ಅರಸೀಕೆರೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಧಗಧಗಿಸಿದ ಫರ್ನಿಚರ್ ಗೋಡೋನ್
ಹಾಸನ, ಮೇ, 25: ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಹೊಯ್ಸಳ ನಗರದಲ್ಲಿನ ಫರ್ನಿಚರ್ ಗೋಡೋನ್‌ಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಇದರ ಪರಿಣಾಮ ಗೋಡಾನ್‌ನಲ್ಲಿದ್ದ ಪೀಠೋಪಕರಣಗಳು ಬೆಂಕಿಗಾಹುತಿ ಆಗಿವೆ.
ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಗೋಡಾನ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಂತರ ಆಗಮಿಸಿದ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಬೈಕ್‌ಗೆ ಬೆಂಜಿ ಹಚ್ಚಿ ವಿಕೃತಿ ಮೆರೆದ ದುಷ್ಕರ್ಮಿಗಳು
ಇನ್ನು ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್‌ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ರಾತ್ರೋ ರಾತ್ರಿ ದುಷ್ಕರ್ಮಿಗಳು ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ 200-ಎನ್.ಎಸ್ ಬೈಕ್‌ಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು ಎಂದು ತಿಳಿದುಬಂದಿತ್ತು. ನೋಡ ನೋಡುತ್ತಿದ್ದಂತೆ ಸಂಪೂರ್ಣ ಬೈಕ್ ಹೊತ್ತಿ ಉರಿದಿದ್ದು, ಇದರ ಪರಿಣಾಮವಾಗಿ ಸುತ್ತಮುತ್ತಲಿನ ಮನೆಗಳಿಗೂ ಹೊಗೆ ಆವರಿಸಿಕೊಂಡಿತ್ತು. ಅಲ್ಲದೇ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೂ ಬೆಂಕಿ ತಗುಲಿತ್ತು.
ಇನ್ನು ಹುಬ್ಬಳ್ಳಿಯ ನವನಗರದಲ್ಲಿ ಇಂತಹದೊಂದು ಘಟನೆ ನಡೆದಿತ್ತು. ವೈಯಕ್ತಿಕ ಕಾರಣಕ್ಕೆ ಕೃತ್ಯ ನಡೆದಿದೆ ಎಂದು ಶಂಕೆ ವ್ಯಕ್ತವಾಗಿತ್ತು. ಆದರೂ ಪೊಲೀಸ್ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಹೇಳಲಾಗಿತ್ತು.
ಸೈಟ್ ಹಣ ಹಿಂದಿರುಗಿಸಲು ಆದೇಶ
ಹುಬ್ಬಳ್ಳಿಯ ಸಗೈ ರಾಜದಾಸ್, ಶೈಲಜಾ ಹಣಗಿ, ಶಕುಂತಲಾ ರಾವಲ್ ಹಾಗೂ ನಿಂಗಪ್ಪ ಮುಳಗುಂದ ಮತ್ತು ಪರಪ್ಪ ದಂಡಿನ್ ಎನ್ನುವವರು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಜೊತೆ ಅವರು ಈಟಿಗಟ್ಟಿ ಗ್ರಾಮದಲ್ಲಿ ಮಾಡುತ್ತಿದ್ದ ಗಾಮನಗಟ್ಟಿ ಲೇಔಟನ್ ಪ್ಲಾಟ್ ನಂ.29,44,47 ಮತ್ತು 45ರ ಖರೀದಿಗೆ 07/02/2014ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರತಿಯೊಬ್ಬರು ಕಂತುಗಳಲ್ಲಿ ತಲಾ 5,24,000 ರೂಪಾಯಿ, 3,15,500 ರೂಪಾಯಿ ಹಾಗೂ 3,80,000 ರೂಪಾಯಿಗಳನ್ನು ಮುಂಗಡವಾಗಿ ಕಟ್ಟಿದ್ದರು.
ಹಲವಾರು ವರ್ಷಗಳಾದರೂ ಎದುರುದಾರರು ಲೇಔಟ್ ಕೆಲಸ ಪೂರ್ತಿಗೊಳಿಸಿರಲಿಲ್ಲ. ಅಲ್ಲದೇ ಒಪ್ಪಂದದಂತೆ ದೂರುದಾರರಿಗೆ ಆ ಸೈಟುಗಳ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಪೃಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಎದುರುದಾರ ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನವರು ವಕೀಲರ ಮೂಲಕ ಹಾಜರಾಗಿ ಲೇಔಟ್ ಮಾಡಲು ಉದ್ದೇಶಿಸಿದ್ದ ಇಟಿಗಟ್ಟಿ ಗ್ರಾಮದ ಬ್ಲಾಕ್ ನಂ.22/1 ಜಮೀನನ್ನು ಏಮ್ಸ್ ಸ್ಥಾಪನೆಗಾಗಿ ಸರ್ಕಾರದವರು ಭೂ ಸ್ವಾಧೀನ ಮಾಡಿಕೊಂಡಿದ್ದಾರೆ. ಕಾರಣ ಲೇಔಟ್ ಕೆಲಸ ಪೂರ್ಣಗೊಳಿಸಿಸಲಾಗಿಲ್ಲ. ಈ ಬಗ್ಗೆ ತಮಗೆ ಸರ್ಕಾರದ ಪರಿಹಾರವು ಬಂದಿಲ್ಲ ಅಂತಾ ಹೇಳಿ ಎಲ್ಲಾ ದೂರುದಾರರ ಹಣ ವಾಪಸ್ ಕೊಡಲು ತಯಾರು ಇರುವುದಾಗಿ ಹೇಳಿ ಆಕ್ಷೇಪಣೆ ಹಾಕಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಸಿ ಹಿರೇಮಠ ಅವರು 2014ರಲ್ಲಿ ಪ್ರತಿಯೊಬ್ಬ ದೂರುದಾರನಿಂದ ಲಕ್ಷಗಟ್ಟಲೇ ಹಣ ಪಡೆದುಕೊಂಡು ಅದನ್ನು ಲೇಔಟ್ ನಿರ್ಮಾಣದ ತಮ್ಮ ಕೆಲಸಕ್ಕೆ ಎದುರುದಾರರು ಉಪಯೋಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications