ಹಾಸನ : ಅಜ್ಜಿ ಮನೆಗೆ ಬಂದಿದ್ದ ಬಾಲಕ ಆನೆ ದಾಳಿಗೆ ಬಲಿ
Recommended Video

ಹಾಸನ, ಜನವರಿ 15 : ಸಂಕ್ರಾಂತಿ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದ ಬಾಲಕ ಆನೆ ದಾಳಿಗೆ ಬಲಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಮೃತಪಟ್ಟ ಬಾಲಕ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಭರತ್ (14) ಆನೆ ದಾಳಿಯಿಂದ ಮೃತಪಟ್ಟ ಬಾಲಕ. ಹಾಸನ ಜಿಲ್ಲೆಯ ಆಲೂರು ಬಳಿಯ ಕೊಡಗತ್ತವಳ್ಳಿಯಲ್ಲಿ ಅಜ್ಜಿ ಮನೆಗೆ ಶನಿವಾರ ಬಂದಿದ್ದ ಭರತ್, ಭಾನುವಾರ ಆನೆ ದಾಳಿಯಿಂದ ಮೃತಪಟ್ಟಿದ್ದಾನೆ.
ಭಾನುವಾರ ಬೆಳಗ್ಗೆ ಭರತ್ ಮನೆ ಮುಂದೆ ಕಟ್ಟಿ ಹಾಕಿದ್ದ ಕರುವಿನೊಂದಿಗೆ ಆಟವಾಡುತ್ತಿದ್ದ. ಏಕಾಏಕಿ ಆಗಮಿಸಿದ ಒಂಟಿ ಸಲಗ ಸೊಂಡಿಲಿನಲ್ಲಿ ಆತನನ್ನು ಎಳೆದು, ತುಳಿದು ಕೊಂದು ಹಾಕಿದೆ.

ಆನೆಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಭರತ್‌ನನ್ನು ರಕ್ಷಣೆ ಮಾಡಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಹಾಸನದಲ್ಲಿ ತಾಯಿ, ತಂಗಿಯೊಂದಿಗೆ ವಾಸವಿದ್ದ ಭರತ್ ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಮನೆಗೆ ಆಗಮಿಸಿದ್ದ.
ಭರತ್ ತಂದೆ ಸುರೇಶ್ ಹಾಸನದ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ತೀರಿಕೊಂಡಿದ್ದರು. ಅನುಕಂಪದ ಆಧಾರದ ಮೇಲೆ ಸುರೇಶ್ ಪತ್ನಿಗೆ ಕೆಲಸ ನೀಡಲಾಗಿತ್ತು.
ಹಾಸನದಲ್ಲಿ ತಾಯಿ, ತಂಗಿಯ ಜೊತೆ ಭರತ್ ವಾಸವಾಗಿದ್ದ. ಸಂಕ್ರಾಂತಿ ಹಬ್ಬಕ್ಕಾಗಿ ಶನಿವಾರ ಆಲೂರು ಬಳಿಯ ಅಜ್ಜಿಯ ಮನೆಗೆ ಬಂದಿದ್ದ. ಆಗ ಈ ದುರ್ಘಟನೆ ನೆಡೆದಿದೆ.












Click it and Unblock the Notifications