ರೇವಣ್ಣ ಬೆಂಗಾವಲು ವಾಹನದಲ್ಲಿ 1.20 ಲಕ್ಷ ಹಣ ವಶಕ್ಕೆ
ಹಾಸನ, ಏಪ್ರಿಲ್ 17 : ಹಾಸನದಲ್ಲಿ 1.20 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿ ಈ ಹಣವಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಾಸನ ಜಿಲ್ಲೆಯ ಹೊಳೆನರಸೀಪುರ ಚನ್ನಾಂಬಿಕಾ ಚಿತ್ರಮಂದಿರದ ಮುಂಭಾಗ ಹಣವನ್ನು ಜಪ್ತಿ ಮಾಡಲಾಗಿದೆ. ಹಣ ಸಿಕ್ಕಿರುವ ಕುರಿತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಚನ್ನಾಂಬಿಕಾ ಚಿತ್ರಮಂದಿರದ ಸಮೀಪವೇ ಸಚಿವ ಎಚ್.ಡಿ.ರೇವಣ್ಣ ನಿವಾಸವಿದೆ. ರೇವಣ್ಣ ಬೆಂಗಾವಲು ವಾಹನವನ್ನು ತಪಾಸಣೆ ಮಾಡುವ ವೇಳೆ ಹಣ ಸಿಕ್ಕಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಚಾಲಕ ಚಂದ್ರಯ್ಯ ಮತ್ತು ಪೊಲೀಸ್ ಸಿಬ್ಬಂದಿ ರವಿ ಇದ್ದರು.

ಮಂಗಳವಾರ ತಡರಾತ್ರಿ 12.45ಕ್ಕೆ ರೇವಣ್ಣ ಬೆಂಗಾವಲು ಪಡೆ ವಾಹನವನ್ನು ತಡೆದು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು. ಸಿಕ್ಕ ಹಣಕ್ಕೆ ದಾಖಲೆಗಳು ಇಲ್ಲದ ಕಾರಣ ಚುನಾವಣಾಧಿಕಾರಿ ವಿಕಾಸ್ ಪೊಲೀಸರಿಗೆ ದೂರು ನೀಡಿದರು.
ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?
ಬೆಂಗಾವಲು ಪಡೆ ವಾಹನದಲ್ಲಿದ್ದ ಚಂದ್ರಯ್ಯ, ರವಿ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏಪ್ರಿಲ್ 18ರ ಗುರುವಾರ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಎ.ಮಂಜು, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣದಲ್ಲಿದ್ದಾರೆ.












Click it and Unblock the Notifications