ಹಾಸನದಲ್ಲಿ ಪ್ರತಿಯೊಬ್ಬರೂ ದೇವೇಗೌಡರ ಹೆಸರೇಳಿ ರಾಜಕಾರಣ ಮಾಡುತ್ತಿದ್ದಾರೆ: ಪ್ರಜ್ವಲ್ ರೇವಣ್ಣ
ಹಾಸನ, ಸೆಪ್ಟೆಂಬರ್, 28: ಪ್ರೀತಂ ಗೌಡ ವಿರುದ್ಧ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಎಲ್ಲರೂ ದೇವೇಗೌಡರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. "ಹಳ್ಳಿ ಮೈಸೂರಿನಲ್ಲಿ ಅವರ ಅಪ್ಪ ಇಂಜಿನಿಯರ್ ಆಗಿದ್ದರು. ಅವರಿಗೆ ಬಿಬಿಎಂಪಿ ತೋರಿಸಿಕೊಟ್ಟಿದ್ದು ನಮ್ಮ ತಂದೆ. ಇವತ್ತು ಅವರು ಬಿಬಿಎಂಪಿಯಲ್ಲಿ ಹಣ ಮಾಡಿಕೊಂಡು ಎರಡು ಮಕ್ಕಳನ್ನು ಸಾಕಿರುವುದಕ್ಕೆ ಇವತ್ತು ಇವನು ಎಗರಾಡುತ್ತಿದ್ದಾನೆ. ಇದನ್ನು ಮರೆಯುವುದಕ್ಕೆ ಹೋಗಬಾರದು. ಅವರ ಕುಟುಂಬಕ್ಕೂ ನಮ್ಮ ಕುಟುಂಬದಿಂದ ಸಹಕಾರ ಆಗಿದೆ. ಆಶೀರ್ವಾದ ದೊರೆತಿದೆ, ಅದನ್ನು ಮೊದಲು ನೆನಪಿಸಿಕೊಳ್ಳಬೇಕು ಅವರು," ಎಂದು ಏಕವಚನದಲ್ಲಿ ನಿಂದಿಸಿದ್ದಾರೆ.
ಶಾಸಕ ಪ್ರೀತಂಗೌಡ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು ಅವರು ಏನಾದರೂ ಚಾಲೆಂಜ್ ಹಾಕಿಕೊಳ್ಳಲಿ. ಅವರ ವೋಟಿನಿಂದ ನಾನು ಗೆದ್ದಿಲ್ಲ, ಸಾರ್ವಜನಿಕರು ನೀಡಿದ ಮತಗಳಿಂದ ಗೆದ್ದಿದ್ದೇನೆ ಎಂದರು.

ಮೊದಲು ಅವರು ಗೆಲ್ಲುವುದನ್ನು ನೋಡಿಕೊಳ್ಳುವುದಕ್ಕೆ ಹೇಳಿ. ಆಮೇಲೆ ಎಂಪಿ ಚುನಾವಣೆ ಬರುತ್ತದೆ. ವಿಧಾನಸಭೆ ಚುನಾವಣೆ ಆಗಿ, ಒಂದು ವರ್ಷ ಆದ ಮೇಲೆ ಎಂಪಿ ಚುನಾವಣೆ ಬರುತ್ತದೆ. ಸೋತ ಮೇಲೆ ನನ್ನ ವಿರುದ್ಧ ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲಿ. ಅವರು ಈಗಾಗಲೇ ಸೋಲಿಸುತ್ತೇನೆ ಅಂದುಕೊಂಡಿದ್ದಾರೆ. ಮೊದಲು ಎಂಪಿ ಚುನಾವಣೆಯ ಕನಸು ಬಿಡಬೇಕು. ಚುನಾವಣೆಯ ನಂತರ ಹಣ ಮಾಡಿಕೊಂಡು ಬೆಂಗಳೂರಿಗೆ ಹೋಗಬಹುದು ಎಂದು ಶಾಸಕ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಹೊಗೆ ಆಡುವ ಕಡೆ ಬೆಂಕಿ ಇರುತ್ತದೆ
ಡಾ. ಸೂರಜ್ ರೇವಣ್ಣ ದೊಡ್ಮನೆ ಹುಡುಗ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ 50 % ಪೇ ಎಂಎಲ್‌ಎ ಪ್ರೀತಂಗೌಡ ವಿರುದ್ಧ ಪೋಸ್ಟ್ ವಿಚಾರವಾಗಿ ಮತಾನಾಡಿದ್ದು, ಈ ರೀತಿ ಸಾವಿರ ಇದೆ, ಅದಕ್ಕೆಲ್ಲಾ ನಾವು ಹೊಣೆ ಆಗುವುದಿಲ್ಲ. ಯಾವುದಾದರೂ ಅಕೌಂಟ್ ಕ್ರಿಯೆಟ್ ಮಾಡಿ ಮಾಹಿತಿ ಹಾಕಿದ್ದರೆ ಅದು ನನ್ನ ತಲೆಗೆ ಬರುವುದಿಲ್ಲ. ಅಭಿಮಾನಿಗಳು ಏನೇನು ಮಾಡಿಕೊಂಡಿರುತ್ತಾರೆಯೋ ಅದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಅಫಿಶೀಯಲ್ ಪೇಜ್‌ನಲ್ಲಿ ಅಪ್‌ಲೋಡ್ ಆಗಿದ್ದರೆ ನಾನು ಪ್ರತಿಕ್ರಿಯಿಸುತ್ತಿದ್ದೆ. ಸುಮ್ಮನೆ ಯಾರು ಬರೆಯಲ್ಲ, ಎಲ್ಲಿ ಹೊಗೆ ಆಡುತ್ತಿರುತ್ತದೆಯೋ ಅಲ್ಲಿ ಬೆಂಕಿ ಇರುತ್ತದೆ ಎಂದು ಕಿಡಿಕಾರಿದರು.

ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿನ ಗಣಪತಿ ಆಸ್ಥಾನ ಮಂಟಪದಲ್ಲಿ ಮಾತನಾಡಿದ ಅವರು, ಅವರೆಲ್ಲ ಏನಾದರೂ ಸವಾಲು ಹಾಕಿಕೊಳ್ಳಲಿ. ಅವರ ವೋಟಿನಿಂದ ನಾನು ಗೆದ್ದಿಲ್ಲ. ನಾನು ಗೆದ್ದಿರುವುದು ಜನರ ವೋಟಿನಿಂದ ಎನ್ನುವ ಮೂಲಕ ಹರಿಹಾಯ್ದಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿ ನಾವು ಹಾಸನದಲ್ಲೇ ಇರುತ್ತೇವೆ ಎಂದು ಹೇಳಿದರು.












Click it and Unblock the Notifications