• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

19 ನೇ ದಿನ, ಗಣಿ ತಳ ತಲುಪಿದ ರಕ್ಷಣಾ ಸಿಬ್ಬಂದಿ... ಕಾರ್ಮಿಕರು ಮಾತ್ರ ನಾಪತ್ತೆ!

|

ಗುವಾಹಟಿ, ಜನವರಿ 01: ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರು ಸಿಲುಕಿಕೊಂಡು ಇಂದಿಗೆ 19 ನೇ ದಿನ. ಆದರೆ ಇದುವರೆಗೂ 15 ಕಾರ್ಮಿಕರಲ್ಲಿ ಒಬ್ಬರ ಬಗ್ಗೆಯೂ ಯಾವುದೇ ಕುರುಹೂ ಸಿಕ್ಕಿಲ್ಲ.

ಭಾರತೀಯ ನೌಕಾದಳದ ಮುಳುಗುತಜ್ಞರು ಗಣಿಯ ತಳಕ್ಕೆ ಈಗಾಗಲೇ ತೆರಳಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಗಣಿಯಲ್ಲಿ ನೀರು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯವೂ ಸುಲಭವಿಲ್ಲ.

ಮೇಘಾಲಯ ಗಣಿ ಕಾರ್ಮಿಕರೆಲ್ಲರೂ ಸತ್ತಿದ್ದಾರೆ: ಕಾಂಗ್ರೆಸ್ ಸಂಸದ

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಡಿ.12 ರಂದು 15 ಕಾರ್ಮಿಕರು ಗಣಿಯೊಳಗೆ ಸಿಲುಕಿ ನಂತರ ನಾಪತ್ತೆಯಾಗಿದ್ದರು.

ಮೂರು ದಿನಗಳ ಹಿಂದಷ್ಟೇ ಗಣಿಯೊಳಗೆ ಮೂರು ಹೆಲ್ಮೇಟ್ ಗಳು ಸಿಕ್ಕಿದ್ದವು. ಕಾರ್ಮಿಕರು ಗಣಿಯೊಳಗೆ ತೆರಳಿದ್ದಂತೂ ಖಚಿತ ಎಂಬುದು ಈ ಮೂಲಕ ತಿಳಿದಿತ್ತು. ಆದರೆ ಅದರ ನಂತರ ಮತ್ತೆ ಯಾವುದೇ ಕುರುಹೂ ದೊರೆತಿಲ್ಲ.

ನಿಗೂಢ ಗಣಿಯಲ್ಲಿ 13 ಕಾರ್ಮಿಕರ ನಾಪತ್ತೆ, 2 ದಿನವಾದರೂ ಸುದ್ದಿಯಿಲ್ಲ!

ಈ ಕುರಿತು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಮೇಘಾಲಯದ ಕಾಂಗ್ರೆಸ್ ಸಂಸದ ವಿನ್ಸೆಂಟ್ ಎಚ್ ಪಾಲಾ, ಗಣಿಯಲ್ಲಿ ಸಿಲುಕಿಕೊಂಡ 13 ಕಾರ್ಮಿಕರಲ್ಲಿ ಬಹುಪಾಲು ಕಾರ್ಮಿಕರು ಮೃತರಾಗಿದ್ದಾರೆ ಎಂದಿದ್ದರು.

English summary
On Monday, a diver of the navy finally reached the bottom of the 370-feet rat hole mine in Meghalaya where 15 men have been trapped for the last 19 days. But none of the trapped men were to be seen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X