ಅತಿಥಿಗಳಿಗೆ ಹಣ್ಣುಗಳ ಬದಲಾಗಿ ತರಕಾರಿಗಳನ್ನ ನೀಡಿ: ಸಿಂಧೂರಿ

Posted By:
Subscribe to Oneindia Kannada
   ಅತಿಥಿಗಳಿಗೆ ಹಣ್ಣುಗಳ ಬದಲಾಗಿ ತರಕಾರಿಗಳನ್ನ ನೀಡಿ: ಸಿಂಧೂರಿ

   ಹಾಸನ, ಸೆಪ್ಟೆಂಬರ್ 08 : ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಅತಿಥಿ ಗಣ್ಯರಿಗೆ ಹಣ್ಣುಗಳ ಬುಟ್ಟಿ ಬದಲಾಗಿ ಹಾಸನದ ಪ್ರಚಲಿತ ತರಕಾರಿಗಳ ಬುಟ್ಟಿಯನ್ನು ನೀಡಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ತಿಳಿಸಿದ್ದಾರೆ.

   ಮಸ್ತಕಾಭಿಷೇಕ ತಯಾರಿ ವೀಕ್ಷಿಸಿದ ಡಿಸಿ ರೋಹಿಣಿ ಸಿಂಧೂರಿ

   ಗ್ರೀನ್ ಇನ್ನೋವೇಷನ್ ಸೆಂಟರ್ ಇವರ ವತಿಯಿಂದ ಹೊನ್ನಾವರ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಆಲೂಗೆಡ್ಡೆ ಬೇಸಾಯದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ. " ಹಾಸನದ ಪ್ರಚಲಿತ ತರಕಾರಿಗಳನಿಟ್ಟು ಕೊಡುವುದರಿಂದ ಜಿಲ್ಲೆಯ ತರಕಾರಿಗಳ ಪ್ರಾಮುಖ್ಯತೆ ಜತೆಗೆ ಸುಸ್ಥಿರ ಆಲೂಗೆಡ್ಡೆ ಬೇಸಾಯದ ವಿಧಾನಗಳನ್ನು ಹಾಗೂ ವಿವಿಧ ತಂತ್ರಜ್ಞಾನಗಳ ಬಳಕೆಯ ಕುರಿತು ಹೆಚ್ಚು ಪ್ರಚಾರಗೊಳಿಸಿ" ಎಂದು ಹೇಳಿದರು.

   Give vegetables instead of Fruits to guests says Hassan DC Rohini Sindhuri

   ರೈತರ ಸಮಸ್ಯೆಯನ್ನು ಆಲಿಸಿ ಆಲೂಗಡ್ಡೆ ಬೇಸಾಯದ ಕ್ರಮಗಳನ್ನು ಅದಷ್ಟು ಪ್ರಚಾರಗೊಳಿಸಿ, ಅಂತರಾಷ್ಟ್ರೀಯ ಮಟ್ಟದ ಕಂಪನಿಗಳು ಹಾಸನ ಜಿಲ್ಲೆಯಿಂದ ಆಲೂಗಡ್ಡೆ ಕೊಳ್ಳಲು ಬರುವಂತೆ ಮಾಡಿ ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದರು.

   ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿಷೇಕದ ವಿಶೇಷ ಅಧಿಕಾರಿಗಳಾದ ವರಪ್ರಸಾದ್ ರೆಡ್ಡಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಚಲಿತದಲ್ಲಿದ್ದು, ಈ ಬೇಸಾಯದ ಕ್ರಮಗಳನ್ನು ಜಾಲತಾಣಗಳ ಮೂಲಕ ರೈತರಿಗೆ ನೆರವಾಗುವ ರೀತಿಯಲ್ಲಿ ಪ್ರಚಾರಗೊಳಿಸಿ ಎಂದು ಸೂಚನೆ ನೀಡಿದರು.

   Give vegetables instead of Fruits to guests says Hassan DC Rohini Sindhuri

   ಗ್ರೀನ್ ಇನ್ನೋವೇಷನ್ ಸೆಂಟರ್‍ ನ ಮುಖ್ಯಸ್ಥ ಡಾ. ಮಾನ್ಸ್ ಹೆರಮಾನ್ ಲಾಂಟಿಂಗ್ ಮಾತನಾಡಿ, ಸುಸ್ಥಿರ ಆಲೂಗಡ್ಡೆ ಬೇಸಾಯದ ಯೋಜನೆಯನ್ನು ಹಾಸನದಲ್ಲಿ ಒಟ್ಟು 60 ಹಳ್ಳಿಗಳಲ್ಲಿ ಪ್ರಾರಂಭಿಸಲಾಗಿದೆ.

   25 ರೈತರ ಗುಂಪುಗಳನ್ನು ಮಾಡಿದ್ದು ಈ ತಂತ್ರಜ್ಞಾನದ ಕುರಿತು ತರಬೇತಿಯನ್ನು ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನು ರೈತರು ಪಡೆಯಬೇಕೆಂದು ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Give vegetables instead of Fruits to guests who participating in the Mahamastakabhisheka-2017, said Hassan DC Rohini Sindhuri on Sept 8th.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ