ಬೇಲೂರಿನಲ್ಲಿ ಹನುಮ ಜಯಂತಿ: ಬಿಗಿ ಪೊಲೀಸ್ ಬಂದೋಬಸ್ತ್
ಹಾಸನ, ಡಿಸೆಂಬರ್ 16: ಬೇಲೂರು ಪಟ್ಟಣದಲ್ಲಿ ಶನಿವಾರ ಹನುಮ ಜಯಂತಿ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೇಲೂರಿನಲ್ಲಿ ಪ್ರತಿ ವರ್ಷವೂ ಕೂಡ ಹನುಮ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಬಾರಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಜ್ಯೋತಿ ವೈದ್ಯನಾಥನ್ ಮೊಕ್ಕಾಂ, 2 ಕೆಎಸ್ ಆರ್ ಪಿ, 3 ಡಿಎಆರ್ ತುಕಡಿ ಸೇರಿದಂದೆ 200 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಬೆಳಗ್ಗೆ ಪಟ್ಟಣದ ಆಂಜನೇಯ ದೇಗುಲದಲ್ಲಿ ಪೂಜೆ ಕಾರ್ಯಕ್ರಮ ನೆರವೇರಲಿದೆ. ಮಧ್ಯಾಹ್ನ ಮಾಲಾಧಾರಿಗಳಿಂದ ರಸ್ತೆಯಲ್ಲಿ ಮೆರವಣಿಗೆ ನಡೆಯಲಿದೆ. ಕೆಲ ದಿನಗಳ ಹಿಂದೆ ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ ಘರ್ಷಣೆ ನಡೆದಿರುವ ಕಾರಣ ಬೇಲೂರಿನಲ್ಲಿಯೂ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.












Click it and Unblock the Notifications