ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ: ಜನರ ಆತಂಕ

ಹಾಸನ, ಅಕ್ಟೋಬರ್ 30: ಹಾಸನ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿ ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಸಿತು. ಅರಸೀಕೆರೆ ತಾಲೂಕು ಜಾವಗಲ್ ಹೋಬಳಿಯ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ. ನಾಗೇನಹಳ್ಳಿ, ರಂಗಾಪುರ, ತಮ್ಲಾಪುರ, ಹಂದ್ರಾಳು, ಕರಗುಂಡ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆಲವು ಮನೆಗಳಲ್ಲಿ ಪಾತ್ರೆಗಳು ನೆಲಕ್ಕೆ ಬಿದ್ದಿದ್ದು ಜನತೆ ಆತಂಕಗೊಂಡಿದ್ದರು, ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಅರಸೀಕೆರೆ ತಹಸೀಲ್ದಾರ್‌ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಆಗಸ್ಟ್ 21ರಂದು ಲಘು ಭೂಕಂಪವಾಗಿ ನೂರಕ್ಕೂ ಹೆಚ್ಚು ಮನೆಗಳು ಬಿರುಕುಬಿಟ್ಟಿತ್ತು.

Earth quake in various parts of Hassan district

ಹಿಜ್ಜನಹಳ್ಳಿ ಗ್ರಾಮದಲ್ಲಿ ಉಂಟಾಗಿರುವ ಭೂಕಂಪದ ಪರಿಣಾಮ ಸುಮಾರು 4 ಕಿ.ಮೀನಷ್ಟು ಕಾಂಕ್ರೀಟ್‌ ರಸ್ತೆ ಹುದುಗಿಹೋಗಿದ್ದು, ಭಾರಿ ಗಾತ್ರದ ಬಂಟೆಯೊಂದು ಛಿತ್ರಗೊಂಡಿತ್ತು. ಕಲೇಶಪುರದ ಹಿಜ್ಜನಹಳ್ಳಿಯಲ್ಲಿ ವರದಿಯಾಗಿತ್ತು. ಇದೀಗ ಮತ್ತೊಂದು ಬಾರಿ ಇದೇ ಅನುಭವವಾಗಿದ್ದು ಸ್ಥಳೀಯರು ಕಂಗಾಲಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+