ಸಕಲೇಶಪುರದಲ್ಲಿ ಮಗಳಿಗೆ ಸುತ್ತಿಗೆಯಿಂದ ಹೊಡೆದ ಪಾಪಿ ತಂದೆ
ಹಾಸನ, ನವೆಂಬರ್ 5: ಮಗಳಿಗೆ ಸುತ್ತಿಗೆಯಿಂದ ಹೊಡೆದ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಚಂಪಕನಗರದಲ್ಲಿ ನಡೆದಿದೆ.
ಪ್ರಶಾಂತ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಕುಡಿದ ಮತ್ತಿನಲ್ಲಿ ಸುತ್ತಿಗೆ ಹಿಡಿದು, ನಾನು ಮಯ್ಯೂರ, ನಾನಿರುವುದೇ ನಿಮಗಾಗಿ, ಕೆಜಿಎಸಫ್ ಸಿನಿಮಾ ನೋಡಿದ್ದೀರಾ ಎಂದು ಹೇಳುತ್ತಾ ಬಂದು ಮಗಳಿಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.
ಆತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಬರೀ ಹೆಣ್ಣು ಮಕ್ಕಳೇ ಹುಟ್ಟಿದ್ದಾರೆ ಎಂದು ಕುಡಿದು ಬಂದು ಹೆಂಡತಿ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ನಡೆಯುವಾಗ ಪತ್ನಿ ಬಿಡಿಸಲು ಯತ್ನಿಸಿದರೂ ಸುಮ್ಮನಾಗದೇ ಸುತ್ತಿಗೆಯಿಂದ ಬಾರಿಸಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲ್ಲೆಗೊಳಗಾದ ಮಗಳ ಕೈಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications