ಹಾಸನದಲ್ಲಿ ಜೆಡಿಎಸ್‌ನ 2ನೇ ವಿಕೆಟ್ ಪತನ; ಶಿವಲಿಂಗೇಗೌಡ ಬಳಿಕ ಮತ್ತೊಬ್ಬ ಪ್ರಭಾವಿ ಶಾಸಕ ಜೆಡಿಎಸ್‌ಗೆ ಗುಡ್‌ಬೈ!
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಾದೇಶಿಕ ಪಕ್ಷ ಜೆಡಿಎಸ್ ಬಿಟ್ಟು ಅನ್ಯ ಪಕ್ಷಗಳಿಗೆ ಸೇರ್ಪಡೆಯಾಗುತ್ತಿರುವವ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಹಾಸನ ಜಿಲ್ಲೆಯ ಇನ್ನೊಬ್ಬ ಶಾಸಕ ಜೆಡಿಎಸ್ ಪಕ್ಷವನ್ನ ತೊರೆಯಲು ಸಜ್ಜಾಗಿದ್ದಾರೆ.
ಹಾಸನ,ಫೆಬ್ರವರಿ18: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಲಿದ್ದು, ಈ ಬಾರಿ ಚುನಾವಣೆಗೂ ಮುನ್ನ ರಾಜಕೀಯ ಧ್ರುವೀಕರಣಕ್ಕೆ ಅರಕಲಗೂಡು ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಲಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಾದೇಶಿಕ ಪಕ್ಷ ಜೆಡಿಎಸ್ ಬಿಟ್ಟು ಅನ್ಯ ಪಕ್ಷಗಳಿಗೆ ಸೇರ್ಪಡೆಯಾಗುತ್ತಿರುವವ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್ ಪಕ್ಷವನ್ನ ತೊರೆಯಲು ಸಜ್ಜಾಗಿದ್ದಾರೆ. ಇನ್ನೂ ಜೆಡಿಎಸ್‌ನ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಬಿಜೆಪಿ ಮುಖಂಡ ಎ ಮಂಜು ಅವರು ರಾಜಕೀಯ ಪಕ್ಷಗಳನ್ನು ಬದಲಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಈ ಕುರಿತು ಶಾಸಕ ಎ ಟಿ ರಾಮಸ್ವಾಮಿ ಅವರು ಮಾತನಾಡಿ, ಸ್ವಯಂ ರಾಜಕೀಯ ಬೆಳವಣಿಗೆಗಾಗಿ ದೇವೇಗೌಡರನ್ನೇ ರಾಜಕೀಯವಾಗಿ ಪ್ರಶ್ನಿಸಿದರು. ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ವಿಚಾರವಾಗಿ ನ್ಯಾಯಾಲದಲ್ಲಿ ಪ್ರಶ್ನಿಸಿದ್ದರು. ದಾವೆ ಹೂಡಿದ್ದ ಮಾಜಿ ಶಾಸಕ ಎ.ಮಂಜುಗೆ ಮಣೆಹಾಕಿ, ನನ್ನನ್ನು ಬಲಿಪಶು ಮಾಡಿದರು. ಈ ವಿಚಾರ ಬಹಳ ಹಿಂದೆಯೇ ನನಗೆ ಗೊತ್ತಿತ್ತು, ಸ್ವಾರ್ಥ ರಾಜಕಾರಣಕ್ಕಾಗಿ ನನ್ನನ್ನು ಬಲಿ ಪಡೆದರು ಎಂದು ಆರೋಪಿಸಿದರು.

ಇನ್ನೂ ಮುಂದಿನ ರಾಜಕೀಯ ನಡೆ ಕುರಿತು ನಾನೆಂದೂ ಯಾವ ಪಕ್ಷಕ್ಕೆಂದು ಸ್ವಂತ ತೀರ್ಮಾನಿಸಿಲ್ಲ. ಕ್ಷೇತ್ರದ ಜನತೆ ಮತ್ತು ಕಾರ್ಯಕರ್ತರು ನನಗೆ ಏನು ಸೂಚಿಸುತ್ತಾರೋ ಅದನ್ನು ಸ್ವೀಕರಿಸುತ್ತೇನೆ ಎಂದ ಅವರು, ಯಾವ ಪಕ್ಷದಿಂದ ಸ್ಪರ್ದಿಸುತ್ತೀರಿ ಎಂಬುದಕ್ಕೆ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ.
ಇನ್ನೂ ಹಾಸನ ಜಿಲ್ಲೆಯಲ್ಲಿ ಶಿವಲಿಂಗೇಗೌಡರ ಬಳಿಕ ಇನ್ನೊಬ್ಬ ಶಾಸಕರಾದ ಎ ಟಿ ರಾಮಸ್ವಾಮಿ ಅವರು ಪಕ್ಷವನ್ನ ಬಿಡಲು ನಿರ್ಧಾರಿಸಿದ್ದು, ಎ ಟಿ ರಾಮಸ್ವಾಮಿ ವರನ್ನ ಬಿಜೆಪಿ ಪಕ್ಷಕ್ಕೆ ಕರೆತರಲು ಬಿಜೆಪಿ ನಾಯಕರು ಒಲವು ತೋರಿದ್ದು, ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸಿದ ವೇಳೆ ಎ ಟಿ ರಾಮಸ್ವಾಮಿ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಗಾಳ ಹಾಕಿದ್ದಾರೆ ಎನ್ನಲಾಗಿದೆ.












Click it and Unblock the Notifications