ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಐಪಿಗಳಿಗೆ ಹಾಸನಾಂಬೆ ದರ್ಶನ: ಶಾಸಕ ಪ್ರೀತಂ ಗೌಡಗೆ ಭಕ್ತರಿಂದ ತರಾಟೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಅಕ್ಟೋಬರ್‌ 24: ಶಾಸಕ ಪ್ರೀತಂಗೌಡ ನಿನ್ನೆ( ಅಕ್ಟೋಬರ್‌ 23) ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ದೇವರ ದರ್ಶನ ಪಡೆದಿದ್ದಾರೆ. ದೇವಾಲಯಕ್ಕೆ ಬಂದ ಶಾಸಕ ಪ್ರೀತಂ ಗೌಡ ಅವರನ್ನು ಭಕ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ದೇವಸ್ಥಾನದಿಂದ ಪ್ರೀತಂ ಗೌಡ ಹೊರಗೆ ಬರುತ್ತಿದ್ದ ವೇಳೆ ದೇವಾಲಯದ ಮುಖ್ಯದ್ವಾರದಲ್ಲಿ ಶಾಸಕರನ್ನು ತಡೆದ ಭಕ್ತಾಧಿಗಳು ಆಕ್ರೋಶ ಹೊರಹಾಕಿದ್ದಾರೆ. ದೇವರ ದರ್ಶನಕ್ಕೆ ವಿಐಪಿಗಳನ್ನು ಮಾತ್ರ ಬಿಡಲಾಗುತ್ತಿದೆ. ನಾವೇನು ಮಾಡಬೇಕು..? ನಾವು ಇಲ್ಲಿಯೇ ನಿಲ್ಲಬೇಕಾ..? ನೀವು ರೇವಣ್ಣ ಎಷ್ಟು ಜನರನ್ನು ಒಳಗೆ ಕಳುಹಿಸುತ್ತಿದ್ದೀರಾ..? ನಾವು ನೋಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Breaking: ಮಧ್ಯಪ್ರದೇಶದ ರೇವಾದಲ್ಲಿ ಬಸ್ ಪಲ್ಟಿ: 14 ಸಾವು, 35 ಮಂದಿಗೆ ಗಾಯBreaking: ಮಧ್ಯಪ್ರದೇಶದ ರೇವಾದಲ್ಲಿ ಬಸ್ ಪಲ್ಟಿ: 14 ಸಾವು, 35 ಮಂದಿಗೆ ಗಾಯ

ಭಕ್ತರ ಪ್ರಶ್ನೆಗೆ ತಬ್ಬಿಬ್ಬಾದ ಶಾಸಕ ಪ್ರೀತಂಗೌಡ, ನಾನು ಯಾರನ್ನೂ ಒಳಗೆ ಬಿಟ್ಟಿಲ್ಲ, ದೇವಾಲಯದಲ್ಲಿ ನನ್ನ ಕೈಲಾದ ಕೆಲಸ‌ ಮಾಡಿದ್ದೀನಿ ಎಂದು ಹೇಳಿ ಹೊರಟು ಹೋಗಿದ್ದಾರೆ. ಬಳಿಕ ಶಾಸಕರು ಪೊಲೀಸರನ್ನು ಕರೆದು ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.

 Hasanamba Devotees Take Class To MLA Preetham Gowda

ಇನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ನಿನ್ನೆ ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. ಅನಿತಾ ಕುಮಾರಸ್ವಾಮಿ ದೇವಾಲಯದ ಒಳೆಗೆ ತೆರಳಿದಾಗ ಶಾಸಕ ಪ್ರೀತಂ ಗೌಡ ಗರ್ಭಗುಡಿಯ ಹೊರಭಾಗದಲ್ಲಿ ಕುಳಿತಿದ್ದರು. ಅನಿತಾ ಕುಮಾರಸ್ವಾಮಿ ಅವರು ಬರುತ್ತಿದ್ದಂತೆ ಬರುತ್ತಿದ್ದಂತೆ ಕೈಮುಗಿದು ಮಾತನಾಡಿಸಿದ ಶಾಸಕ ಪ್ರೀತಂ ಗೌಡ ಅಕ್ಕ ಚೆನ್ನಾಗಿದ್ದಿರಾ..? ಎಂದು ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ದೇವಾಲಯದ ಗರ್ಭಗುಡಿಯೊಳಗೆ ತೆರಳಿದ ಅನಿತಾ ಕುಮಾರಸ್ವಾಮಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಅವರ ಕುಟುಂಬದವರ ಜೊತೆ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ್ದರು. ನಾಲ್ಕನೇ ಬಾರಿ ಹಾಸನಾಂಬೆ ದೇವರ ದರ್ಶನ ಪಡೆದ ಎಚ್.ಡಿ.ರೇವಣ್ಣ, ದೇವೇಗೌಡರು, ಚೆನ್ನಮ್ಮ, ರೇವಣ್ಣ, ಭವಾನಿ, ಸೂರಜ್, ಪ್ರಜ್ವಲ್, ಕುಮಾರಸ್ವಾಮಿ, ಅನಿತಾ, ನಿಖಿಲ್ ಸೇರಿದಂತೆ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಅಲ್ಲದೇ ಇದೇ ವಿಧಾನದಲ್ಲಿ ಪೂಜೆ ಮಾಡಿ ಎಂದು ಅರ್ಚಕರಿಗೆ ತಿಳಿಸಿದ್ದಾರೆ. ಬಳಿಕ ಎಚ್.ಡಿ.ರೇವಣ್ಣ ಹಾಗೂ ಕುಪೇಂದ್ರ ರೆಡ್ಡಿ ಸರತಿ ಸಾಲಿನಲ್ಲಿ ಬಂದು ಸಿದ್ದೇಶ್ವರ ಸ್ವಾಮಿ ದೇವರ ದರ್ಶನ ಪಡೆದಿದ್ದಾರೆ.

English summary
Hasanamba devotees take class to mla preetham gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X