ಇನ್ನೆರಡು ತಿಂಗಳಲ್ಲಿ ಹಾಸನ- ಬೆಂಗಳೂರು ರೈಲು ಸಂಚಾರ ಶುರು

Posted By:
Subscribe to Oneindia Kannada

ಹಾಸನ, ಫೆಬ್ರವರಿ 1: ಎರಡು ತಿಂಗಳಲ್ಲಿ ಹಾಸನ- ಬೆಂಗಳೂರು ನಡುವೆ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಬೆಂಗಳೂರು ವಿಭಾಗೀಯ ಮಟ್ಟದ ರೈಲ್ವೆ ಅಧಿಕಾರಿ ಗೋಪಿನಾಥ್ ತಿಳಿಸಿದರು.

ಹಾಸನ- ಬೆಂಗಳೂರು ರೈಲ್ವೆ ಮಾರ್ಗಮಧ್ಯದಲ್ಲಿರುವ ಚನ್ನರಾಯಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಅವರು ರೈಲು ಮಾರ್ಗ, ಕಚೇರಿ ಸೇರಿದಂತೆ ವಲಯವನ್ನು ಪರಿಶೀಲಿಸಿ ಮಾತನಾಡಿದರು.[2016ರಲ್ಲಿ ಹಾಸನ-ಬೆಂಗಳೂರು ನಡುವೆ ರೈಲು ಸಂಚಾರ]

Bengaluru-Hassan rail service would commence in 2 month

ಫೆಬ್ರವರಿ 15ರಿಂದ 28ರ ವರೆಗೆ ಹಾಸನ ಮತ್ತು ಬೆಂಗಳೂರಿಗೆ ಪ್ರಾಯೋಗಿಕ ರೈಲು ಸಂಚಾರ ನಡೆಸಲಾಗುವುದು. ನಂತರ ಎರಡು ತಿಂಗಳಲ್ಲಿ ರೈಲು ಸಂಚಾರ ಶುರುವಾಗಲಿದೆ. ಇದರಿಂದ ಬೆಂಗಳೂರು ಹಾಸನದ ಜನತೆಯ ಸುಖಕರ ಪ್ರಯಾಣಕ್ಕೆ ಅನುಕೂಲವಾಗಲಿದೆ. ಅಲ್ಲದೆ 2018ರಲ್ಲಿ ನಡೆಯುವ ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಈ ರೈಲು ಮಾರ್ಗ 2016ರಲ್ಲೇ ಪ್ರಾರಂಭವಾಗಬೇಕಿತ್ತು. ನಿಧಾನಗತಿಯ ಕೆಲಸದಿಂದಾಗಿ ಮುಂದಿನ ಎರಡು ತಿಂಗಳಲ್ಲಿ ಸಂಚಾರ ಪ್ರಾರಂಭವಾಗಲಿದೆ. ಅಲ್ಲದೆ ಬೆಂಗಳೂರು-ಹಾಸನ ನಡುವೆ 12 ರೈಲು ನಿಲ್ದಾಣಗಳಿವೆ. ಇನ್ನು ಕೆಲ ರೈಲು ನಿಲ್ದಾಣಗಳ ಕಾರ್ಯಚಾಲನೆಯಲ್ಲಿದೆ. ಅದನ್ನು ಅದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಇನ್ನು ಆಗಬೇಕಿರುವ ಕೆಲಸಗಳನ್ನು ಪಟ್ಟಿಮಾಡಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದ ಎಂದು ಗೋಪಿನಾಥ್ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bangalore Railway Divisional level officers Gopinath said Works on Bengaluru-Hassan rail route would be completed soon and the train service would commence in 2 month.
Please Wait while comments are loading...