ಉಪಹಾರಕ್ಕೆ ಬಂದರು, ಹೋಟೆಲ್ ಬಾಲ ಕಾರ್ಮಿಕನನ್ನು ರಕ್ಷಿಸಿದರು
ಗದಗ, ಮೇ27: ಗದಗ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾದ ಶಿವಾನಿ ವೆಜ್‌ನಲ್ಲಿ ಬಾಲ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. ಹೋಟೆಲ್‌ಗೆ ಉಪಹಾರ ಸೇವಿಸಲು ಬಂದಿದ್ದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಅಪ್ರಾಪ್ತ ಬಾಲಕ ಸರ್ವ್ ಮಾಡಲು ಬಂದಿದ್ದು ನೋಡಿ ಕಾರ್ಯಾಚರಣೆ ನಡೆಸಿದರು.
ಕಚೇರಿ ಕೆಲಸದ ಮಧ್ಯೆ ಮಕ್ಕಳ ರಕ್ಷಣಾ ಘಟಕದ ಡಿಸಿಪಿಒ ಅನುಪಮಾ ಸಿಬ್ಬಂದಿಯೊಂದಿಗೆ ಉಪಹಾರ ಸೇವಿಸಲು ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಟೇಬಲ್‌ಗೆ ಬಾಲಕನೋರ್ವ ಸರ್ವ್ ಮಾಡಿದ್ದು, ಅವನನ್ನು ವಿಚಾರಿಸಿದಾಗ 15 ವರ್ಷ ಎಂದು ತಿಳಿದು ಬಂದಿದೆ.
ಕೂಡಲೇ ವಿಷಯವನ್ನು ಕಾರ್ಮಿಕರ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಕಾರ್ಮಿಕ ಇನ್ಸ್‌ಪೆಕ್ಟರ್ ಗಿರೀಶ್ ಬಂಕದಮನಿ, ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಸ್ಥಳಕ್ಕೆ ಬಂದರು.

ಹೋಟೆಲ್ ಮ್ಯಾನೇಜರ್, ಬಾಲಕನಿಂದ ಮಕ್ಕಳ ಘಟಕ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹ ಮಾಡಿದೆ. ಅಲ್ಲದೇ ಬಾಲಕನ್ನು ಶಾಲೆಗೆ ಸೇರಿಸಿ ದಾಖಲಾತಿಗಳನ್ನು ಒದಗಿಸುವಂತೆ ತಾಕೀತು ಮಾಡಿದರು.
ಅಣ್ಣನನ್ನು ಭೇಟಿಯಾಗಲು ಬಂದಿದ್ದ; ಧಾರವಾಡ ಮೂಲದ 15 ವರ್ಷದ ಬಾಲಕ ಕಳೆದ ದಿನಗಳಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹೋಟೆಲ್‌ನಲ್ಲಿ ಬಾಲಕ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಆದರೆ ಅಧಿಕಾರಿಗಳ ಎದುರು ಹೋಟೆಲ್ ಮ್ಯಾನೇಜರ್ ನಮ್ಮಲ್ಲಿ ಧಾರವಾಡ ಮೂಲದ ಬಾಲು ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದ. ಆತನ ಸಹೋದರನಾಗಿರೋ ಈ ಬಾಲಕ ಅಣ್ಣನ ಭೇಟಿಗೆ ಹೋಟೆಲ್ ಗೆ ಬಂದಿದ್ದ ಎಂದು ಹೇಳಿದ್ದಾರೆ.
ಹೋಟೆಲ್ ಸಿಬ್ಬಂದಿ ಹೇಳುವ ಪ್ರಕಾರ ಬಾಲಕ ಅಣ್ಣನನ್ನು ನೋಡುವುದಕ್ಕೆ ಬಂದಿದ್ದ. ಅಣ್ಣ ಹೊರಗಡೆ ಹೋಗಿದ್ದ ಎನ್ನುವ ಕಾರಣಕ್ಕೆ ಟೇಬಲ್‌ಗೆ ಸರ್ವಿಸ್ ಕೊಡುತ್ತಿದ್ದ. ಕೇವಲ ಎರಡು ದಿನಗಳಿಂದ ಬಾಲಕ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.ಹೋಟೆಲ್ ಸಿಬ್ಬಂದಿ ಬೇರೆ ಬೇರೆ ಹೇಳಿಕೆ ನೀಡಿ ಅಧಿಕಾರಿಗಳಿಗೆ ಗೊಂದಲ ಮೂಡಿಸಿದರು.

ದೊಡ್ಡ ಹೋಟೆಲ್‌ಗಳ ಪರಿಸ್ಥಿತಿಯೇ ಹೀಗಾದರೆ ಹಳ್ಳಿಗಳಲ್ಲಿ ಹೇಗಿರಬೇಡ?. ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ ಮಾಲೀಕರಿಗೆ ಖಡಕ್ ಸಂದೇಶ ನೀಡಬೇಕಾಗುತ್ತದೆ ಎಂಬ ಒತ್ತಾಯ ಕೇಳಿಬಂದಿದೆ.
Recommended Video
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications