ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಪೊಲೀಸರಿಗೆ ಅಸ್ಸಾಂನಲ್ಲಿ ಸಿಕ್ಕಿಬಿದ್ದ 'ಬುಲ್ಲಿ ಬಾಯಿ' ಆ್ಯಪ್ ಸೃಷ್ಟಿಕರ್ತ

|
Google Oneindia Kannada News

ಗುವಾಹತಿ, ಜನವರಿ 06: ಬುಲ್ಲಿ ಬಾಯಿ ಆ್ಯಪ್‌ನ ಸೃಷ್ಟಿಕರ್ತ 21 ವರ್ಷದ ನೀರಜ್ ಬಿಷ್ಣೋಯ್ ಅವರನ್ನು ದೆಹಲಿ ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಈತ ಹಲವಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರ ಒಪ್ಪಿಗೆ ಇಲ್ಲದೆ ಅಪ್‌ಲೋಡ್ ಮಾಡಿ ಹರಾಜು ಮಾಡುವ ಬುಲ್ಲಿ ಬಾಯಿ ಆ್ಯಪ್‌ನ ಸೃಷ್ಟಿಕರ್ತನಾಗಿದ್ದಾನೆ.

ದೆಹಲಿ ಪೊಲೀಸ್ ತಂಡವು ಆರೋಪಿಯೊಂದಿಗೆ ಮಧ್ಯಾಹ್ನ 3:30 ಕ್ಕೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ (ಜನವರಿ5)ರಂದು 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೈಬರ್ ಪೊಲೀಸರು ಉತ್ತರಾಖಂಡದ ವಿದ್ಯಾರ್ಥಿಯನ್ನು ಬಂಧಿಸಿದ್ದರು. ವಿದ್ಯಾರ್ಥಿಯನ್ನು ಮಯಾಂಕ್ ರಾವಲ್ (21) ಎಂದು ಗುರುತಿಸಲಾಗಿದೆ.ಜೊತೆಗೆ ಮುಂಬೈ ಪೊಲೀಸರ ಸೈಬರ್ ಸೆಲ್ ಈ ಹಿಂದೆ ಉತ್ತರಾಖಂಡದ ಶ್ವೇತಾ ಸಿಂಗ್ (18) ಮತ್ತು ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ (21) ಅವರನ್ನು ಬಂಧಿಸಿದೆ.

'ಬುಲ್ಲಿ ಬಾಯಿ' ಆ್ಯಪ್ ಪ್ರಕರಣ ದೊಡ್ಡ ನೆಟ್‌ವರ್ಕ್‌ ಹೊಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದಲ್ಲಿ ಮೊದಲು ಬಂಧಿತರಾದ ಬೆಂಗಳೂರು ಕಾಲೇಜು ವಿದ್ಯಾರ್ಥಿ ಇತರರ ಮೇಲೆ ಆರೋಪ ಹೋರಿಸಿದ್ದನು. ಜೊತೆಗೆ ಆ್ಯಪ್ ಹಿಂದೆ ದೊಡ್ಡ ಗ್ಯಾಂಗ್ ಇದೆ ಎಂದು ನಂಬಲು ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿವೆ. ಆರೋಪಿತ ಮಹಿಳೆ ಹಾಗೂ ವಿದ್ಯಾರ್ಥಿಗಳನ್ನು ಬೇರೊಬ್ಬರು ಬಳಸಿದ್ದಾರೆನ್ನುವ ಅನುಮಾನವೂ ಇತ್ತು. ಈ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಬುಲ್ಲಿ ಬಾಯಿ ಆ್ಯಪ್‌ನ ಸೃಷ್ಟಿಕರ್ತ 21 ವರ್ಷದ ನೀರಜ್ ಬಿಷ್ಣೋಯ್. ಈತನೇ ಆ್ಯಪ್‌ನ ಸೃಷ್ಟಿಕರ್ತ ಎನ್ನಲಾಗುತ್ತಿದೆ. ಈತನ ಮಾರ್ಗದರ್ಶನದಲ್ಲೇ ಬಂಧಿತ ಮೂವರು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಈತನಿಗೆ ಈ ಕೆಲಸಕ್ಕೆ ಸಾಥ್ ನೀಡಿದವರು ಯಾರು? ಅಥವಾ ಈತ ಸ್ವತ: ಮಹಿಳಾ ವಿರೋಧಿನಾ? ಮುಸ್ಲಿಂ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದು ಯಾಕೆ? ಇದರ ಹಿಂದೆ ಯಾರ ಕುಮ್ಮಕ್ಕು ಇದೆ ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.

Bulli Bai app creator Neeraj Bishnoi, 21, arrested from Assam
'ಬುಲ್ಲಿ ಬಾಯಿ' ಎಂಬ ಅಪ್ಲಿಕೇಶನ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು 'ಹರಾಜಿಗೆ' ಅಪ್‌ಲೋಡ್ ಮಾಡಲಾಗಿದೆ ಎಂಬ ದೂರಿನ ನಂತರ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡರು. ಈವರೆಗೆ ಈ ಆ್ಯಪ್ ಮೂಲಕ ಯಾವುದೇ ನಿಜವಾದ 'ಹರಾಜು' ಅಥವಾ 'ಮಾರಾಟ' ಮಾಡದೇ ಇದ್ದರೂ, ಆ್ಯಪ್‌ನ ಉದ್ದೇಶವು ಮಹಿಳೆಯರನ್ನು ಅವಮಾನಿಸುವುದು ಮತ್ತು ಬೆದರಿಸುವುದು ಎಂದು ತೋರುತ್ತಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮದ ಸಕ್ರಿಯ ಬಳಕೆದಾರರಾಗಿರುವ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಇದರಲ್ಲಿ ಹೆಚ್ಚು ಬಳಕೆ ಮಾಡಲಾಗಿದೆ. ಹೀಗಾಗಿ ಮುಂಬೈ ಸೈಬರ್ ಪೊಲೀಸ್ ಠಾಣೆಯು ಅಪ್ಲಿಕೇಶನ್‌ನ ಗುರುತಿಸದ ಡೆವಲಪರ್‌ಗಳು ಮತ್ತು ಅದನ್ನು ಪ್ರಚಾರ ಮಾಡಿದ ಟ್ವಿಟರ್ ಹ್ಯಾಂಡಲ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದೆ.

ಕಳೆದ ವರ್ಷ 'ಸುಲ್ಲಿ ಡೀಲ್ಸ್' ಹೆಸರಿನಲ್ಲಿ ಕಾಣಿಸಿಕೊಂಡಿತ್ತು:

ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಈ 'ಹರಾಜು' ಒಂದು ವರ್ಷದೊಳಗೆ ಎರಡನೇ ಬಾರಿಗೆ ನಡೆದಿದೆ. ಇಂಥ ಅಪ್ಲಿಕೇಶನ್ ಕಳೆದ ವರ್ಷ 'ಸುಲ್ಲಿ ಡೀಲ್ಸ್' ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿತ್ತು. ಆದರೆ ಆ ಪ್ರಕರಣದಲ್ಲಿ ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ. ಆದರೆ 'ಬುಲ್ಲಿ ಬಾಯಿ' ಆಪ್ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಹಾಗೂ ರಾಜಕೀಯ ವಲಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಹೀಗಾಗಿ ಗಿಟ್‌ಹಬ್ ಪ್ಲಾಟ್‌ಫಾರ್ಮ್ ಹೋಸ್ಟ್ ಮಾಡಿದ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಛಾಯಾಚಿತ್ರಗಳನ್ನು 'ಹರಾಜಿಗೆ' ಅಪ್‌ಲೋಡ್ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ದೆಹಲಿ ಪೊಲೀಸರು GitHub ಪ್ಲಾಟ್‌ಫಾರ್ಮ್‌ನಿಂದ ಅಪ್ಲಿಕೇಶನ್‌ನ ಡೆವಲಪರ್ ಕುರಿತು ವಿವರಗಳನ್ನು ಪಡೆದಿದ್ದಾರೆ ಮತ್ತು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಸಂಬಂಧಿಸಿದ "ಆಕ್ಷೇಪಾರ್ಹ ವಿಷಯಗಳನ್ನು" ನಿರ್ಬಂಧಿಸಲು ಮತ್ತು ತೆಗೆದುಹಾಕಲು ಟ್ವಿಟ್ಟರ್‌ಗೆ ತಿಳಿಸಿದ್ದಾರೆ.

English summary
The creator of the Bulli Bai app, 21-year-old Neeraj Bishnoi, has been arrested by the Delhi Police from Assam. A total of four arrests have been made in the case so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X