ಹಾಸನ: ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕೆಂದು ವಿಡಿಯೋ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ
Hassan
oi-Veeresha H G
By ಹಾಸನ ಪ್ರತಿನಿಧಿ
ಹಾಸನ, ಅಕ್ಟೋಬರ್ 26: ನನ್ನನ್ನು ಸುಟ್ಟರೆ ಬೂದಿ ಆಗುತ್ತೇನೆ, ಮಣ್ಣಲ್ಲಿ ಹೂತರೆ ದೇಹ ಕೊಳೆತು ಹೋಗುತ್ತದೆ. ಹಾಗಾಗಿ ನನ್ನ ಅಂಗಾಂಗಗಳನ್ನು ದಾನ ಮಾಡಿ. ನನ್ನ ಅಂತ್ಯಸಂಸ್ಕಾರವನ್ನು ಸಿಎಂ, ಶಿಕ್ಷಣ ಸಚಿವರು, ನಿರ್ಮಾಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನೆರವೇರಿಸಬೇಕೆಂದು ಸಾಯುವ ಮುನ್ನ ವಿಡಿಯೋ ಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ರಾಜೀವ್ ಕಾಲೇಜಿನಲ್ಲಿ ನಡೆದಿದೆ.
ಸಂದೇಶ್ ಆತ್ಮಹತ್ಯೆಗೆ ಶರಣಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಇಂದಿನ ಶಿಕ್ಷಣ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕೆಂದು ಸಂದೇಶ್ ಮನವಿ ಮಾಡಿಕೊಂಡಿದ್ದಾನೆ.
ವಿಡಿಯೋ ತುಂಬೆಲ್ಲ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಯುವಕ ಆತ್ಮಹತ್ಯೆಗೆ ಮುನ್ನ ವೀಡಿಯೋ ಮಾಡಿ ಒತ್ತಾಯಿಸಿದ್ದಾನೆ. ಆತ್ಮಹತ್ಯೆ ಮುನ್ನ ವಿಡಿಯೋವನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾನೆ.
"ವಿಡಿಯೋದಲ್ಲಿ ಸ್ನೇಹಿತೆಯ ನೀಟ್ ಪರೀಕ್ಷೆಗೆ ಒಳ್ಳೆಯದಾಗಲಿ. ನಿನ್ನ ಗುರಿಗಳು ಎಲ್ಲವೂ ಸಾಕಾರವಾಗಲಿ ಎಂದು ಹಾರೈಸುತ್ತೇನೆ. ನಾನು ನಿನ್ನನ್ನು ಕೇವಲ ಸ್ನೇಹಿತೆಯಾಗಿ ನೋಡಿಲ್ಲ. ನಿನ್ನನ್ನು ಕುಟುಂಬದ ಸದಸ್ಯೆಯಂತೆ ನೋಡಿಕೊಂಡಿದ್ದೇನೆ. ಮುಂದೆ ನನ್ನ ತಂದೆ- ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನ ಮೇಲಿದೆ. ನಿನ್ನ ಅಪ್ಪ- ಅಮ್ಮನ ರೀತಿಯಲ್ಲಿ ನೋಡಿಕೊಳ್ಳುತ್ತೀಯಾ ಎಂದು ತಿಳಿದುಕೊಳ್ಳುತ್ತೇನೆ," ಎಂದು ಹೇಳಿದ್ದಾನೆ.
"ನನ್ನ ಅಂತ್ಯಕ್ರಿಯೆ ಬಳಿಕ ಅಪ್ಪ- ಅಮ್ಮ ನೀವೂ ಧೈರ್ಯ ಕಳೆದುಕೊಳ್ಳದೇ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಒಂದೆರಡು ಅನಾಥ ಮಕ್ಕಳನ್ನು ತಂದು ಮನೆಯಲ್ಲಿ ಸಾಕಿ. ಆ ಮಕ್ಕಳಲ್ಲಿ ನಾನು ಜೀವಂತವಾಗಿರುತ್ತೇನೆ. ಬದುಕಿದ್ದ ವ್ಯಕ್ತಿ ಸತ್ತರೆ ಯಾರೂ ನೆನಪು ಮಾಡಿಕೊಳ್ಳಲ್ಲ. ಬದಲಾವಣೆ ತಂದರೆ ಮಾತ್ರ ಸಮಾಜ ಆತನನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ನಿಮ್ಮ ಕನಸನ್ನು ನಾನು ಈಡೇರಿಸಲು ಆಗುತ್ತಿಲ್ಲ ಎಂಬುದನ್ನು ಈ ವಿಡಿಯೋ ಮೂಲಕ ನನ್ನ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದೇನೆ," ಎಂದು ತನ್ನ ಅಪ್ಪ- ಅಮ್ಮನ ಹಾಗೂ ಸ್ನೇಹಿತೆಯ ಬಗ್ಗೆ ಹೇಳಿಕೊಂಡಿದ್ದಾನೆ.
ನನ್ನ ಅಂತ್ಯಕ್ರಿಯೆಯಾದ ಬಳಿಕ ನನ್ನ ಆಸೆಯಂತೆ ಅನಾಥ ಮಕ್ಕಳನ್ನು ಬೆಳೆಸಿ. ನೀವು ಇಷ್ಟು ದಿನ ಕಷ್ಟಪಟ್ಟು ದುಡಿದಿದ್ದೀರಿ. ಇಂದು ನೀವೂ ತೋರಿಸಿದ ಪ್ರೀತಿಯನ್ನು ನೆನಪು ಮಾಡಿಕೊಂಡರೆ ನನ್ನ ಕಣ್ಣುಗಳು ತುಂಬುತ್ತವೆ. ನನ್ನ ಸಾವಿನ ಬಳಿಕ ನೀವು ಹೊಸ ಜೀವನ ಕಟ್ಟಿಕೊಳ್ಳಿ. ಪ್ರತಿಯೊಂದು ಬದಲಾವಣೆಗೂ ಬುನಾದಿ ಹಾಕಬೇಕಾಗುತ್ತದೆ. ಇಂದು ಆ ಬುನಾದಿಯನ್ನು ನಾನು ಹಾಕುತ್ತಿದ್ದೇನೆ. ಆ ಬದಲಾವಣೆಗೆ ನಾನು ಕಾರಣ ಆಗಿದ್ದೇನೆ ಎಂಬ ಆತ್ಮತೃಪ್ತಿ ನನಗಿರುತ್ತದೆ," ಎಂದು ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ಹೇಳಿದ್ದಾನೆ.
"ಪ್ರತಿ ಜನ್ಮದಲ್ಲೂ ಇದೇ ನಾಡಿನಲ್ಲಿ ಹುಟ್ಟಿಸುವಂತೆ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮುಂದಿನ ಜನ್ಮದಲ್ಲಿಯೂ ನೀವೇ ನನ್ನ ಅಪ್ಪ- ಅಮ್ಮ ಆಗಿರಲಿ ಎಂದು ಕೇಳಿಕೊಳ್ಳುತ್ತೇನೆ. ಇದೇ ಕುಟುಂಬದ ಜೊತೆ ಮತ್ತೆ ಹುಟ್ಟಿ ಬರುತ್ತೇನೆ. ಮುಂದಿನ ಜನ್ಮದಲ್ಲಿಯೂ ಇದೇ ಪ್ರೀತಿ, ವಾತ್ಸಲ್ಯ ತೋರಿಸುತ್ತೀರಿ ಎಂದು ಭಾವಿಸುತ್ತೇನೆ. ನನ್ನ ಎಲ್ಲ ಫ್ರೆಂಡ್ಸ್ಗಳಿಗೂ ಒಳ್ಳೆಯದು ಆಗಲಿ," ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾನೆ.
"ನಾನು ಸತ್ತ ಬಳಿಕ ಈ ವಿಡಿಯೋ ನಿಮಗೆ ಸಿಗುತ್ತದೆ. ಈ ವಿಡಿಯೋವನ್ನು ಎಲ್ಲ ಟಿವಿ, ನ್ಯೂಸ್ ಚಾನೆಲ್ಗಳಲ್ಲಿ ಪ್ರಸಾರ ಮಾಡಿ ಶಿಕ್ಷಣ ವ್ಯವಸ್ಥೆಗೆ ಬದಲಾಯಿಸಿ. ಇಂದಿನ ಶಿಕ್ಷಣ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕು," ಎಂದು ಮನವಿ ಮಾಡಿದ್ದಾನೆ.
"ಬೋರ್ಡಿಂಗ್ ಸ್ಕೂಲ್ನಲ್ಲಿದ್ದಾಗಲೂ ಅಪ್ಪ-ಅಮ್ಮನನ್ನು ಮಿಸ್ ಮಾಡಿಕೊಂಡಿದ್ದೆ. ಐ ಲವ್ ಯೂ ಅಪ್ಪ- ಅಮ್ಮ, ನಿಮ್ಮನ್ನು ಇಂದೂ ಮಿಸ್ ಮಾಡಿಕೊಳ್ಳುತ್ತೇನೆ. ನನಗೆ ಒಳ್ಳೆಯ ಸ್ನೇಹ ನೀಡಿದ ಗೆಳತಿಗೆ ಧನ್ಯವಾದಗಳು. ಈ ವಿಡಿಯೋವನ್ನು ಎಲ್ಲ ಶಾಲೆಗಳಲ್ಲಿ ಪ್ರಸಾರ ಮಾಡಿ," ಎಂದು ಸಂದೇಶ ವಿನಂತಿ ಮಾಡಿಕೊಂಡಿದ್ದಾನೆ.
Recommended Video
ಪಾಕ್ ಸೇನೆ ಮತ್ತು ಇಮ್ರಾನ್ ಖಾನ್ ನಡುವೆ ಜಟಾಪಟಿ | Oneindia Kannada
"ಇನ್ನು ಜಗದ್ಗುರು ನಿರ್ಮಲಾನಂಧನಾಥ ಸ್ವಾಮೀಜಿಯ ಆಶೀರ್ವಾದ ಪಡೆಯುವುದು ನನ್ನ ಜೀವನದ ಆಸೆಯಾಗಿತ್ತು, ಆದರೆ ನೆರವೇರಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವರು, ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನನ್ನ ಅಂತ್ಯಕ್ರಿಯೆ ನೇರವೆರಿಸಬೇಕೆಂದು," ವಿಡಿಯೋದಲ್ಲಿ ಸಂದೇಶ್ ವಿನಂತಿ ಮಾಡಿಕೊಂಡಿದ್ದಾನೆ. ಒಟ್ಟಾರೆ ನೂರಾರು ಕನಸು ಹೊತ್ತು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದೇಶ್ ನೇಣಿಗೆ ಶರಣಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
Hassan: Rajeev College Engineering Student Committed Suicide in Hostel Room; Record Video Before suicide, request to donate body parts and cremate body in presence of CM Basavaraj Bommai, Education Minister and Nirmalananda Swamiji. Know more.