ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ: ಲಕ್ಷ್ಮೇಶ್ವರದಲ್ಲಿ ಡಿ.4 ರಂದು ಪಂಚಮಸಾಲಿ ಸಮಾವೇಶ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ನ. 22: ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಡಿಸೆಂಬರ್ 4 ರಂದು ಪಂಚಮಸಾಲಿ ಸಮಾವೇಶ ನಡೆಯಲಿದೆ ಎಂದು ವಚನಾನಂದ ಶ್ರೀಗಳು ಹೇಳಿದರು.

ಡಿಸೆಂಬರ್ 4 ರಂದು ಬೆಳಗ್ಗೆ 10:30ಕ್ಕೆ ಪಟ್ಟಣದ ಸೋಮೇಶ್ವರ ತೇರಿನಮನೆ ಆವರಣದಲ್ಲಿ ಸಮಾವೇಶ ನಡೆಯಲಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಕೇಂದ್ರದ ಓಬಿಸಿ ಮೀಸಲಾತಿಗಾಗಿ ಬೃಹತ್‌ ಜನಜಾಗೃತಿ ಸಮಾವೇಶ ನಡೆಸಲಾಗುತ್ತದೆ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಿಂದೂ ಅಲ್ಲ: ವೀರಶೈವ ಮಹಾಸಭಾ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಿಂದೂ ಅಲ್ಲ: ವೀರಶೈವ ಮಹಾಸಭಾ

ಇದರ ಜೊತೆಗೆ ವೀರರಾಣಿ ಕಿತ್ತೂರು ಚನ್ನಮ್ಮರ 199 ನೇ ವಿಜಯೋತ್ಸವ ಮತ್ತು 244 ನೇ ಜಯಂತೋತ್ಸವ ಸಮಾರಂಭ ಏರ್ಪಡಿಸಲಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀ ಮಾಹಿತಿ ನೀಡಿದರು.

Panchamasali Convention on December 4 at Lakshmeshwar

ಸಮಾವೇಶದ ಹಿನ್ನೆಲೆ ಗದಗನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ 'ಸಮಾವೇಶದಲ್ಲಿ ರಾಜ್ಯ ಸರ್ಕಾರದ ಸಚಿವರು, ಶಾಸಕರು, ರಾಜ್ಯ ಸಂಘದ ಎಲ್ಲ ಪದಾಧಿಕಾರಿಗಳು, ಪಂಚಮಸಾಲಿ, ಇತರೇ ಸಮಾಜದ ಹಿರಿಯರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಮ್ಮ ಹಕ್ಕು ಪಡೆಯಲು ಗಮನ ಸೆಳೆಯುವುದು ಸಮಾವೇಶ ಉದ್ದೇಶ. ಸಮಾವೇಶಕ್ಕೆ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಜನ ಸೇರಲಿದ್ದಾರೆ" ಎಂದರು.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಯಿಂದ ಸಮಾಜದ ಜನರ ಕಲ್ಯಾಣ ಸಾಧ್ಯ. ಸಮಾವೇಶದಲ್ಲಿ ಸಮಾಜದವರು ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಬೇಕು ಎಂದರು.

ಪಂಚಮಸಾಲಿ ಸಂಘದ ರೈತ ಘಟಕ, ಯುವ ಘಟಕ, ಮಹಿಳಾ ಘಟಕ, ನಗರ ಘಟಕ, ವಾರ್ಡ್ ಘಟಕ, ಗ್ರಾಮ ಘಟಕಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

Panchamasali Convention on December 4 at Lakshmeshwar

ಈ ಹಿಂದೆ ವಿಜಯನಗರದಲ್ಲಿ ಮಾತನಾಡಿದ್ದ ಅವರು, ಸರ್ಕಾರ 2ಎ ಮೀಸಲಾತಿ ಕೊಡಲೇಬೇಕು. ಪ್ರಾಣವನ್ನಾದರೂ ಬಿಡುತ್ತೇವೆ, ಆದರೆ ಮೀಸಲಾತಿ ಬಿಡುವುದಿಲ್ಲ ಎಂದು ಘೋಷಿಸಿದ್ದರು.

English summary
Panchamasali convention on December 4 at Gadag's Lakshmeshwara says vachanananda swami. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X