ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಎನ್ನುವ ಭಂಡತನ : ಸಿದ್ದು ವಿರುದ್ಧ ವಿಜಯೇಂದ್ರ ಕಿಡಿ
ಗದಗ, ಆಗಸ್ಟ್ 22: ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಏನನ್ನು ಬೇಕಾದರೂ ತಿನ್ನಬಹುದು , ಪ್ರತಿಯೊಬ್ಬರಿಗೂ ತಿನ್ನುವ ಸ್ವಾತಂತ್ರ್ಯ ಇದೆ. ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೀನಿ ಎನ್ನುವುದು ಬಂಡತನ, ಇಂತಹ ಹೇಳಿಕೆಯನ್ನ ಯಾರೂ ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರ 71 ನೇ ಜನ್ಮದಿನೋತ್ಸವಕ್ಕಾಗಿ ಆಗಮಿಸಿ, ಲಕ್ಷ್ಮೇಶ್ವರದಲ್ಲಿ ಮಾತನಾಡಿದ ವಿಜಯೇಂದ್ರ, ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Recommended Video
ಪುಂಡರಿಗೂ ಬಿಜೆಪಿ ಅಪರೇಷನ್ ಕಮಲ ಮಾಡುತ್ತಿದೆಯೇ? ಸಿದ್ದರಾಮಯ್ಯ ವ್ಯಂಗ್ಯ
" ಈ ರಾಜ್ಯದಲ್ಲಿ ಸಂಸ್ಕೃತಿ ಪರಂಪರೆ ಇದೆ. ಧಾರ್ಮಿಕ ಶ್ರದ್ಧೆ ಇದೆ. ದೈವವನ್ನ ನಂಬಿ ಜೀವನ ನಡೆಸುವ ಅಪಾರ ಜನರಿದ್ದಾರೆ. ಉನ್ನತ ಸ್ಥಾನದಲ್ಲಿರುವವರು, ರಾಜಕಾರಣದಲ್ಲಿ ಇರುವವರು ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ರಾಜಕಾರಣಿಗಳ ಹೇಳಿಕೆಗಳು ಜನರಿಗೆ ಮಾದರಿಯಾಗಬೇಕೆ ಹೊರೆತು, ಇತರರಿಗೆ ಘಾಸಿಯನ್ನುಂಟುಬಾರದು. ಮಾಂಸ ತಿಂದು ದೇವಾಸ್ಥಾನಕ್ಕೆ ಹೋಗುತ್ತೇನೆ ಎಂಬ ಹೇಳಿಕೆಯನ್ನ ನಾನಲ್ಲ, ಇಡೀ ರಾಜ್ಯದ ಜನರು ಖಂಡಿಸುತ್ತಿದ್ದಾರೆ " ಎಂದು ತಿಳಿಸಿದರು.
ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಮಠ-ಮಾನ್ಯಗಳಿಗೆ ಭೇಟಿಕೊಡುತ್ತಿದ್ದಾರೆ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿ. ಸಿದ್ದರಾಮಯ್ಯ ದೇವಾಲಯಕ್ಕೆ, ಮಠಗಳಿಗೆ ಹೋಗಿರುವುದರಲ್ಲಿ ತಪ್ಪೇನಿಲ್ಲ. ಆದರೆ ಕಾಂಗ್ರೆಸ್‌ನವರು ಈಗಲೇ ಅಧಿಕಾರಕ್ಕೆ ಬಂದೇ ಬಿಟ್ವಿ ಎನ್ನುವ ಅತಿಯಾದ ವಿಶ್ವಾಸದಲ್ಲಿದ್ದಾರೆ. ಬಿಜೆಪಿಯ ಹಿರಿಯ ನಾಯಕರು, ಪ್ರಧಾನ ಮಂತ್ರಿಗಳು ಯಡಿಯೂರಪ್ಪರಿಗೆ ಉನ್ನತ ಸ್ಥಾನ ಕೊಟ್ಟಿದ್ದು, ಇದು ಕಾಂಗ್ರೆಸ್‌ಗೆ ಆಘಾತವನ್ನುಂಟು ಮಾಡಿದೆ. ಏಕೆಂದರೆ ಅವರ ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿಯಾಗಬಹುದು ಎನ್ನುವುದು ಅವರಲ್ಲಿರುವ ಆತಂಕವಾಗಿದೆ. ಅದಕ್ಕಾಗಿ ದೇವಾಸ್ಥಾನಗಳಿಗೆ, ಮಠಗಳಿಗೆ ,ಭೇಟಿ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದರು.
ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆದದ್ದು ಕೈ ಕಾರ್ಯಕರ್ತರೇ: ಸುಧಾಕರ್
ಕಾಂಗ್ರೆಸ್ ಹಿರಿಯ ನಾಯಕರು ತಾವೂ ಮತ್ತೊಮ್ಮೆ ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಾಗಿರುವುದಕ್ಕೆ ಜಾತಿ ಜಾತಿಗಳ ನಡುವೆ ತಂದಿಕ್ಕುವ ಪ್ರಯತ್ನ ಮಾಡಿದ್ದರು. ಇದೀಗ ಕ್ರಾಂತಿಕಾರಿಯಾಗಿರುವ , ಸ್ವಾತಂತ್ರ್ಯ ಹೋರಾಟ ಸಾವರ್ಕರ್ ರನ್ನು ಬೀದಿಗೆ ತಂದು ಅವಮಾನ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುವುದು ಯಾರಿಗೂ ಸರಿಯಲ್ಲ ಎಂದರು.

ಇನ್ನು ಯಡಿಯೂರಪ್ಪರಿಗೆ ಉನ್ನತ ಸ್ಥಾನ ಸಿಕ್ಕಿದೆ, ನಿಮಗೂ ಪಕ್ಷದಲ್ಲಿ ಬೇರೆ ಜವಾಬ್ದಾರಿ ಸಿಗಬಹುದಾ? ಎಂಬುವುದರ ಬಗ್ಗೆ ಕೇಳಿದ್ದಕ್ಕೆ, ಯಡಿಯೂರಪ್ಪ ಯಾವತ್ತೂ ಸ್ಥಾನಕ್ಕಾಗಿ ನಿರೀಕ್ಷೆ ಮಾಡಿರಲಿಲ್ಲ, ಪಕ್ಷ ಅವರಿಗೆ ದೊಡ್ಡ ಜವಾಬ್ದಾರಿ ನೀಡಿದೆ. ಆ ಜವಾಬ್ದಾರಿಯನ್ನು ಹಿಂದೆಯೂ ನಿರ್ವಹಿಸಿದ್ದಾರೆ, ಮುಂದೆಯೂ ನಿರ್ವಹಿಸಲಿದ್ದಾರೆ. ನಾನು ರಾಜ್ಯದ ಉಪಾಧ್ಯಕ್ಷನಾಗಿದ್ದು ಪಕ್ಷ ಸಂಘಟನೆ ಮಾಡಿಕೊಂಡು ಹೋಗುತ್ತೇನೆ ಎಂದರು.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾವುದೇ ಪ್ರತಿಭಟನೆ ವೇಳೆ ಎಚ್ಚರಿಕೆಯಿಂದಿರಬೇಕು, ಯಾರೇ ಆದರೂ ನಮ್ಮ ಎಲ್ಲೆಯಲ್ಲಿರಬೇಕು, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಅವರಿಗೆ ಗೌರವ ಕೊಡಬೇಕು, ನಮ್ಮ ರಾಜ್ಯದಲ್ಲಿಇಂತಹ ಘಟನೆ ನಡೆದಿರಲಿಲ್ಲ, ಸಿದ್ದರಾಮಯ್ಯ ಮಾತ್ರವಲ್ಲ, ಅವರ ಸ್ಥಾನದಲ್ಲಿ ಯಾರೇ ಇದ್ದರೂ ಇಂತಹ ಘಟನೆ ನಡೆಯಬಾರರು ಎಂದು ಹೇಳಿದರು.