ಗದಗ ಪೊಲೀಸರ ಪರಿಸರ ಪ್ರೇಮಕ್ಕೆ ಹೇಳಿ ಸಲಾಂ

ಗದಗ, ಡಿಸೆಂಬರ್ 12 : ಪೊಲೀಸರ ಕೆಲಸವೆಂದರೆ ಹಾಗೆಯೇ ಬಿಡುವು ಸಿಗುವುದು ಕಷ್ಟ. ಗದಗ ಜಿಲ್ಲೆಯ ಪೊಲೀಸರು ಕರ್ತವ್ಯದ ನಡುವೆಯೂ ಪರಿಸರ ಪ್ರೇಮವನ್ನು ಮೆರೆದಿದ್ದಾರೆ. ಹೂವು, ಹಣ್ಣಿನ ಗಿಡಗಳನ್ನು ಬೆಳೆಸಿ ಪರಿಸರವನ್ನು ಸುಂದರವಾಗಿಸಿದ್ದಾರೆ.

ಪೊಲೀಸ್ ಇಲಾಖೆ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧವಿದೆ. ವಿವಿಧ ಪೊಲೀಸ್ ಠಾಣೆ, ಹಿರಿಯ ಅಧಿಕಾರಿಗಳ ಕಚೇರಿಗಳಲ್ಲಿ ಹಸಿರು ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕರ್ತವ್ಯದ ಬಿಡುವಿನ ನಡುವೆಯೇ ಪೊಲೀಸ್ ಅಧಿಕಾರಿಗಳು ಪರಸರ ಸಂರಕ್ಷಣೆ ಮಾಡಿದ್ದಾರೆ.

ಕರ್ತವ್ಯದ ಬಿಡುವಿನ ವೇಳೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಂತ ಇಚ್ಛೆಯಿಂದ ಗಿಡಮರಗಳನ್ನು ಬೆಳೆಸುವ ಪರಿಪಾಠ ಇಲಾಖೆಗೆ ಮೆರಗು ನೀಡಿದೆ. ಸಿಬ್ಬಂದಿಗಳು ಬೇರೆ ಕಡೆಗೆ ಸಿಗುವ ವಿಶೇಷ ಗಿಡಮರಗಳನ್ನು ತಂದು ತಮ್ಮ ಠಾಣೆ, ಘಟಕದ ಮುಂದೆ ನೆಟ್ಟು ಸಂತಸ ಪಡುತ್ತಿದ್ದಾರೆ. ಇತರ ಜನರಿಗೆ ಮಾದರಿಯಾಗಿದ್ದಾರೆ.

ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ನರ್ಸರಿಗಳಿಂದ ಸಸಿಗಳನ್ನು ತರಿಸಲಾಗಿದೆ. ಈ ಗಿಡ-ಮರಗಳು ಸಾವಿರಾರು ಪಕ್ಷಿಗಳ ವಾಸಸ್ಥಾನವಾಗಿದೆ. ಬಿರುಬಿಸಿಲಿನಲ್ಲಿ ತಂಪನ್ನು ನೀಡುತ್ತಿವೆ.

ಗದಗದ ಡಿಎಆರ್‌ ಘಟಕ

ಗದಗದ ಡಿಎಆರ್‌ ಘಟಕ

ಮರ-ಗಿಡಗಳಿಂದ ಕೂಡಿರುವ ಈ ಹಸಿರಿನ ತಾಣ ಮಲ್ಲಸಮುದ್ರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗದಗ ಘಟಕವಾಗಿದೆ. ಗುಡ್ಡದ ಇಳಿಜಾರಿನಲ್ಲಿರುವ ಡಿಎಆರ್ ಘಟಕವು ಕಲ್ಲುಗಳಿಂದ ಕೂಡಿದ ಕೆಂಪು ಭೂಮಿಯಾಗಿತ್ತು. ಸಾಕಷ್ಟು ಕಲ್ಲುಗಳನ್ನು ತೆಗೆದು ಗಿಡಮರ ಬೆಳೆಯಲು ಅನುಕೂಲವಾಗುವ ರೀತಿಯಲ್ಲಿ 4-5 ವರ್ಷಗಳ ಕಾಲ ಶ್ರಮಪಟ್ಟು ಹಸಿರಿನ್ನು ಬೆಳೆಸಲಾಗಿದೆ.

40-50 ಜಾತಿಯ ಗಿಡಗಳು

40-50 ಜಾತಿಯ ಗಿಡಗಳು

ಗಂಧದ ಗುಡಿ ಸಿನಿಮಾದ ಹಾಡನ್ನು ನೆನಪು ಮಾಡುವಷ್ಟು ಹಸಿರು ವಾತಾವರಣ ನಿರ್ಮಾಣ ಮಾಡಲಾಗಿದೆ. ಬಿರು ಬಿಸಿಲಿನಲ್ಲಿಯೂ ಮರ-ಗಿಡಗಳು ಒಂದಷ್ಟು ತಂಪು ನೀಡುತ್ತಿವೆ. ಸುಮಾರು 2 ಸಾವಿರಕ್ಕೂ ಅಧಿಕ 40-50 ಬೇರೆ ಬೇರೆ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

ಹಣ್ಣ, ಹೂವಿನ ಗಿಡಗಳು

ಹಣ್ಣ, ಹೂವಿನ ಗಿಡಗಳು

ಹಣ್ಣು, ಹೂವು, ನೆರಳು ಮತ್ತು ಅಂದಕ್ಕಾಗಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. 4-5 ತಳಿಯ ಪಾಮ್ ಗಿಡಗಳಿರುವುದು ಇಲ್ಲಿಯ ವಿಶೇಷ. ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನರ್ಸರಿಗಳಿಂದ ಸಸಿಗಳನ್ನು ತರಿಸಲಾಗಿದೆ. ಈ ಗಿಡ-ಮರಗಳು ಸಾವಿರಾರು ಪಕ್ಷಿಗಳ ವಾಸಸ್ಥಾನವಾಗಿದೆ.

ಪಕ್ಷಿಗಳನ್ನು ಸಾಕಲಾಗಿದೆ

ಪಕ್ಷಿಗಳನ್ನು ಸಾಕಲಾಗಿದೆ

ಪೊಲೀಸರ ಕೇವಲ ಗಿಡಗಳನ್ನು ಬೆಳೆಸಿಲ್ಲ. 8-10 ವಿವಿಧ ಜಾತಿಯ ಪಕ್ಷಿಗಳನ್ನು ಸಾಕಿದ್ದಾರೆ. ಇಲ್ಲಿಯ ಗಿಡಮರಗಳ ಕಾಳಜಿ ಸೇರಿದಂತೆ ಉದ್ಯಾನ ನಿರ್ವಹಣೆಗೆ ಇಲ್ಲಿನ ಡಿ.ಎಸ್.ಪಿ, ಆರ್.ಪಿ.ಐ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+