ಗದಗ; ಕೊರೊನಾಕ್ಕೆ ವೃದ್ಧೆ ಬಲಿ; ಸೋಂಕು ಹರಡಿದ್ದು ಹೇಗೆ?

ಗದಗ, ಏಪ್ರಿಲ್ 09 : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 80 ವರ್ಷದ ವೃದ್ಧೆ ಗದಗ ನಗರದಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೊನಾಗೆ ಇದು ಮೊದಲ ಬಲಿಯಾಗಿದೆ.

ಗದಗ ನಗರದ ರಂಗನವಾಡಿ ನಿವಾಸಿ ಗುರುವಾರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಏಪ್ರಿಲ್ 4ರಂದು ವೃದ್ಧೆ ತೀವ್ರ ಉಸಿರಾಟದ ತೊಂದರೆಯಿಂದಾಗಿ ಜಿಮ್ಸ್‌ಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

"ವೃದ್ಧೆಗೆ ಕೊರೊನಾ ಸೋಂಕು ತಗುಲಿರುವ ಶಂಕೆಯಿಂದ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಸೋಮವಾರ ವರದಿಯಲ್ಲಿ ಬಂದಿದ್ದು ಸೋಂಕು ದೃಢಪಟ್ಟಿತ್ತು" ಎಂದು ಜಿಲ್ಲಾಧಿಕಾರಿ ‌ಎಮ್. ಜಿ. ಹಿರೇಮಠ ಹೇಳಿದ್ದಾರೆ.

 How Gadag Women Infected With Coronavirus

ಮನೆಯಲ್ಲಿಯೇ ಇದ್ದ ವೃದ್ದೆ: 80 ವರ್ಷದ ವೃದ್ಧೆಗೆ ಮಂಡಿ ನೋವಿತ್ತು. ಆದ್ದರಿಂದ, ಮನೆಯಿಂದ ಆಕೆ ಹೊರ ಬರುತ್ತಿರಲಿಲ್ಲ. ಮನೆಯ ಕಟ್ಟೆಯ ಮೇಲೆ ಕುಳಿತಿರುತ್ತಿದ್ದರು. ಆದ್ದರಿಂದ ಕೊರೋನಾ ಸೋಂಕು ತಗುಲಿದ್ದಾದರೂ ಹೇಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ವೃದ್ಧೆಯ ಜೊತೆಗೆ ಮನೆಯಲ್ಲಿ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳಿದ್ದರು. ಮೊಮ್ಮಕ್ಕಳಿಂದ ಸೋಂಕು ಹಬ್ಬಿರಬಹುದು ಎಂದು ಶಂಕಿಸಲಾಗಿದೆ. ಒಬ್ಬ ಮೊಮ್ಮಗ ಆಟೋ ಓಡಿಸುತ್ತಿದ್ದ, ಇನ್ನೊಬ್ಬ ತರಕಾರಿ ಮಾರಾಟ ಮಾಡುತ್ತಿದ್ದಾನೆ.

ಇವರು ಹೊರಗೆ ಸುತ್ತಾಡುವುದರಿಂದ ಕೊರೊನಾ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿತ್ತು. ವೃದ್ಧೆಯ ಜೊತೆ ವಾಸ ಮಾಡುತ್ತಿದ್ದ ಮೂವರಿಗೆ ಸೋಂಕು ಇಲ್ಲ ಎಂಬುದು ಬುಧವಾರ ಬಂದ ವರದಿಗಳಿಂದ ದೃಢಪಟ್ಟಿವೆ.

ಸೋಂಕಿನ ಮೂಲ ಪತ್ತೆ ಹಚ್ಚಲು ಗದಗ ಜಿಲ್ಲಾಡಳಿತ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ತುರ್ತಾಗಿ ಸೋಂಕಿನ ಮೂಲ ಪತ್ತೆ ಹಚ್ಚಿದರೆ ಸೋಂಕು ಹಡುವುದನ್ನು ತಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+