ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಂಮರು ಭಾರತದ ಪ್ರಧಾನಿ ಆಗಲು ಸಾಧ್ಯವಿಲ್ಲ; ಬಿ. ಸಿ. ಪಾಟೀಲ್‌

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಅಕ್ಟೋಬರ್‌, 31: "ಭಾರತಕ್ಕೆ ಮುಸ್ಲಿಂಮರು ಪ್ರಧಾನಿ ಆಗಬೇಕು ಎನ್ನುವುದು ಹುಚ್ಚು ಕಲ್ಪನೆ. ಕಲ್ಪನೆ ಕಲ್ಪನೆಯೇ ಹೊರತು ಸಕಾರ ಆಗುವುದಕ್ಕೆ ಸಾಧ್ಯವಿಲ್ಲ" ಎಂದು ಸಚಿವ ಬಿ. ಸಿ. ಪಾಟೀಲ್‌ ಹೇಳಿದರು.

ಗದಗ ನಗರದ ಪ್ರವಾಸಿ ಮಂದಿರ ಬಳಿ ಮಾತನಾಡಿದ ಅವರು, ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗಬೇಕು ಎಂಬ ಟ್ವಿಟ್ಟರ್ ಅಭಿಯಾನ, ಕೆಲ ನಾಯಕರ ಹೇಳಿಕೆಗೆ ಕಿಡಿಕಾರಿದರು.

ಮುಂದಿನ ಚುನಾವಣೆಗೆ ಇನ್ನೊಂದು ತಿಂಗಳಲ್ಲಿ ಕ್ಷೇತ್ರ ನಿರ್ಧರಿಸುವೆ : ಸಿದ್ದರಾಮಯ್ಯಮುಂದಿನ ಚುನಾವಣೆಗೆ ಇನ್ನೊಂದು ತಿಂಗಳಲ್ಲಿ ಕ್ಷೇತ್ರ ನಿರ್ಧರಿಸುವೆ : ಸಿದ್ದರಾಮಯ್ಯ

"ಮುಸ್ಲಿಂ ಪ್ರಧಾನಿ ಆಗಬೇಕು ಎನ್ನುವುದು ಕೇವಲ ಹುಚ್ಚು ಕಲ್ಪನೆಯಾಗಿದೆ. ಅಲ್ಲದೇ ಇದು ಭಾರತ ದೇಶವಾಗಿದ್ದು, ಇಲ್ಲಿ ಮುಸ್ಲಿಂ ಪ್ರಧಾನಿ ಆಗುವುದಕ್ಕೆ ಸಾಧ್ಯವಿಲ್ಲ" ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

Muslim Cant Become Prime Minister For India Says Minister BC Patil

ಸಿದ್ದರಾಮಯ್ಯ ವಿರುದ್ಧದ ಕಿಕ್ ಬ್ಯಾಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಈ ಹಿಂದೆ ಅವರ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಲೋಕಾಯುಕ್ತ ಮುಚ್ಚಿ ಎಸಿಬಿ ರಚನೆ ಮಾಡಿದ್ದೇ ಅದಕ್ಕೆ ಸಾಕ್ಷಿ ಆಗಿದೆ. ಹಾಗಾದರೆ ಸ್ಟೀಲ್ ಬ್ರಿಡ್ಜ್‌ ಯಾಕೆ ವಾಪಾಸ್ ಹೋಯ್ತು?. ಕಿಕ್ ಬ್ಯಾಕ್ ಆರೋಪ ಬಂದಿದ್ದಕ್ಕೆ ವಾಪಾಸ್ ಹೋಯ್ತಲ್ಲ" ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯ ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕ : ಶ್ರೀರಾಮುಲುಸಿದ್ದರಾಮಯ್ಯ ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕ : ಶ್ರೀರಾಮುಲು

ಬಿಜೆಪಿಯಿಂದ SC, ST ಮೀಸಲಾತಿ ಹೆಚ್ಚಳ; ಎಸ್‌ಸಿ, ಎಸ್‌ಟಿ ಮೀಸಲಾತಿ ಕ್ರೆಡಿಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿ. ಸಿ. ಪಾಟೀಲ್, "ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ಸುಮ್ಮನೆ ಆಯೋಗ ರಚನೆ ಮಾಡಿದ್ದೇವೆ ಎಂದರೆ ಹೇಗೆ?. ಆಗಲೇ ಜಾರಿ ಮಾಡಬಹುದಿತ್ತಲ್ಲವಾ?, ಯಾಕೆ ಮಾಡಲಿಲ್ಲ?" ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿದರು.

"ಸುಮ್ಮನೆ ಜನರ ಕಣ್ಣು ಒರೆಸುವುದಕ್ಕೆ ಆಯೋಗ ರಚನೆ ಮಾಡಿಕೊಂಡು ಬಂದರು. ಆದರೆ ಸಾಮಾಜಿಕ ನ್ಯಾಯ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಯಾರು ಮೀಸಲಾತಿ ಹೆಚ್ಚು ಮಾಡಿದ್ದಾರೆ? ಎಂದು ಆಯಾ ಜನಾಂಗಕ್ಕೆ ಗೊತ್ತಿದೆ" ಎಂದರು.

ಇನ್ನು ಸ್ವಪಕ್ಷದಿಂದ ಕಿರುಕುಳ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಎಲ್ಲಾ ಸುಳ್ಳು, ಯಾರೂ ಕಿರುಕುಳ ಕೊಡುವುದಿಲ್ಲ, ಜನಾರ್ದನ ರೆಡ್ಡಿ ಆರಾಮಾಗಿ ಇದ್ದಾರೆ. ಪಕ್ಷದಲ್ಲಿ ಆ ರೀತಿ ನಡೆದೇ ಇಲ್ಲ" ಎಂದು ಬಿ. ಸಿ. ಪಾಟೀಲ್ ಹೇಳಿದರು.

English summary
Karnataka agriculture minister B. C. Patil said that Muslim can't become prime minister of India. He addressed media at Gadag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X