Karnataka Budget 2025: ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಸಿಕ್ಕಿದ್ದೇನು ?
Karnataka Budget 2025: ಈ ಬಾರಿಯ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಕೆಲವೊಂದು ಪ್ರಮುಖ ಕೊಡುಗೆಯನ್ನು ನೀಡಲಾಗಿದೆ. ಹೌದು ಈ ಬಾರಿ ಗದಗ ಜಿಲ್ಲೆಗೆ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆದರೆ, ನಿರೀಕ್ಷೆಯಂತೆಯೇ ಈ ಬಾರಿಯೂ ನಿರಾಸೆಯೇ ಹೆಚ್ಚಾಗಿದೆ. ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ತೋಟಗಾರಿಕೆ ಅಭಿವೃದ್ಧಿ ಯೋಜನೆ 2 ಜಾರಿ ಮಾಡುವುದಾಗಿ ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಅಲ್ಲದೆ ಈ ಭಾಗದ ಹಾಗೂ ರಾಜ್ಯದಾದ್ಯಂತ ರೈತರು ಖುಷಿ ಪಡುವಂತಹ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಅಲ್ಲದೆ ಈ ಭಾಗದ ರೈತರು ಸಂತೋಷ ಪಡುವಂತಹ ಸುದ್ದಿಗಳನ್ನು ಸಹ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ ಜನರ ನಿರೀಕ್ಷೆಯನ್ನು ಮುಟ್ಟುವಲ್ಲಿ ಈ ಬಾರಿಯೂ ಸರ್ಕಾರ ಸೋತಿದೆ.
ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಈ ಬಾರಿಯೂ ನಿರಾಸೆ: ನಿರೀಕ್ಷೆಯಂತೆ ಈ ಬಾರಿಯೂ ಗದಗ ಜಿಲ್ಲೆಗೆ 2025 -2026ನೇ ಸಾಲಿನ ಬಜೆಟ್‌ನಲ್ಲಿ ನಿರಾಸೆ ಮೂಡಿದೆ. ಗದಗ ಜಿಲ್ಲೆಯು ಕೃಷಿ ಪ್ರಧಾನವಾಗಿದೆ. ಆದರೆ ಕಳೆದ 5 ವರ್ಷಗಳಿಂದಲೂ ಗದಗ ಜಿಲ್ಲೆಗೆ ಹೇಳಿಕೊಳ್ಳುವಂತಹ ಪ್ರಮುಖ ಯೋಜನೆಗಳು ಘೋಷಣೆಗಳು ಆಗಿಲ್ಲ. ಒಂದೊಮ್ಮೆ ಘೋಷಣೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಆ ಯೋಜನೆಗಳು ಜಾರಿಯಾಗಿಲ್ಲ. ಈ ಬಾರಿಯೂ ಅದೇ ಪುನರಾವರ್ತನೆ ಆಗಿದೆ.

ಕನಸಾಗಿಯೇ ಉಳಿದ ಫುಡ್ ಪಾರ್ಕ್: ಕಳೆದ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದ್ದ ಫೂಡ್ ಪಾರ್ಕ್ ಈ ಬಾರಿಯೂ ಘೋಷಣೆಯಾಗಿಲ್ಲ. ಫೂಡ್ ಪಾರ್ಕ್ ಘೋಷಣೆಯಾಗಿ ಗದಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಅಭಿವೃದ್ಧಿ ಆಗಲಿವೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ನಿರೀಕ್ಷೆಗಳು ಈ ಬಾರಿಯೂ ಹುಸಿಯಾಗಿವೆ. ಹೇಳಿಕೊಳ್ಳುಂತಹ ಯಾವುದೇ ಪ್ರಮುಖ ಯೋಜನೆಗಳು ಈ ಬಾರಿಯ ಬಜೆಟ್‌ನಲ್ಲೂ ಘೋಷಣೆಯಾಗಿಲ್ಲ. ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆ ಮಾಡಲಾಗಿತ್ತು. ಅದೂ ಸಹ ಈ ಬಾರಿ ಈಡೇರಿಲ್ಲ.
ಎರಡರಿಂದ ಮೂರು ಸಾಧಾರಣ ಯೋಜನೆಗಳನ್ನಷ್ಟೇ ಈ ಬಾರಿಯ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಘೋಷಣೆ ಮಾಡಲಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಜಿಲ್ಲೆಗೆ ಭರ್ಜರಿ ಅನುದಾನ ನೀಡಲಿದ್ದಾರೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಬಾರಿಯೂ ನಿರಾಸೆ ಮೂಡಿದೆ. ಜನ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೇನಾದರೂ ಇದೆಯಾ ಅಂತ ತಡಕಾಡುವಂತೆ ಆಗಿದೆ.
ಈ ನಡುವೆ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಹಲವು ಪ್ರಮುಖ ಕೊಡುಗೆಗಳನ್ನೇ ನೀಡಲಾಗಿದೆ. ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಇದರಲ್ಲಿ ಪರಿಚಯಿಸಲಾಗಿದೆ. ಜಾನುವಾರುಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅನುಗ್ರಹ ಯೋಜನೆಯ ಅಡಿಯಲ್ಲಿ ಪರಿಹಾರ ನೀಡುವುದಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ 10ರಿಂದ 15 ಸಾವಿರ ರೂಪಾಯಿಯನ್ನು ಹೆಚ್ಚಳ ಮಾಡಲಾಗಿದೆ. ಕುರಿ, ಮೇಕೆ ಮೃತಪಟ್ಟರೆ ಪರಿಹಾರ ಧನ ಸಿಗಲಿದೆ. ಈ ಪರಿಹಾರ ಮೊತ್ತವನ್ನು 5 ಸಾವಿರ ರೂಪಾಯಿಯಿಂದ 7.5 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.












Click it and Unblock the Notifications