• search

ಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳು

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಪ್ರದ್ಯುಮನ್ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿಷಯಗಳು | Oneindia Kannada

    ಗುರ್ಗಾಂವ್, ನವೆಂಬರ್ 13 : ಶೌಚಾಲಯಕ್ಕೆಂದು ಬಂದಿದ್ದ ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರದ್ಯುಮ್ನನನ್ನು ಹದಿನಾರು ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿ ಹತ್ಯೆಗೈದಿದ್ದು ಅಚಾನಕ್ಕಾಗಿ ಅಲ್ಲ. ಆತ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ನೀಡುತ್ತಿರುವ ಒಂದೊಂದು ಹೇಳಿಕೆಗಳೂ ಬೆಚ್ಚಿ ಬೀಳಿಸುವಂತಿವೆ.

    ಪ್ರದ್ಯುಮ್ನ ಹತ್ಯೆ ಪ್ರಕರಣಕ್ಕೆ ಮತ್ತೆ ಹೊಸ ತಿರುವು!

    ಕೊಲೆ ಮಾಡಲು ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮೊದಲೇ ಪ್ಲಾನ್ ಮಾಡಿದ್ದ. ಪ್ರದ್ಯುಮ್ನ ತನಗೆ ಮೊದಲೇ ಪರಿಚಿತನಾಗಿದ್ದರಿಂದ ಹಂತಕನಿಗೆ ಕೊಲೆಗೈಯುವುದು ಸರಳವಾಗಿತ್ತು. ಈ ಕ್ರೌರ್ಯಕ್ಕೆ ಆತ ಮಾಡಿಕೊಂಡ ಸಿದ್ಧತೆಯಿದೆಯಲ್ಲ ಅದು ಮೈನಡುಗಿಸುವಂತಿವೆ.

    ಪ್ರದ್ಯುಮ್ನ ಹತ್ಯೆಯ ಹಿಂದೆ ಮತ್ತೋರ್ವ ವಿದ್ಯಾರ್ಥಿ ಕೈವಾಡ

    ರಯನ್ ಇಂಟರ್ನ್ಯಾಷನಲ್ ಶಾಲೆಯ ಪರೀಕ್ಷೆಯನ್ನು ಮುಂದೂಡುವಂತೆ ಮಾಡುವುದು ಆತನ ಪ್ರಥಮ ಆದ್ಯತೆಯಾಗಿತ್ತು. ಜೊತೆಗೆ ಓದಿನಲ್ಲಿ ಹಿಂದಿದ್ದರಿಂದ ಪಾಲಕರ ಮತ್ತು ಶಿಕ್ಷಕರ ಭೇಟಿಯನ್ನು ಕೂಡ ತಪ್ಪಿಸಿಕೊಳ್ಳುವುದು ಆತನ ಇರಾದೆಯಾಗಿತ್ತು. ಅದಕ್ಕಾಗಿ ಆತ ಆಯ್ದುಕೊಂಡಿದ್ದು ಪಿಯಾನೋ ಕ್ಲಾಸಿಗೆ ಜೊತೆಯಾಗಿ ಹೋಗುತ್ತಿದ್ದ ಪ್ರದ್ಯುಮ್ನನನ್ನು.

    'ಮಗನನ್ನು ಕಾಪಾಡಿದ ಪ್ರದ್ಯುಮ್ನನ ತಂದೆಗೆ ಋಣಿ'

    ಕ್ಷುಲ್ಲಕ ಕಾರಣಕ್ಕಾಗಿ ಓರ್ವ ಅಮಾಯಕ ವಿದ್ಯಾರ್ಥಿಯ ಜೀವವನ್ನು ತೆಗೆದುಕೊಂಡ ಹನ್ನೊಂದನೇ ತರಗತಿಯ ವಿದ್ಯಾರ್ಥಿಯನ್ನು ನವೆಂಬರ್ 22ರವರೆಗೆ ನಿರೀಕ್ಷಣೆಯಲ್ಲಿ ಇಡಲಾಗುವುದು. ಸಿಬಿಐ ಈಗಾಗಲೆ ತನ್ನ ವಿಚಾರಣೆಯನ್ನು ಮುಗಿಸಿದ್ದು, ಆತನಿಂದ ಹೆಚ್ಚಿನ ವಿವರಗಳೇನೂ ಬೇಕಾಗಿಲ್ಲ ಎಂದು ಹೇಳಿದೆ.

    ಪ್ರದ್ಯುಮ್ನನನ್ನು ಹೇಗೆ ಕೊಲೆ ಮಾಡುವುದು?

    ಪ್ರದ್ಯುಮ್ನನನ್ನು ಹೇಗೆ ಕೊಲೆ ಮಾಡುವುದು?

    ಪ್ರದ್ಯುಮ್ನನನ್ನು ಹೇಗೆ ಹತ್ಯೆಗೈಯುವುದು ಎಂದು ಆತ ಸಾಕಷ್ಟು ತಲೆಕೆಡಿಸಿಕೊಂಡಿದ್ದ. ಇದಕ್ಕಾಗಿ ಆತ ಇಂಟರ್ನೆಟ್ಟನ್ನು ಸಾಕಷ್ಟು ಜಾಲಾಡಿದ್ದಾನೆ. ಮೊದಲಿಗೆ ಆತನಿಗೆ ಕಂಡಿದ್ದು ವಿಷ. ಹಲವಾರು ಬಗೆಯ ವಿಷಗಳ ಬಗ್ಗೆ ಆತ ಸಾಕಷ್ಟು ಮಾಹಿತಿ ಕಲೆಹಾಕಿದ್ದ. ಆದರೆ, ಆತ ವಿಷ ಕೊಳ್ಳಲಿಲ್ಲ.

    ವಿಷದ ಬದಲಿಗೆ ಆತ ಕೊಂಡಿದ್ದು ಚಾಕು

    ವಿಷದ ಬದಲಿಗೆ ಆತ ಕೊಂಡಿದ್ದು ಚಾಕು

    ಅನಾಜ್ ಮಂದಿರದ ಬಳಿಯಿರುವ ಅಂಗಡಿಯೊಂದರಲ್ಲಿ ಸೆಪ್ಟೆಂಬರ್ 7ರಂದು ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ಹಂತಕ ವಿದ್ಯಾರ್ಥಿ ಚಾಕುವನ್ನು ಕೊಂಡಿದ್ದಾನೆ. ಕೊಂಡದ್ದೇನೋ ಸರಿ, ಆದರೆ ಆತನಿಗೆ ಅದನ್ನು ಹೇಗೆ ಬಳಸುವುದು ಎಂಬುದು ಗೊತ್ತಿರಲಿಲ್ಲ. ಹೀಗಾಗಿ ಆತ ತೀವ್ರ ಗೊಂದಲದಲ್ಲಿದ್ದ.

    ಅಂತಿಮಗೊಳಿಸಿದ್ದು ಚಾಕುವಿನಿಂದ ಹತ್ಯೆ

    ಅಂತಿಮಗೊಳಿಸಿದ್ದು ಚಾಕುವಿನಿಂದ ಹತ್ಯೆ

    ಅಂಜುತ್ತ ಅಳುಕುತ್ತಲೇ ಅಂದು ಆತ ಶಾಲೆಗೆ ಬಂದಿದ್ದ. ಮೊದಲಿಗೆ ವಿಷ ಕೊಂಡು ಅದನ್ನು ಪ್ರದ್ಯುಮ್ನನ ನೀರಿನಲ್ಲಿ ಬೆರೆಸಿ ಹತ್ಯೆಗೈಯುವುದು ಆತನ ಉದ್ದೇಶವಾಗಿತ್ತು. ಇದರಿಂದ ಆತ ಸಾಯದೇ ಇರಲೂಬಹುದು ಎಂದು ಆತ ಲೆಕ್ಕಾಚಾರ ಹಾಕಿದ್ದ. ನಂತರ ಅಂತಿಮಗೊಳಿಸಿದ್ದು ಚಾಕುವಿನಿಂದ ಹತ್ಯೆ.

    ಶೌಚಾಲಯದಲ್ಲಿ ಕಾಯುತ್ತಿತ್ತು ಹರಕೆಯ ಕುರಿ

    ಶೌಚಾಲಯದಲ್ಲಿ ಕಾಯುತ್ತಿತ್ತು ಹರಕೆಯ ಕುರಿ

    ಆಗ ಶಾಲೆಯಲ್ಲಿ ಆತನ ಕಣ್ಣಿಗೆ ಪ್ರದ್ಯುಮ್ನ ಬಿದ್ದಿದ್ದಾನೆ. ಏನೋ ನೆಪವೊಡ್ಡಿ ಆತನನ್ನು ಶೌಚಾಲಯಕ್ಕೆ ಬರಲು ಹೇಳಿದ್ದಾನೆ. ಚಾಕುವಿನಿಂದ ಚುಚ್ಚಿ ಸಾಯಿಸುವುದು ಆತನ ಉದ್ದೇಶವಾಗಿತ್ತು. ಧೈರ್ಯ ಸಾಲದೆ ಸಂಗೀತ ಕ್ಲಾಸಿಗೆ ಓಡಿದ್ದಾನೆ. ಅದು ಬಂದ್ ಆಗಿದ್ದರಿಂದ ವಾಪಸ್ ಬಂದಿದ್ದಾನೆ. ಆಗ ಪ್ರದ್ಯುಮ್ನ ಹಂತಕನಿಗಾಗಿ ಇನ್ನೂ ಶೌಚಾಲಯದಲ್ಲಿ ಕಾಯುತ್ತಲೇ ಇದ್ದ.

    ಅದೇ ಸಮಯದಲ್ಲಿ ಬಸ್ ಕಂಡಕ್ಟರ್ ಕೂಡ ಅಲ್ಲಿದ್ದ

    ಅದೇ ಸಮಯದಲ್ಲಿ ಬಸ್ ಕಂಡಕ್ಟರ್ ಕೂಡ ಅಲ್ಲಿದ್ದ

    ಆ ಸಮಯದಲ್ಲಿ ಈಗಾಗಲೆ ಬಂಧಿತನಾಗಿರುವ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಕೂಡ ಇದ್ದ. ಆದರೆ, ಆತ ಅವರಿಬ್ಬರನ್ನೂ ನೋಡಿಲ್ಲ. ಏಕೆಂದರೆ, ಹಂತಕ ಪ್ರದ್ಯುಮ್ನನನ್ನು ಟಾಯ್ಲೆಟ್ ಒಳಗೆ ಎಳೆದುಕೊಂಡು ಹೋಗಿದ್ದ. ತನ್ನ ಕೆಲಸ ಮುಗಿಸಿದ ಕುಮಾರ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.

    ಕಡೆ ಘಳಿಗೆಯಲ್ಲಿ ಕೊಲೆ ಮಾಡುವ ರೀತಿ ಬದಲು

    ಕಡೆ ಘಳಿಗೆಯಲ್ಲಿ ಕೊಲೆ ಮಾಡುವ ರೀತಿ ಬದಲು

    ನಂತರ ಅಲ್ಲಿ ಇದ್ದದ್ದು ಹಂತಕ ಮತ್ತು ಪ್ರದ್ಯುಮ್ನ ಮಾತ್ರ. ಮೊದಲು ಚಾಕುವಿನಿಂದ ಚುಚ್ಚಿ ಕೊಲೆ ಮಾಡಬೇಕೆಂದಿದ್ದವನು, ಚುಚ್ಚಿದರೆ ಕಿರುಚಿಕೊಂಡಾನು ಎಂದು ಕಡೆ ಘಳಿಗೆಯಲ್ಲಿ ನಿರ್ಧಾರ ಬದಲಿಸಿದ್ದಾನೆ. ನಂತರ ನಿರ್ದಾಕ್ಷಿಣ್ಯವಾಗಿ ಪ್ರದ್ಯುಮ್ನನ ಕತ್ತು ಕೊಯ್ದು, ಓಡೋಡುತ್ತ ಬಂದು ತೋಟದ ಮಾಲಿಗೆ ತಿಳಿಸಿದ್ದಾನೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The 16-year-old accused in the gruesome murder of Pradyuman Thakur in Ryan International School in Gurgaon has given chilling information about how he killed the innocent student. He wanted to kill him using poison. But, last minute decided to slash Pradyuman.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more