• search
  • Live TV
ಗುರ್ ಗಾಂವ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುರುಗ್ರಾಮದಲ್ಲಿ ಉಜ್ಬೇಕಿಸ್ತಾನದ ಮಹಿಳೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ

By ಅನಿಲ್ ಆಚಾರ್
|

ಗುರುಗ್ರಾಮ, ಆಗಸ್ಟ್ 13: ಎರಡು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದ ಉಜ್ಬೇಕಿಸ್ತಾನದ ಮಹಿಳೆಯೊಬ್ಬರ ಮೇಲೆ ಗುರುಗ್ರಾಮದಲ್ಲಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರಲ್ಲಿ ಒಬ್ಬಾತ ಗುಜರಿ ವಸ್ತುಗಳ ಮಾರಾಟಗಾರನಾಗಿದ್ದು, ಫೇಸ್ ಬುಕ್ ನಲ್ಲಿ ತನ್ನ ಸ್ನೇಹಿತರ ಪಟ್ಟಿಯಿಂದ ಆತನನ್ನು ಮಹಿಳೆ ಹೊರಗಿಟ್ಟಿದ್ದರು.

ಪೊಲೀಸರಿಗೆ ಆ ಮಹಿಳೆ ನೀಡಿದ ಮಾಹಿತಿ ಪ್ರಕಾರ: ಗುರುಗ್ರಾಮದಲ್ಲಿ ವಾಸವಿರುವ ಗುಜರಿ ವಸ್ತುಗಳ ವ್ಯಾಪಾರಿ ಕಳೆದ ಎರಡು ವರ್ಷಗಳಿಂದ ಆಕೆಗೆ ಸ್ನೇಹಿತನಾಗಿದ್ದ. ಕಳೆದ ಶನಿವಾರದಂದು ಮಹಿಳೆಗೆ ಕರೆ ಮಾಡಿ ಭೇಟಿ ಮಾಡಬೇಕು ಎಂದಿದ್ದ ಆತ, ದಕ್ಷಿಣ ದೆಹಲಿಯ ಮಸೂದ್ ಪುರ್ ನಿಂದ ಕಾರಿನಲ್ಲಿ ಕರೆದೊಯ್ದಿದ್ದ. ಆತನ ಜತೆಗೆ ಇಬ್ಬರು ಇದ್ದರು.

ಪೋಕ್ಸೊ ತಿದ್ದುಪಡಿ ಅಂಗೀಕಾರ: ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲುಪೋಕ್ಸೊ ತಿದ್ದುಪಡಿ ಅಂಗೀಕಾರ: ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲು

ಕಾರಿನಲ್ಲಿ ಗುರುಗ್ರಾಮದಲ್ಲಿನ ಒಂದು ಫ್ಲ್ಯಾಟ್ ಗೆ ಕರೆದೊಯ್ಯಲಾಯಿತು. ಅಲ್ಲಿ ಮೂವರು ಸೇರಿ ಅತ್ಯಾಚಾರ ಮಾಡಿ, ಹಲ್ಲೆ ನಡೆಸಿದ್ದಾರೆ. ಆ ನಂತರ ದಕ್ಷಿಣ ದೆಹಲಿಯಲ್ಲಿನ ಮಹಿಳೆಯ ಫ್ಲ್ಯಾಟ್ ಬಳಿ ಬಿಸಾಡಿ ಹೋಗಿದ್ದಾರೆ. ಆಮೇಲೆ ಆಕೆಯನ್ನು ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ತನ್ನ ಮೇಲೆ ಆದ ದೌರ್ಜನ್ಯವನ್ನು ಆಕೆ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯಕ್ಕೆ ಮೂವರು ಆರೋಪಿಗಳು ನಾಪತ್ತೆ ಆಗಿದ್ದಾರೆ. ಆರೋಪಿಗಳ ವಿರುದ್ಧ ದೂರು ದಾಖಲಿಸದಂತೆ ಆರೋಪಿಗಳ ಪೋಷಕರು ಒತ್ತಡ ಹೇರಿದ್ದರು ಎಂದು ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾರೆ. ಮಹಿಳೆಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.

English summary
Three men gang raped Uzbekistan woman in Gurgaon. Scrap dealer also included in 3 accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X