• search
 • Live TV
ಗುರ್ ಗಾಂವ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಸರಲ್ಲೇನಿದೆ? 400 ಕೋಟಿ ರು ಹೆದ್ದಾರಿ ಆಸ್ತಿಗೆ ಚರಣ್ ಜೀತ್ ಸಿಂಗ್ ಬಾಸ್

By ಒನ್ಇಂಡಿಯಾ ಡೆಸ್ಕ್
|

ಗುರುಗ್ರಾಮ, ಮೇ 13: ದೆಹಲಿ- ಜೈಪುರ್ ಹೆದ್ದಾರಿಯಲ್ಲಿರುವ 8 ಎಕರೆ ಭೂಮಿ ಯಾರಿಗೆ ಸೇರಿದ್ದು ಎಂಬ ಸಿವಿಎಲ್ ಕೇಸ್ ಈಗ ಭಾರತದೆಲ್ಲೆಡೆ ಚರ್ಚೆಯಾಗುತ್ತಿದೆ. ಹೆದ್ದಾರಿಯ ಭೂ ಭಾಗ ನನಗೆ ಸೇರಿದ್ದು ಎಂದು ಚರಣ್ ಜೀತ್ ಸಿಂಗ್ ಎಂಬುವರು ಮೊಕದ್ದಮೆ ಹೂಡಿದ್ದಾರೆ.

   ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಕೊರೊನ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು ಎಂದು ತಿಳಿಸಿದ್ದಾರೆ

   2014ರಲ್ಲಿ ಹರ್ಯಾಣ ಸರ್ಕಾರ ವಶಪಡಿಸಿಕೊಂಡ ಈ ಭೂಮಿ ಈಗ ಹರ್ಯಾಣ ಪೊಲೀಸರನ್ನು ಪ್ರಶ್ನಾರ್ಥಕವಾಗಿ ಕಾಡುತ್ತಿದೆ. ಇದಕ್ಕಿಂತ ಹೆಚ್ಚಾಗಿ ಇದು ನನಗೆ ಸೇರಿದ ಜಾಗ ಎಂದು ಚರಣ್ ಜೀತ್ ಸಿಂಗ್ ಅವರಿಗೆ ಇನ್ನೇನು ಭೂಮಿ ನೀಡಬೇಕು ಎನ್ನುವಷ್ಟರಲ್ಲಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಸದರಿ ಭೂಮಿಗೆ ಹಕ್ಕುದಾರರಾರು ಎಂದು ಕ್ಲೇಮು ಮಾಡುತ್ತಿರುವವರ ಸಂಖ್ಯೆ 6 ಮಂದಿ ಚರಣ್ ಜೀತ್ ಸಿಂಗ್ ಸೇರಿ 13ಕ್ಕೇರಿದೆ.

   ದೆಹಲಿ- ಜೈಪುರ್ ಹೆದ್ದಾರಿಯಲ್ಲಿರುವ 8 ಎಕರೆ ಜಾಗದ ಇಂದಿನ ಮಾರುಕಟ್ಟೆ ಬೆಲೆ 400 ಕೋಟಿ ರುಪಾಯಿ, ಈ 400 ಕೋಟಿ ರು ಆಸ್ತಿಗೆ ಚರಣ್ ಜೀತ್ ಸಿಂಗ್ ಎಂಬುವರು ಬಾಸ್. ಚರಣ್ ಜೀತ್ ಗೆ ಈ ಭೂಮಿ ಕೊಡಲು ಅಡ್ಡಿಯಾಗಿದ್ದು ಮತ್ತೊಬ್ಬ ಚರಣ್ ಜೀತ್ ಸಿಂಗ್, ಈ ಇಬ್ಬರು ಚರಣ್ ಜೀತ್ ಗೆ ಅಡ್ಡಿಯಾಗಿದ್ದು ಮತ್ತೆ ನಾಲ್ವರು ಚರಣ್ ಜೀತ್ ಸಿಂಗ್ ಗಳು. ಹೆಚ್ಚು ಗೊಂದಲಕ್ಕೀಡಾಗಬೇಡಿ.. ಮುಂದೆ ಓದಿ...

   pic courtesy: https://aajtak.intoday.in/

   ಅಸಲಿ ಮಾಲೀಕ ಯಾರು?

   ಅಸಲಿ ಮಾಲೀಕ ಯಾರು?

   ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿರುವಂತೆ, ಪೊಲೀಸರ ತಲೆ ನೋವು ಶುರುವಾಗಿದ್ದು, ದೆಹಲಿ- ಜೈಪುರ್ ಹೆದ್ದಾರಿಯಲ್ಲಿ ಇರುವ 8 ಎಕರೆ ಭೂಮಿ ನನಗೆ ಸೇರಿದ್ದು ಎಂದು ಚರಣ್ ಜೀತ್ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರಿಂದ ಮಾತ್ರವಲ್ಲ. ಕೋರ್ಟ್ ಮೆಟ್ಟಿಲೇರಿರುವುದು ಚರಣ್ ಜೀತ್ ಸಿಂಗ್ ಹೆಸರಿನಲ್ಲಿ 6 ಮಂದಿ ಚರಣ್ ಜೀತ್ ಸಿಂಗ್ ಗಳು ಈ ಪ್ರಕರಣದಲ್ಲಿ ಒಳಗೊಂಡಿದ್ದಾರೆ. ಈಗ ಆ ಜಾಗದ ಅಸಲಿ ಮಾಲೀಕತ್ವ ತಮ್ಮದು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದಲ್ಲಿನ ಚರಣ್ ಜೀತ್ ಸಿಂಗ್ ಗಳು ದೆಹಲಿ, ಪಂಜಾಬ್, ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ನವರಾಗಿದ್ದು, ಪೊಲೀಸರು ನಿದ್ದೆ ಕೆಡುವಂತಾಗಿದೆ.

   ಆಸಕ್ತಿಕರ ಸಂಗತಿ ಏನೆಂದರೆ, ಭೂಮಿಯ ಮಾಲೀಕ ಎಂದು ಯಾವ ವ್ಯಕ್ತಿಯನ್ನು ಪೊಲೀಸರು ಚರಣ್ ಜೀತ್ ಸಿಂಗ್ ಎಂದು ಭಾವಿಸಿದ್ದಾರೋ ಆತ ಈಗಾಗಲೇ ಸಾವನ್ನಪ್ಪಿರುವ ಮಾಹಿತಿ ಇತ್ತೀಚೆಗೆ ಸಿಕ್ಕಿದೆ. ಅಷ್ಟೇ ಅಲ್ಲ, ಆತನ ಹೆಂಡತಿ ಕೂಡ ತೀರಿಕೊಂಡಿದ್ದು, ಅವರಿಗೆ ಉತ್ತರಾಧಿಕಾರಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

   ಈ ಪ್ರಕರಣಕ್ಕೆ ಲಾಕ್ ಡೌನ್ ಅಡ್ಡಿಯಾಗಿದೆ

   ಈ ಪ್ರಕರಣಕ್ಕೆ ಲಾಕ್ ಡೌನ್ ಅಡ್ಡಿಯಾಗಿದೆ

   ಗುರುಗ್ರಾಮದ ಸೆಕ್ಟರ್ 37 ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಈ ವಿಚಿತ್ರ ಕೇಸ್ ದಾಖಲಿಸಲು ಕಾರಣರಾದವರು ಆರ್ ಟಿಐ ಕಾರ್ಯಕರ್ತ ರಮೇಶ್ ಯಾದವ್. ಯಾದವ್ ಹೇಳುವ ಪ್ರಕಾರ ನಿಜವಾದ ಚರಣ್ ಜೀತ್ ಸಿಂಗ್ ತಂದೆ ಹೆಸರು ನಂದಿ ಸಿಂಗ್, ಮತ್ತು ಚರಣ್ ಪತ್ನಿ ಹೆಸರು ಮಂಜೀತ್ ಕೌರ್. ಅವರೇ ಭೂಮಿಯ ನಿಜವಾದ ಮಾಲೀಕರು. ಈಗ ಅವರಿಬ್ಬರು ತೀರಿಕೊಂಡಿದ್ದಾರೆ. ಅವರಿಗೆ ಉತ್ತರಾಧಿಕಾರಿಗಳೇ ಇಲ್ಲ. ಆದರೆ ಈ ರಮೇಶ್ ಯಾದವ್ ನ ಪತ್ತೆ ಹಚ್ಚಿ, ಪ್ರಶ್ನೆ ಮಾಡಬೇಕು ಅಂದರೆ ಪೊಲೀಸರಿಗೆ ಲಾಕ್ ಡೌನ್ ಅಡ್ಡಿಯಾಗಿದೆ. ಕಂದಾಯ ಇಲಾಖೆ ದಾಖಲೆ ಪ್ರಕಾರ, ಚರಣ್ ಜೀತ್ ಸಿಂಗ್, ಆತನ ಪತ್ನಿ ಮಂಜೀತ್ ಕೌರ್ ಹಾಗೂ ತಂದೆ ನಂದಿ ಸಿಂಗ್ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿಗಳು. ಆದರೆ ಅವರನ್ನು ಪತ್ತೆ ಮಾಡಲು ಆಗುತ್ತಿಲ್ಲ.

   ಜಿಪಿಎ ಅಥವಾ ಕ್ರಯ ಒಪ್ಪಂದ ದಾಖಲೆ ಸಿಕ್ಕಿದೆ

   ಜಿಪಿಎ ಅಥವಾ ಕ್ರಯ ಒಪ್ಪಂದ ದಾಖಲೆ ಸಿಕ್ಕಿದೆ

   ದೆಹಲಿಯ ನಿವಾಸಿಯೇ ಅಸಲಿ ಚರಣ್ ಜೀತ್ ಸಿಂಗ್ ಎಂಬುದು ಸಾಬೀತಾದರೆ ಸುಳ್ಳು ಹೇಳಿ, ಕೋರ್ಟ್ ಮೆಟ್ಟಿಲೇರಿರುವ ನಕಲಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬಹುದು. ಆದರೆ ಅದು ಕೂಡಾ ಸಾಧ್ಯವಾಗುತ್ತಿಲ್ಲ. ಪತ್ರಿಕೆಯ ವರದಿ ಪ್ರಕಾರ, ಆರು ಮಂದಿ ಚರಣ್ ಜೀತ್ ಸಿಂಗ್ ಹೆಸರಿನವರು ಆರು ಮಂದಿಯ ತಂದೆ ಹೆಸರು ನಂದಿ ಸಿಂಗ್ ಅಷ್ಟೇ ಅಲ್ಲ, ಅವರೆಲ್ಲ ಉತ್ತರಪ್ರದೇಶದ ಪಿಲ್ಭಿಟ್, ಪಟಿಯಾಲ, ಪಂಜಾಬ್ ನ ಆನಂದ್ ಪುರ್ ಸಾಹಿಬ್, ಉತ್ತರಾ ಖಂಡದ ಉಧಂ ಸಿಂಗ್ ನಗರ್ ನವರು ಅದರಲ್ಲಿ ಏಳನೇ ವ್ಯಕ್ತಿ ಹೆಸರು ಗುರ್ನಾಮ್ ಸಿಂಗ್. ಆತ ತಾನು ಚರಣ್ ಜೀತ್ ಸಿಂಗ್ ಮಗ ಎನ್ನುತ್ತಿದ್ದಾನೆ. ಆರು ಮಂದಿಯ ಬಳಿ ಒಂದೋ ಈ ಭೂಮಿಗೆ ಸಂಬಂಧಿಸಿದ ಜಿಪಿಎ ಇದೆ ಅಥವಾ ನೋಂದಣಿಯಾದ ಕ್ರಯ ಒಪ್ಪಂದ ಇದೆ. ಅವರ ಹೆಸರು ಹರಿ ಮೋಹನ್ ಸಿಂಗ್, ಗಜೇಂದರ್ ಸಿಂಗ್, ಹರೀಶ್ ಅಹುಜಾ, ದಿಲೀಪ್ ರವೀಂದರ್ ಸಿಂಗ್ ಮತ್ತು ಮನೀಶ್ ಭಾರದ್ವಾಜ್. ಇವರೆಲ್ಲರ ಮೂಲ ಗುರ್ ಗಾಂವ್ ಅಥವಾ ದೆಹಲಿ.

   44.01 ಕೋಟಿ ರುಪಾಯಿ ಪಾವತಿ ಮಾಡಲಾಗಿದೆ

   44.01 ಕೋಟಿ ರುಪಾಯಿ ಪಾವತಿ ಮಾಡಲಾಗಿದೆ

   ದೆಹಲಿ- ಜೈಪುರ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನರಸಿಂಗ್ ಪುರ್ ಹಳ್ಳಿ ಬಳಿ 8 ಎಕರೆಯ ಭೂಮಿ ಇದು. ಇದನ್ನು ಆಗಸ್ಟ್ 2014ರಲ್ಲಿ ಹರ್ಯಾಣ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ. ಟ್ರಾನ್ಸ್ ಪೋರ್ಟ್ ಮತ್ತು ಕಮ್ಯೂನಿಕೇಷನ್ ವಲಯ ಸೃಷ್ಟಿಸುವುದಕ್ಕಾಗಿ ಈ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಭೂಮಿಯ ಮಾಲೀಕರಿಗೆ ಸ್ವಾಧೀನದ ಸಂದರ್ಭದಲ್ಲಿ 44.01 ಕೋಟಿ ರುಪಾಯಿ ನೀಡಲಾಗಿದೆ. ಆದರೆ ಇತರ ಭೂಮಿಯ ಮಾಲೀಕರು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ, ಕೋರ್ಟ್ ಮೆಟ್ಟಿಲೇರಿದಾಗ ಕಾನೂನು ಸಮಸ್ಯೆ ಎದುರಾಗಿದೆ.

   ದರ ಏರಿಕೆ ಆಗುತ್ತಲೇ ಹೋಗುತ್ತದೆ

   ದರ ಏರಿಕೆ ಆಗುತ್ತಲೇ ಹೋಗುತ್ತದೆ

   ಕೆಲವು ವರ್ಷಗಳ ನಂತರ ಭೂಮಿಯ ಮಾರುಕಟ್ಟೆ ಮೌಲ್ಯ 200 ಕೋಟಿ ರುಪಾಯಿಗೂ ಹೆಚ್ಚಾಗಿದೆ. ಸದ್ಯಕ್ಕೆ ಬಡ್ಡಿಯೂ ಸೇರಿಸಿ, ಈ ಭೂಮಿಯ ಮೌಲ್ಯ 400 ಕೋಟಿ ರುಪಾಯಿಯಷ್ಟು ಆಗಿದೆ. "ಈ ಮೊತ್ತವು ಏರುತ್ತಲೇ ಹೋಗುತ್ತದೆ. ಎಲ್ಲಿಯವರೆಗೆ ಅಂದರೆ, ಎಫ್ ಐಆರ್ ತಾರ್ಕಿಕ ಅಂತ್ಯ ಕಾಣಬೇಕು ಹಾಗೂ ಕೋರ್ಟ್ ನಿಂದ ನಿಜವಾದ ಚರಣ್ ಜೀತ್ ಸಿಂಗ್ ಯಾರು ಅಂತ ಕಂಡುಹಿಡಿಯಬೇಕು" ಎನ್ನುತ್ತಾರೆ ದೂರು ದಾಖಲಿಸಿರುವ ಗುರುಗ್ರಾಮ ಮೂಲದ ರಮೇಶ್ ಯಾದವ್. ಈ ಪ್ರಕರಣವನ್ನು ಗುರುಗ್ರಾಮದ ಭೂಸ್ವಾಧೀನಾಧಿಕಾರಿ ಅವರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ವ್ಯಾಪ್ತಿಗೆ 2018ರಲ್ಲಿ ಒಪ್ಪಿಸಿದ್ದಾರೆ. ಕೇಸು ಇನ್ನೂ ಬಾಕಿಯಿದೆ.

   English summary
   The piece of land that is in the question measures 64.14 kanals (approximately 8 acres) in Narsinghpur village on Delhi-Jaipur NH-48. It was acquired by the Haryana government in August 2014.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X