ಚಿನ್ನ ಪರೀಕ್ಷಕನಿಂದ ಬ್ಯಾಂಕಿಗೆ 50 ಲಕ್ಷ ವಂಚನೆ

ಗದಗ, ಡಿಸೆಂಬರ್ 30 : ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ನಂಬಿಸಿ ಬ್ಯಾಂಕಿನಲ್ಲಿ ಅಡವಿಡಲು ಅನುಮತಿ ನೀಡುತ್ತಿದ್ದ ಮುಳಗುಂದದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚಿನ್ನ ಪರೀಕ್ಷಕನ ಅಸಲಿಯತ್ತು ಬೆಳಕಿಗೆ ಬಂದಿದೆ.

ಚಿನ್ನವನ್ನು ಅಸಲಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ನಂಬಿಸಿ ಬ್ಯಾಂಕ್ ನಲ್ಲಿ ಅಡವಿಡಲು ಅನುಮತಿ ನೀಡುತ್ತಿದ್ದ ಚಿನ್ನ ಪರೀಕ್ಷಕ ಮಂಜುನಾಥ್ ರಾಯ್ಕರ್ ಅವರ ಬಣ್ಣ ಬಯಲಾಗಿದೆ. ಬ್ಯಾಂಕಿಗೆ 21 ಗ್ರಾಹಕರ ಹೆಸರಿನಲ್ಲಿ 50 ಲಕ್ಷಕ್ಕೂ ಅಧಿಕರ ಹಣವನ್ನು ವಂಚಿಸಿದ್ದಾರೆ.

Gold examiner cheats 50 lakhs to bank

ಸುಮಾರು 10 ವರ್ಷಗಳಿಂದ ಕೆವಿಜಿ ಬ್ಯಾಂಕ್ ನಲ್ಲಿ ಚಿನ್ನ ಪರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಗ್ರಾಹಕರು, ಚಿನ್ನ ಪರೀಕ್ಷಕರ ಒಳ ಒಪ್ಪಂದಿಂದ ವಂಚನೆ ಮಾಡಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

2 ವರ್ಷಗಳಿಂದ ಬ್ಯಾಂಕ್ ಅಧಿಕಾರಿಗಳಿಗೆ ಮಂಜುನಾಥ್ ಅವರ ಈ ಕಾರ್ಯದ ಬಗ್ಗೆ ಅನುಮಾನವಿತ್ತು ಆದರೂ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ವಂಚಕ ಮಂಜುನಾಥ್ ರಾಯ್ಕರ್ ವಿರುದ್ಧ ಕೆವಿಜಿ ಬ್ಯಾಂಕ್ ಅಧಿಕಾರಿಗಳಿಂದ ಮುಳಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+