• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರಾಡಿ ಘಾಟ್‌ನಲ್ಲಿ ಅಪಘಾತ : ಕಾರಿನಲ್ಲಿದ್ದ ನಾಲ್ವರ ದುರ್ಮರಣ

|

ಹಾಸನ, ಮಾರ್ಚ್ 10 : ಕೆಎಸ್ಆರ್‌ಟಿಸಿ ಬಸ್ ಮತ್ತು ಮಾರುತಿ ಕಾರು ಮುಖಾಮುಖಿ ಡಿಕ್ಕಿಯಾದ ಘಟನೆ ಶಿರಾಡಿ ಘಾಟ್‌ನಲ್ಲಿ ನಡೆದಿದೆ. ಈ ಅಪಘಾತದಲ್ಲಿ 6 ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಬೆಂಗಳೂರಿನ ರಾಜನಕುಂಟೆ ಜಗದೀಶ್ (30), ಗೌರಮ್ಮ (45), ಚನ್ನಯ್ಯ (50), ಭುವನೇಶ್ (6) ಎಂದು ಗುರುತಿಸಲಾಗಿದೆ. ಭವ್ಯಾ (16), ನಾಗರಾಜ (38) ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಹೆಲ್ಮಟ್ ಧರಿಸದಿರುವುದು, ಅತಿವೇಗದ ಚಾಲನೆ : ಅಪಾಯಕಾರಿ ಅಂಶಗಳು

ಸಕಲೇಶಪುರದಿಂದ ಸುಮಾರು 25 ಕಿ.ಮೀ.ದೂರದ ಶಿರಾಡಿ ಘಾಟ್ ರಸ್ತೆಯಲ್ಲಿ ಭಾನುವಾರ ಮುಂಜಾನೆ 7 ಗಂಟೆ ವೇಳೆಗೆ ಅಪಘಾತ ನಡೆದಿದೆ. ಮಾರುತಿ ಶಿಫ್ಟ್ ಕಾರು ಮತ್ತು ಕೆಎಸ್ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ.

ಅಂಗಾಂಗ ದಾನ ಮಾಡಿ 6 ಜೀವ ಉಳಿಸಿದ ಮಂಡ್ಯದ ರೈತ

ಕಾರಿನಲ್ಲಿದ್ದ ಇಬ್ಬರು ಪುರುಷರು ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು 6 ವರ್ಷದ ಮಗು ಮೃತಪಟ್ಟಿದ್ದಾರೆ. ಇಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗೀತಾ ವಿಷ್ಣು ಹಿಟ್ ಎಂಡ್ ರನ್ ಪ್ರಕರಣಕ್ಕೆ ಸ್ಫೋಟಕ ತಿರುವು

ಅಪಘಾತದ ನಂತರ ಕೆಲವು ಕಾಲ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತ್ತು. ಬಳಿಕ ವಾಹನದ ಅವಶೇಷಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

English summary
6 year old child and 3 others killed in road accident at Shidadi Ghat on March 10, 2019 morning. Maruti Swift car collided with a KSRTC bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X