ಭಾವಿ ಪ್ರಧಾನಿ ದೇವೇಗೌಡ್ರು: ಅಭಿಮಾನಿಗಳ ಜೈಘೋಷ
Recommended Video
ಹಾಸನ, ಮೇ 18: ಲೋಕಸಭೆ ಫಲಿತಾಂಶ ಇನ್ನೂ ಐದು ದಿನ ಬಾಕಿ ಇದೆ, ಆದರೆ ಈಗಾಗಲೇ ದೇವೇಗೌಡರೇ ಭಾವಿ ಪ್ರಧಾನಿ ಎಂದು ಅವರ ಅಭಿಮಾನಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನಾನು ಪ್ರಧಾನಿ ಅಭ್ಯರ್ಥಿಯಲ್ಲ ಎಂದು ದೇವೇಗೌಡ ಅವರೇ ಹಲವು ಬಾರಿ ಹೇಳಿದ್ದಾರಾದರೂ ಅಭಿಮಾನಿಗಳು ಕೇಳಬೇಕಲ್ಲ, ಇಂದು ದೇವೇಗೌಡ ಅವರ ಹುಟ್ಟುಹಬ್ಬದಂದು ಹಾಸನದಲ್ಲಿ 'ಭಾವಿ ಪ್ರಧಾನಿ ದೇವೇಗೌಡ್ರು' ಜೈಗೋಷಗಳು ಜೋರಾಗಿ ಕೇಳಿಸಿವೆ.
ಹಾಸನದಲ್ಲಿ ಹಲವು ಕಡೆ ಇಂದು ದೇವೇಗೌಡ ಅವರ ಹುಟ್ಟುಹಬ್ಬ ಆಚರಿಸಲಾಯಿತು, ಹಲವು ಕಡೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು, ಅವುಗಳಲ್ಲಿ 'ಭಾವಿ ಪ್ರಧಾನಿ ದೇವೇಗೌಡ' ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಇದ್ದಿದ್ದು ಭಾರಿ ಗಮನ ಸೆಳೆದಿದೆ.

ಎನ್‌ಡಿಎ ಹಾಗೂ ಯುಪಿಎ ಗಳು ಬಹುಮತ ಪಡೆಯಲು ವಿಫಲವಾದರೆ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚನೆಯಲ್ಲಿ ಮುಖ್ಯಪಾತ್ರ ವಹಿಸಿ ಆಗ ದೇವೇಗೌಡ ಅವರು ಪ್ರಧಾನಿ ಆಗುತ್ತಾರೆ ಎಂದು ದೇವೇಗೌಡ ಅವರ ಅಭಿಮಾನಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಾದೇಶಿಕ ಪಕ್ಷಗಳ ಒಕ್ಕೂಟ ಅಥವಾ ಮಹಾಘಟಬಂಧನ್ ಒಂದು ವೇಳೆ ಸರ್ಕಾರ ರಚಿಸಿದರೂ ದೇವೇಗೌಡ ಅವರಿಗೆ ಪ್ರಧಾನಿ ಪಟ್ಟ ಬಿಟ್ಟುಕೊಡುವ ಸಾಧ್ಯತೆ ಕಡಿಮೆಯೇ ಇದೆ. ಮಾಯಾವತಿ, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಇನ್ನೂ ಹಲವರು ಪ್ರಧಾನಿ ರೇಸ್‌ನಲ್ಲಿ ಇದ್ದಾರೆ.












Click it and Unblock the Notifications