ಹಾಸನದಲ್ಲಿ ತಮ್ಮ ಸೋಲು, ಪ್ರಜ್ವಲ್ ಗೆಲುವಿನ ಬಗ್ಗೆ ಎ ಮಂಜು ಹೇಳಿದ್ದೇನು?

ಹಾಸನ, ಮೇ 23: ಹಾಸನದಲ್ಲಿ ತಮ್ಮ ಸೋಲಿಗಿಂತಲೂ ಪ್ರಜ್ವಲ್ ರೇವಣ್ಣ ಗೆಲುವಿನ ಬಗ್ಗೆ ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಮಾತನಾಡಿದ್ದಾರೆ.

ದೇವೇಗೌಡರು ಹಾಸನದಿಂದ ಸ್ಪರ್ಧಿಸಲಿ ಎಂದು ನಾನೇ ಆಹ್ವಾನ ನೀಡಿದ್ದೆ. ಆದರೆ, ಕಾಂಗ್ರೆಸ್-ಜೆಡಿಎಸ್ ನಲ್ಲಿ ಮೈತ್ರಿ ನಡುವೆ ಮೊಮ್ಮಕ್ಕಳನ್ನು ದಡ ಸೇರಿಸಲು ಹೋಗಿ ತಾವೇ ಎಡವಿದ್ದಾರೆ ಎಂದು ಹೇಳಿದರು.

ಹಾಸನದಲ್ಲಿ ಗೆದ್ದಿದ್ದು ಪ್ರಜ್ವಲ್ ರೇವಣ್ಣ ಅಲ್ಲ, ಮೈತ್ರಿ ಪಕ್ಷಗಳ ಗೆಲುವು. ಇದನ್ನು ಅವರು ಒಪ್ಪಿಕೊಳ್ಳಲೇಬೇಕು. ಕಳೆದ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಐದೂವರೆ ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಜನಾದೇಶ ನೋಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕು. ನೈತಿಕತೆ ಇದ್ದರೆ, ರಾಜೀನಾಮೆ ನೀಡಿ ಹೋಗಲಿ ಎಂದು ಹೇಳಿದರು.

Deve gowda lost election for the sake of grandsons

ಮೊಮ್ಮಕ್ಕಳ ಮೇಲಿನ ವ್ಯಾಮೋಹದಿಂದ ಅವರನ್ನು ರಾಜಕೀಯದಲ್ಲಿ ದಡ ಸೇರಿಸಲು ಹೋಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಎಡವಿದ್ದಾರೆ.
ಇದಕ್ಕೆ ತುಮಕೂರಿನಲ್ಲಿ ಅವರು ಮತ್ತು ಮಂಡ್ಯದಲ್ಲಿ ಅವರ ಮೊಮ್ಮಗ ಹಿನ್ನಡೆ ಕಂಡಿರುವುದೇ ಸಾಕ್ಷಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+