ಗದಗ ತೋಂಟದಾರ್ಯ ಶ್ರೀಗಳ ಅಂತ್ಯಸಂಸ್ಕಾರ: ಹೆಚ್ಚಿನ ಭದ್ರತೆ ನಿಯೋಜನೆ
ಗದಗ, ಅಕ್ಟೋಬರ್.21: ಗದಗ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮೀಜಿ ಅವರ ಅಂತ್ಯಸಂಸ್ಕಾರ ಇಂದು ಭಾನುವಾರ ಸಂಜೆ 4 ಗಂಟೆಗೆ ಲಿಂಗಾಯತ ಧರ್ಮದ ವಿಧಿವಿಧಾನಗಳ ಮೂಲಕ ನಡೆಯಲಿದೆ.
ಗದಗ ತೋಂಟದಾರ್ಯ ಮಠಕ್ಕೆ ಪಿಠಾಧಿಪತಿ ಇಲ್ಲದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಭಾಗವಹಿಸುವರು.
ಹೆಚ್ಚಿನ ಭದ್ರತೆ ನಿಯೋಜನೆ
ತೋಂಟದ ಶ್ರೀಗಳು ವಿಧಿವಶ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, 500 ಕಾನ್ಸ್ಟೆಬಲ್, 500 ಹೋಂಗಾರ್ಡ್, 4 ಡಿವೈನ್ ಸ್ಪಿ, 13 ಸಿಪಿಐ, 20 ಪಿಎಸ್ಐ, 60 ಎಎಸ್ಐ, 6ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಅಷ್ಟೇ ಅಲ್ಲ, ಗದಗ ಜಿಲ್ಲೆಯ 750 ಸಿಬ್ಬಂದಿ, 4 ಡಿವೈಎಸ್ಪಿ, 12 ಸಿಪಿಐ, 19 ಪಿಎಸ್ಐ, 10 ಡಿಆರ್ ತುಕಡಿಯನ್ನೂ ನಿಯೋಜಿಸಲಾಗಿದೆ ಎಂದು ಗದಗ ಎಸ್ಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.












Click it and Unblock the Notifications