಣ್ಣ
9.09: 13 ಸಾವಿರ ಅಂತರದ ಮುನ್ನಡೆ ಪಡೆದ ಪ್ರಜ್ವಲ ರೇವಣ್ಣ

ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡ ಕ್ಷೇತ್ರದಲ್ಲಿ ಹೇಮಾವತಿ ಜೀವನದಿಯಾಗಿದೆ.

Hassan Lok Sabha (MP) Election Result 2019 trends

ಕುರುಬರು ಹೆಚ್ಚಿರುವ ಕಡೂರು ಕ್ಷೇತ್ರ ಸೇರಿರುವುದರಿ೦ದ ಜಾತಿ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಒಕ್ಕಲಿಗರು, ಲಿಂಗಾಯತರು, ಕುರುಬರು, ಎಸ್ ಟಿ, ಎಸ್ಟಿ, ಮುಸ್ಲಿಮರು ಹಾಗೂ ಇತರರು ಕ್ರಮವಾಗಿ ಇಲ್ಲಿ ಏರಿಕೆಯಿಂದ ಇಳಿಕೆ ಪ್ರಮಾಣದಲ್ಲಿ ಗುರುತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+