ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹೊಸ ವರ್ಷದ ಆರಂಭದಲ್ಲೇ ಹಾಸನ ಜಿಲ್ಲೆಯಲ್ಲಿ 9 ಇಂದಿರಾ ಕ್ಯಾಂಟೀನ್'

|
Google Oneindia Kannada News

Recommended Video

ಹೊಸ ವರ್ಷಕ್ಕೆ ಹಾಸನದಲ್ಲಿ 9 ಇಂದಿರಾ ಕ್ಯಾಂಟೀನ್ ಗಳು ಆರಂಭವಾಗಲಿದೆ | Oneindia Kannada

ಹಾಸನ, ಡಿಸೆಂಬರ್ 2: ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 'ಇಂದಿರಾ ಕ್ಯಾಂಟೀನ್' ಆರಂಭಿಸಲು ಹಾಸನ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಹಾಸನ ನಗರದಲ್ಲಿ 2 ಹಾಗೂ ಜಿಲ್ಲೆಯ ಇತರ ಎಲ್ಲಾ ತಾಲ್ಲೂಕುಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುತ್ತಿದ್ದು, ಹೊಸ ವರ್ಷದ ಆರಂಭದಲ್ಲೇ ಈ ಎಲ್ಲಾ 9 ಕ್ಯಾಂಟೀನ್‍ ಗಳು ಕಾರ್ಯಾರಂಭ ಮಾಡಲಿವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಗುಣಮಟ್ಟ ನಿಗಾಕ್ಕೆ ಮೊಬೈಲ್ ಅಪ್ಲಿಕೇಷನ್ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಗುಣಮಟ್ಟ ನಿಗಾಕ್ಕೆ ಮೊಬೈಲ್ ಅಪ್ಲಿಕೇಷನ್

ಹೆಚ್ಚು ಜನರಿಗೆ ಈ ಕಾರ್ಯಕ್ರಮದ ಲಾಭ ದೊರೆಯಬೇಕು ಎನ್ನುವ ಉದ್ದೇಶದಿಂದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಈಗಾಗಲೇ ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದರು.

ಡಿಸೆಂಬರ್‌ನಲ್ಲಿ ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳು ಆರಂಭಡಿಸೆಂಬರ್‌ನಲ್ಲಿ ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳು ಆರಂಭ

ನಗರ ಸ್ಥಳೀಯ ಸಂಸ್ಥೆಗಳ ಜನಸಂಖ್ಯೆ ಆಧರಿಸಿ ಉಪಹಾರ ಮತ್ತು ಊಟವನ್ನು ಮಿತಿಗೊಳಿಸಲಾಗಿದೆ. ಅದರಂತೆ, ಹಾಸನ ನಗರದಲ್ಲಿ 1,000 ಅರಸೀಕರೆ ಮತ್ತು ಚನ್ನರಾಯಪಟ್ಟಣದಲ್ಲಿ ತಲಾ 500, ಹೊಳೆನರಸೀಪುರ, ಸಕಲೇಶಪುರ ಮತ್ತು ಬೇಲೂರಿನಲ್ಲಿ ತಲಾ 300 ಆಲೂರು ಮತ್ತು ಅರಕಲಗೂಡಿನಲ್ಲಿ ತಲಾ 200 ಜನಸಂಖ್ಯೆಗೆ ಉಪಾಹಾರ/ಊಟ ಒದಗಿಸಲಾಗುತ್ತಿದೆ.

ದಿನನಿತ್ಯ ಪ್ರತಿ ಹೊತ್ತಿಗೆ ಸುಮಾರು 3,300 ಜನರಿಗೆ

ದಿನನಿತ್ಯ ಪ್ರತಿ ಹೊತ್ತಿಗೆ ಸುಮಾರು 3,300 ಜನರಿಗೆ

ಜಿಲ್ಲೆಯಾದ್ಯಂತ ದಿನನಿತ್ಯ ಪ್ರತಿ ಹೊತ್ತಿಗೆ ಸುಮಾರು 3,300 ಜನರಿಗೆ ಈ ಕಾರ್ಯಕ್ರಮದ ಪ್ರಯೋಜನೆ ದೊರೆಯಲಿದ್ದು, ಸ್ಥಳೀಯ ಉಪಾಹಾರ/ ಊಟ ನೀಡಲು ಚಿಂತನೆ ನಡೆಸಲಾಗಿದೆ. ಬೆಳಗ್ಗೆ 5 ರೂ.ಕ್ಕೆ ಉಪಾಹಾರ ಹಾಗೂ ಮಧ್ಯಾಹ್ನ ಮತ್ತು ಸಂಜೆ 10ರೂ. ದರದಲ್ಲಿ ಊಟ ಕಲ್ಪಿಸಲಾಗುವುದು ಎಂದು ರೋಹಿಣಿ ಸಿಂಧೂರಿ ತಿಳಿಸಿದರು.

ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸೂಚನೆ

ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸೂಚನೆ

ಇಂದಿರಾ ಕ್ಯಾಂಟೀನ್‍ ಗಳಿಗೆ ತ್ವರಿತವಾಗಿ ಆಹಾರ ಸರಬರಾಜು ಮಾಡುವ ಸಂಬಂಧ ಆಹಾರ ಸರಬರಾಜುದಾರರನ್ನು ಗುರುತಿಸಲು ಎರಡು ಪ್ಯಾಕೇಜ್ ಟೆಂಡರ್ ಕರೆಯಲು ಅನುಮೋದನೆ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ/ ಪೌರಾಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ತ್ವರಿತವಾಗಿ ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆ

ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆ

ಕ್ಯಾಂಟೀನ್ ಸ್ಥಳದಲ್ಲಿ ವಾಟರ್ ರೀಚಾರ್ಜ್, ನೀರಿನ ನೆಲತೊಟ್ಟಿ, ಸೋಕ್ ಪಿಟ್, ತಂತಿಬೇಲಿ ನಿರ್ಮಿಸಲಾಗುವುದು. ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವುದರ ಜೊತೆಗೆ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಇಂದಿರಾ ಕ್ಯಾಂಟೀನ್ ಎಲ್ಲೆಲ್ಲಿ..?

ಇಂದಿರಾ ಕ್ಯಾಂಟೀನ್ ಎಲ್ಲೆಲ್ಲಿ..?

ಹಾಸನ: ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ಹಾಗೂ ನಗರಸಭೆ ವಸ್ತು ಪ್ರದರ್ಶನ ಸ್ಥಳ, ಅರಸೀಕೆರೆ: ಪಶು ವೈದ್ಯ ಶಾಲೆ, ರೈಲ್ವೆ ಸ್ಟೇಷನ್ ರಸ್ತೆ, ಚನ್ನರಾಯಪಟ್ಟಣ: ಪಿಡಬ್ಲ್ಯೂ ಕ್ವಾಟ್ರಸ್ (ವಾರ್ಡ್ ನಂ.7), ಹೊಳೆನರಸೀಪುರ: ಸಾರ್ವಜನಿಕ ಆಸ್ಪತ್ರೆ, ನೌಕರರ ವಸತಿ ಗೃಹದ ಮುಂಭಾಗ, ಸಕಲೇಶಪುರ: ಮಿನಿ ವಿಧಾನಸೌಧ ಮುಂಭಾಗ, ಬಿ.ಎಂ. ರಸ್ತೆ, ಬೇಲೂರು: ಪ್ರವಾಸಿ ಮಂದಿರ ಲೋಕೋಪಯೋಗಿ ಇಲಾಖೆ, ಅರಕಲಗೂಡು: ಹಾಪ್ ಕಾಮ್ಸ್ ಪಕ್ಕದಲ್ಲಿರುವ ಸ್ಥಳ, ಆಲೂರು: ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳ ಪಶ್ಚಿಮ ದಿಕ್ಕಿನಲ್ಲಿರುವ ಸ್ಥಳ.

English summary
On January 1, 2018, the 9 Indira Cantines will be set up in the Hassan district, 2 Cantines in the city and 7 Cantines will be set up in taluk places said, Hassan DC Rohini Sindhuri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X