ಅಪ್ಪು ಮನೆಯಲ್ಲಿಯೇ ನಮ್ಮ ಮಗುವಿಗೆ ನಾಮಕರಣ ಆಗಬೇಕು: ಗದಗ ಅಭಿಮಾನಿಯ ಹಂಬಲ

ಗದಗ, ಆಗಸ್ಟ್‌, 19: ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನ ಅಗಲಿ 9 ತಿಂಗಳಾದರೂ ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ. ಇಂದಿಗೂ ಸಾವಿರಾರು ಅಭಿಮಾನಿಗಳು ದಿನನಿತ್ಯ ಅವರನ್ನು ಸ್ಮರಿಸುತ್ತಾರೆ. ಅವರ ನಡೆಯನ್ನು ಗುಣಗಾಣ ಮಾಡುತ್ತಾರೆ. ಜಾತ್ರೆ, ದೇವ ಪೂಜೆ ಇರುವ ಸಂದರ್ಭಗಳಲ್ಲಿ ಅವರ ಪೋಟೋ ಹಿಡಿದು ಹುಚ್ಚೆದ್ದು ಕುಣಿಯುತ್ತಾರೆ. ಇಂದಿಗೂ ಅವರನ್ನ ನೆನೆದು ಕಣ್ಣೀರು ಹಾಕುವ ಬಳಗ ಇಡೀ ದೇಶದಲ್ಲೇ ಇದೆ. ಹಾಗೆಯೇ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಅಭಿಮಾನಿಯೊಬ್ಬ ತಮ್ಮ ಗಂಡು ಮಗುವಿಗೆ ಅಪ್ಪು ಎಂದು ನಾಮಕರಣ ಮಾಡಲು ಮುಂದಾಗಿದ್ದಾರೆ.

ಅದು ಪುನೀತ್‌ ರಾಜ್‌ಕುಮಾರ್‌ ಅವರ ಮನೆಯಲ್ಲಿಯೇ, ಅಪ್ಪು ಸಂಬಂಧಿಗಳು ಯಾರಾದರೂ ಒಬ್ಬರು ನಮ್ಮ ಮಗುವಿಗೆ ಹೆಸರಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯ ನಿವಾಸಿಯಾದ ಮಾರುತಿ ಬೆಳವಣಿಕಿ ಮತ್ತು ಸಂಗೀತ ದಂಪತಿಗೆ ಗಂಡು ಮಗು ಜನನವಾಗಿದೆ. ಹೆರಿಗೆಯಾಗಿ ಸುಮಾರು 10 ದಿನಗಳಾಗಿವೆ. ಆದರೆ ಈ ದಂಪತಿ ಮಾತ್ರ ಮಗುವಿಗೆ ಇನ್ನೂ ನಾಮಕರಣ ಮಾಡಿಲ್ಲ. ಕಾರಣ ಅವರಿಗೆ ಅಪ್ಪು ಮೇಲೆ ಹುಚ್ಚು ಅಭಿಮಾನವಿದ್ದು. ತಮ್ಮ ಮಗುವಿಗೆ ಅಪ್ಪು ಅಂತ ನಾಮಕರಣ ಮಾಡಬೇಕು ಎನ್ನುವ ಹಂಬಲದಲ್ಲಿದ್ದಾರೆ. ಬೆಂಗಳೂರಿನ ಅಪ್ಪು ಅವರ ಮನೆಯಲ್ಲಿಯೇ ನಮ್ಮ ಮಗುವಿನ ನಾಮಕರಣ ಮಾಡಬೇಕು. ಶಿವರಾಜ್‌ಕುಮಾರ್ ಅಥವಾ ರಾಘಣ್ಣ ಯಾರಾದರೂ ಒಬ್ಬರು ನಮ್ಮ ಮಗುವಿಗೆ ಅಪ್ಪು ಅಂತ ಹೆಸರಿಡಲಿ ಅನ್ನುವ ಹಂಬಲ ಇವರದ್ದಾಗಿದೆ.

Our child naming ceremony shuld happend in Puneet Rajkumar house: Gadag parents demand

ಮಾರುತಿ ನರಗುಂದಲ್ಲಿ ಅಪ್ಪು ಅಂತಾನೆ ಪ್ರಸಿದ್ಧಿ ಆಗಿದ್ದಾರೆ. ಮಾರುತಿಗೆ ಅಪ್ಪು ಅಂದರೆ ಪಂಚಪ್ರಾಣ. ಚಿಕ್ಕಂದಿನಿಂದಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಇವರು. ಪುನೀತ್ ಅವರ ಚಿತ್ರಗಳು ಬಿಡುಗಡೆಯಾದರೆ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದರು. ಅಪ್ಪು ಅವರ ಅಗಲಿಕೆಯಿಂದ ಮಾರುತಿ ಬಹಳಷ್ಟು ನೊಂದುಕೊಂಡಿದ್ದರು. ಹೀಗಾಗಿ ದೊಡ್ಮನೆಯ ಕಡೆಯಿಂದ ಪ್ರತಿಕ್ರಿಯೆಗಾಗಿ ಕಾಯ್ದು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+