ಪಾಕ್ ಪರ ಘೋಷಣೆ ಕೂಗಿದವರ ನಾಲಿಗೆ ಕೊಯ್ದವರಿಗೆ ಮೂರು ಲಕ್ಷ ಬಹುಮಾನ
ಗದಗ, ಫೆಬ್ರವರಿ 20: ಪಾಕಿಸ್ತಾನದ ಪರ ಘೋಷಣೆ ಕೂಗಿದ ಹುಬ್ಬಳ್ಳಿಯ ಕೆಎಲ್‌ಇ ಕಾಲೇಜು ವಿದ್ಯಾರ್ಥಿಗಳ ನಾಲಗೆ ಕತ್ತಿರಿಸಿದವರಿಗೆ ಮೂರು ಲಕ್ಷ ಬಹುಮಾನವನ್ನು ಶ್ರೀರಾಮ ಸೇನೆ ಘೋಷಿಸಿದೆ.
ಗದಗದಲ್ಲಿ ಆಯೋಜಿಸಿದ್ದ ಶಿವಾಜಿ ಜಂಯತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮಸೇನೆಯ ಮುಖಂಡ ಸಿದ್ದಲಿಂಗ ಸ್ವಾಮಿ, ಹುಬ್ಬಳ್ಳಿಯಲ್ಲಿ ಪಾಕ್ ಪರ ಘೊಷಣೆ ಕೂಗಿದ ಮೂರು ವಿದ್ಯಾರ್ಥಿಗಳ ನಾಲಗೆ ಕತ್ತರಿಸಿ ತಂದರೆ ಮೂರು ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.
ಒಂದೊಂದು ನಾಲಗೆಗೆ ಒಂದೊಂದು ಲಕ್ಷದಂತೆ ಮೂರು ಜನರ ನಾಲಗೆ ಕತ್ತರಿಸಿದರೆ ಮೂರು ಲಕ್ಷ ನೀಡುವುದಾಗಿ ಘೋಷಣೆ ನೀಡಿದ್ದಾರೆ.

'ಪಾಕ್ ಪರ ಘೊಷಣೆ ಕೂಗಲು ಇದು ಇಮ್ರಾನ್ ಖಾನ್ ದೇಶವಲ್ಲ, ಇಮ್ರಾನ್ ಖಾನ್ ನ ಅಪ್ಪ ಮೋದಿ ಮತ್ತು ಶಿವಾಜಿಯ ದೇಶ' ಎಂದು ಅವರು ಹೇಳಿದರು.
ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications