ಅಸ್ಸಾಂ ಪತ್ರಕರ್ತ ಅರೆಸ್ಟ್: ತಂದೆ ಹೃದಯಾಘಾತದಿಂದ ಸಾವು
ಅಸ್ಸಾಂ, ಜುಲೈ 18: ಅಸ್ಸಾಂ ಪತ್ರಕರ್ತರೊಬ್ಬರನ್ನು ಪೊಲೀಸರು ಬಂಧಿಸಿದ್ದಕ್ಕೆ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಸ್ಸಾಂನ ಧುಬ್ರಿಯ ಪೊಲೀಸರು ಗುರುವಾರ ರಾತ್ರಿ ಪತ್ರಕರ್ತರೊಬ್ಬರನ್ನು ಬಂಧಸಲು ಅವರ ಮನೆಗೆ ತೆರಳಿದ್ದರು, ಪತ್ರಕರ್ತನ ಮೇಲೆ ಗೋ ಕಳ್ಳ ಸಾಗಾಣಿಕೆಯ ದೂರು ಸೇರಿ ಅನೇಕ ಪ್ರಕರಣಗಳು ಅವರ ಮೇಲಿತ್ತು.
ಮಗನ ಬಂಧನ ಸುದ್ದಿ ಕೇಳಿ ತಂದೆ ಸಾವನ್ನಪ್ಪಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿ ಯುವರಾಜ್ ಎಂಬುವವರನ್ನು ವರ್ಗಾವಣೆ ಮಾಡಲಾಗಿದೆ.

ರಾಜೀವ್ ಶರ್ಮಾ ಧುಬ್ರಿ ಪ್ರೆಸ್‌ಕ್ಲಬ್‌ನ ಕಾರ್ಯದರ್ಶಿಯಾಗಿದ್ದಾರೆ. ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಗೋ ಗಳ್ಳಸಾಗಣೆ ಸೇರಿದಂತೆ ವಿವಿಧ ಆರೋಪಗಳಡಿಯನ್ನು ಅವರನ್ನು ಬಂಧಿಸಲು ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಪೊಲೀಸರು ತೆರಳಿದ್ದರು. ಆತ 65 ವರ್ಷದ ತಂದೆ ಸುಧೀರ್ ಶರ್ಮಾ ಎಂಬುವವರ ಜೊತೆ ವಾಸಿಸುತ್ತಿದ್ದರು.
ಮಗನನ್ನು ಬಂಧಿಸಿ ಕರೆದುಕೊಂಡು ಹೋದ ಬಳಿಕ ಮನೆಯಲ್ಲಿ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಅವರನ್ನು ನೋಡಿಕೊಳ್ಳಲು ಯಾರೂ ಕೂಡ ಇರಲಿಲ್ಲ.
ಆತ ಜಾಮೀನು ಪಡೆದು ಬೆಳಗ್ಗೆ ಮನೆಗೆ ಬಂದಾಗ ತಂದೆ ಮೃತಪಟ್ಟಿರುವುದು ತಿಳಿದಿದೆ. ಬಳಿಕ ಪತ್ರಕರ್ತರು ಹಾಗೂ ಕುಟುಂಬದ ಸಹಾಯದಿಂದ ತಂದೆಯ ಅಂತ್ಯಕ್ರಿಯೆಯನ್ನು ನಡೆಸಲಾಯಿತು.












Click it and Unblock the Notifications