• search
  • Live TV
ಗುರ್ ಗಾಂವ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಪಿಐಎಂ ಮುಖಂಡ ಸೀತಾರಂ ಯೆಚೂರಿ ಪುತ್ರ ಕೊರೊನಾಕ್ಕೆ ಬಲಿ

|
Google Oneindia Kannada News

ಗುರುಗ್ರಾಮ, ಏಪ್ರಿಲ್ 22: ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಪುತ್ರ ಆಶೀಶ್ ಯೆಚೂರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕೊವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಆಶೀಶ್ ಅವರಿಗೆ 34 ವರ್ಷವಾಗಿತ್ತು.

ಕಳೆದ ಎರಡು ವಾರಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಆಶೀಶ್ ಕೆಲದಿನಗಳಲ್ಲಿ ಚೇತರಿಕೆ ಹೊಂದುವ ನಿರೀಕ್ಷೆಯಿತ್ತು. ಆದರೆ, ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 5.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಆಪ್ತವಲಯ ತಿಳಿಸಿದೆ.

ಸಿಪಿಐ(ಎಂ) ಪೊಲಿಟ್ ಬ್ಯುರೋ ಸೀತಾರಾಮ್ ಯೆಚೂರಿ, ಇಂದ್ರಾಣಿ ಮಜುಂದಾರ್, ಆಶೀಶ್ ಅವರ ಪತ್ನಿ ಸ್ವಾತಿ, ಸೋದರಿ ಅಖಿಲಾ ಮತ್ತು ದುಃಖ ಸಂತಪ್ತ ಕುಟುಂಬದ ಇತರ ಸದಸ್ಯರಿಗೆ ತನ್ನ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸಿದೆ.

ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ದೆಹಲಿಯ ಪ್ರಮುಖ ಮಾಧ್ಯಮ ಸಂಸ್ಥೆಯಲ್ಲಿ ಕಾಪಿ ಎಡಿಟರ್ ಆಗಿ ಆಶೀಶ್ ಕಾರ್ಯ ನಿರ್ವಹಿಸುತ್ತಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಸೀತಾರಾಂ ಯೆಚೂರಿ, "ನನ್ನ ಹಿರಿಯ ಪುತ್ರ ಆಶೀಶ್ ಕೋವಿಡ್ 19ನಿಂದ ಕಳೆದುಕೊಂಡೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಶೀಶ್‌ಗೆ ಚಿಕಿತ್ಸೆ ನೀಡಿದ ಎಲ್ಲಾ ವೈದ್ಯ, ನರ್ಸ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ನನ್ನ ನಮನಗಳು'' ಎಂದಿದ್ದಾರೆ.

ಕಾಂಗ್ರೆಸ್ ಮುಖಂಡ ಶಶಿ ತರೂರ್ ಸೇರಿದಂತೆ ಹಲವಾರು ಗಣ್ಯರು, ಸೀತಾರಾಂ ಅವರಿಗೆ ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ.

English summary
CPI(M) leader Sitaram Yechury's eldest son, Ashish Yechury passed away due to COVID19 at a private hospital in Gurugram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion