ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಲಕ್ಷಾಂತರ ರೂ. ಗುಳುಂ; ಜಿಪಂ ಸಿಇಒ ರೈತ ಸಂಘ ಪತ್ರ

ಗದಗ, ಅಕ್ಟೋಬರ್ 13: ತಾಲ್ಲೂಕಿನ ತಿಮ್ಮಾಪೂರ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯಾದ ಭರಮಗುಡಿ ಹಳ್ಳವನ್ನು ಹೂಳು ಎತ್ತುವುದು ಮತ್ತು ಅಭಿವೃದ್ಧಿ ಪಡಿಸುವುದು ಕೆಲಸಕ್ಕೆ ಸುಮಾರು 11 ಲಕ್ಷ ರೂಪಾಯಿಗಳ ಕಾಮಗಾರಿಯಲ್ಲಿ ಕೆಲಸಕ್ಕೆ ಹೋಗದೆ ಇರುವವರ ಹೆಸರಿನಲ್ಲಿ ಎನ್‌ಎಮ್‌ಆರ್‌ ಹಾಕಿ ಪೇಮೆಂಟ್ ಮಾಡಿ ಲಕ್ಷಾಂತರ ರೂಪಾಯಿ ಆರೋಪ ಕೇಳಿಬಂದಿದೆ.

ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಸಂಪೂರ್ಣ ಕಳಪೆ ಕಾಮಗಾರಿಯನ್ನು ಮಾಡಿ ಕೆಲಸಕ್ಕೆ ಹೋಗದೆ ಇರುವವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸರಕಾರದ ಹಣವನ್ನು ಲೂಟಿಮಾಡಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಒ , ಇಂಜಿನಿಯರ್‌ , ಅಧ್ಯಕ್ಷ ಹಾಗೂ ಜಿಕೆಎಂ ಕಾಯಕ ಬಂಧುಗಳ ಸೇರಿ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರೈತ ಸಂಘ ಆರೋಪಿಸಿ ಜಿಲ್ಲಾ ಪಂಚಾಯಿತ್ ಸಿಇಒಗೆ ಮನವಿ ಮಾಡಿದೆ.

ಪತ್ರದಲ್ಲಿ, ಭ್ರಷ್ಟಾಚಾರ ಕುರಿತು ಚರ್ಚಿಸಲು ಸಾರ್ವಜನಿಕರು ಹಾಗೂ ರೈತ ಸಂಘದ ಮುಖಂಡರು ಗ್ರಾಮ ಪಂಚಾಯತಿಗೆ ಭೇಟಿ ನೀಡಿದಾಗ ಪಿಡಿಒ ಸುಮಂಗಲಾ ಪತ್ತಾರರನ್ನು ವಿಚಾರಿಸಿದರೆ ಅರಿಕೆ ಉತ್ತರವನ್ನು ನೀಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲ್ಲಪ್ಪ ಗಾಜಿ ಸಾರ್ವಜನಿಕರ ಮೇಲೆ ದರ್ಪ ತೋರಿಸಿ ನೀವು ಏನು ಮಾಡುತ್ತೀರಾಮ ಮಾಡಿಕೊಳ್ಳಿ ಎಂದು ತನ್ನ ಆಪ್ತರಿಂದ ನ್ಯಾಯವನ್ನು ಕೇಳಲುಬಂದ ಸಾರ್ವಜನಿಕ ಮೇಲೆ ಗುಂಡಾಗಿರಿಯನ್ನು ಮಾಡಿಸಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಕೆಲಸದ ವೇಳೆಯಲ್ಲಿ ಕಾರ್ಯನಿರ್ವಹಣೆ ಮಾಡುವ ಬದಲು ರಾತ್ರಿ 10 ಗಂಟೆಯ ಮೇಲೆ ಗ್ರಾಮ ಪಂಚಾಯತಿ ಕಾರ್ಯ ಚಟುವಟಿಕೆ ನೆಡೆಯುತ್ತಿವೆ ಎಂದು ಆರೋಪಿಸಲಾಗಿದೆ.

Raitha Sangh Accused Corruption in Employment Guarantee Scheme

ತಿಮ್ಮಾಪೂರ ಗ್ರಾಮದಲ್ಲಿ ಒಟ್ಟು 650 ಜನ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಹೊಂದಿದ ಕೂಲಿ ಕಾರ್ಮಿಕರು ಇದ್ದಾರೆ. ಆದರೆ ಎಲ್ಲಾ ಕೂಲಿ ಕಾರ್ಮಿಕರಿಗೆ ಇಲ್ಲಿ ಉದ್ಯೋಗ ಸಿಗುತ್ತಿಲ್ಲ. ಅಧ್ಯಕ್ಷ ಆಪ್ತರಾದ ಪ್ರಕಾಶ ಯತ್ನಟ್ಟಿ ಹಾಗೂ ಶಿವಪುತ್ರಪ್ಪ ತಿಮ್ಮಾಪೂರ ಉದ್ಯೋಗ ಮಿತ್ರ ಕೆಲಸಮಾಡುತಿದ್ದು ತಮಗೆ ಬೇಕಾದವರನ್ನು ಮಾತ್ರ ಕೆಲಸಕ್ಕೆ ಕೆರೆದುಕೂಂಡು ಸರಕಾರಿ ಕೆಲಸದ ಸಮಯದಲ್ಲಿ ತನ್ನ ವೈಯಕ್ತಿಕ ಮನೆ ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾನೆ. ಬಡ ಕೂಲಿ ಕಾರ್ಮಿಕರು ನಾವು ಯಾಕೆ ನಿನ್ನ ಕೆಲಸವನ್ನು ಮಾಡಬೇಕು ಎಂದರೆ ನಾಳೆಯಿಂದ ನೀವು ಕೆಲಸಕ್ಕೆ ಬರಬೇಡಿ ಎಂದು ಧಮಕಿ ಹಾಕಿದ್ದಾನೆ ಎಂದು ಹೇಳಿ ಬೆದರಿಸಿದ್ದಾನೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Raitha Sangh Accused Corruption in Employment Guarantee Scheme

ಅರಣ್ಯ ಇಲಾಖೆಯ ಜಲಾನಯನ ಯೋಜನೆಯಡಿ ರೈತರ ಜಮೀನುಗಳ ಬದುವುಗಳ ಮೇಲೆ ಸಸಿ ನೆಡುವ ಕಾಮಗಾರಿಯಲ್ಲಯೂ ಸಹ ಕೆಲಸಕ್ಕೆ ಹೋಗದೆ ಇರುವವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ. ಇದು ಸರಕಾರದ ಹಾಗೂ ಸಾರ್ವಜನಿಕರು ಹಣವಾಗಿರುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರಕಾರಕ್ಕೆ ಮರಳಿ ಆ ಹಣವನ್ನು ಸಂದಾಯ ಮಾಡಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಅವರಿಗೆ ಮನವಿ ಪತ್ರವನ್ನು ನೀಡಲಾಗಿದೆ .

ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಿಇಒ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+