ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವರಾಜ ಬೊಮ್ಮಾಯಿ ಕಠಿಣ ಕ್ರಮ ಎಂಬ ಮಾತು ಬಿಟ್ಟು ಬುಲ್ಡೋಜರ್ ಮಾದರಿ ತರಲಿ: ಯತ್ನಾಳ್

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಸೆಪ್ಟೆಂಬರ್‌, 19: ಉತ್ತರ ಪ್ರದೇಶದಲ್ಲಿ ಏನಾದರೂ ಆದರೆ ಬುಲ್ಡೋಜರ್ ಓಡಿಸುವ ಬುಲ್ಡೋಜರ್ ಬಾಬಾ ಇದ್ದಾರೆ. ನಮ್ಮಲ್ಲಿ ಏನಾದರೂ ಆದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಬಸವರಾಜ ಬೊಮ್ಮಾಯಿ ಇದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.

ಗದಗ ಹಿಂದೂ ಮಹಾಗಣಪತಿ ಧರ್ಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗಿಸಿ ಅಂದರೆ ಸಾಧ್ಯವಿಲ್ಲ ಅನ್ನುತ್ತಾರೆ. ಸಾಧ್ಯವಿಲ್ಲ ಅಂದರೆ ಯಾಕೆ ಇದ್ದೀರಿ, ಮನೆಗೆ ಹೋಗಿ. ಹಾಡಹಗಲೇ ಹಿಂದೂಗಳನ್ನು ಹೊಡೆಯುತ್ತಿದ್ದಾರೆ. ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಚ್ಚುತ್ತಾರೆ. ಪೊಲೀಸರ ಕೈಯಲ್ಲಿ ಬಂದೂಕು ಕೊಟ್ಟಿದ್ದಾರೆ. ಆದರೆ, ಹೊಡೀಬೇಡ ಎಂದು ಹೇಳುತ್ತಾರೆ. ನಾನು ಮುಖ್ಯಮಂತ್ರಿ ಆಗಿದಿದ್ದರೆ ಮೊದಲು ಹೊಡಿರಿ ಎಂದು ಪೊಲೀಸರಿಗೆ ಹೇಳುತ್ತಿದೆ. ಅಪರಾಧಿಗಳನ್ನು ಹೊಡದ ಪೊಲೀಸರಿಗೆ ಪ್ರಮೋಷನ್ ಕೊಡುತ್ತಿದೆ. ಪಿಸಿ ಇದ್ದವರನ್ನು ಎಎಸ್‌ಐ, ಪಿಎಸ್ಐ ಇದ್ದವನನ್ನ ಸಿಪಿಐ ಮಾಡುತ್ತಿದೆ ಎಂದರು.

ನಾನು ಗೃಹಮಂತ್ರಿಯಾದರೆ ಬುದ್ಧಿಜೀವಿಗಳ ಮೇಲೆ ಗುಂಡು: ಯತ್ನಾಳ್‌ನಾನು ಗೃಹಮಂತ್ರಿಯಾದರೆ ಬುದ್ಧಿಜೀವಿಗಳ ಮೇಲೆ ಗುಂಡು: ಯತ್ನಾಳ್‌

ನಾನು ಮುಖ್ಯಮಂತ್ರಿ ಆಗಿದ್ದರೆ ಕರ್ನಾಟಕದಲ್ಲಿ ತುಂಬಾ ಎನ್ಕೌಂಟರ್ ಸ್ಪೆಷಲಿಸ್ಟ್‌ಗಳನ್ನು ಇಡುತ್ತಿದ್ದೆ. ಆದರೆ, ನನ್ನನ್ನು ಸಿಎಂ ಮಾಡುತ್ತಿಲ್ಲ. ನಾನೇನಾದರೂ ಸಿಎಂ ಆದರೆ ಕರ್ನಾಟಕದ ಯೋಗಿ ಬಾಬಾ ಆಗುತ್ತಾನೆ ಅನ್ನುವ ಭಯ ಅವರಿಗೆ ಇದೆ, ಅದಕ್ಕಾಗಿ ನನ್ನನ್ನು ಸಿಎಂ ಮಾಡುತ್ತಿಲ್ಲ. ನಾನೇನಾದೂ ಒಂದು ವೇಳೆ ಮುಖ್ಯಮಂತ್ರಿ ಆದರೆ ಒಬ್ಬರನ್ನು ಜೈಲಿಗೆ, ಮತ್ತೊಬ್ಬರನ್ನು ಕಾಡಿಗೆ ಕಳಿಸುತ್ತೇನೆ. ಮೊನ್ನೆ ಮಹಾರಾಷ್ಟ್ರದಲ್ಲಿ ಪೊಲೀಸರು ಡಿಜೆ ಹಾಡಿಗೆ ಕುಣಿದಿದ್ದಾರೆ. ಮುಂದೆ ನಾನು ಮುಖ್ಯಮಂತ್ರಿ ಆದರೆ ಎಲ್ಲರೂ ಕುಣಿಯೋಣ ಎಂದರು.

 ಗಣೇಶೋತ್ಸವದ ಬಗ್ಗೆ ಯತ್ನಾಳ್‌ ಅಭಿಪ್ರಾಯ

ಗಣೇಶೋತ್ಸವದ ಬಗ್ಗೆ ಯತ್ನಾಳ್‌ ಅಭಿಪ್ರಾಯ

ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂಗಳು ಒಗ್ಗಟ್ಟಾಗಲು ಗಣೇಶ ಉತ್ಸವವನ್ನು ಮಾಡಲಾಗುತ್ತಿತ್ತು. ದೇಶಾದ್ಯಂತ ಗಣೇಶ ಉತ್ಸವ ಆಚರಣೆ ವಿಸ್ತರಿಸಿದ್ದು ವೀರ ಸಾವರ್ಕರ್. ಸಾವರ್ಕರ್ ಚಪ್ಪಲಿಯ ಧೂಳಿನ ಸಮಾನ ಅಲ್ಲದವರು ಇವತ್ತು ಟೀಕೆ ಮಾಡುತ್ತಿದ್ದಾರೆ. ಕೇವಲ ಮಹಾತ್ಮಾ ಗಾಂಧಿಯ ಅರಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲ. ಬದಲಾಗಿ ಆಜಾದ್, ಭಗತ್ ಸಿಂಗ್, ರಾಜಗುರು ಎಲ್ಲರ ಪರಿಶ್ರಮದಿಂದ ಸ್ವಾತಂತ್ರ್ಯ ಲಭಿಸಿದೆ. ಯಾರೋ ಉಪವಾಸ ಕೂತಿದ್ದಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಬರೆದಿದ್ದಾರೆ. ಗಾಂಧಿ, ನೆಹರು ಅವರಿಗೆ ಜೈಲು ಅಂದರೆ ಆರಾಮವಾಗಿರುತ್ತಿತ್ತು. ಸಾವರ್ಕರ್ ಅವರಿಗೆ ಕಠಿಣ ಶಿಕ್ಷೆ ಇತ್ತು. ಇವತ್ತು ಅವರು ಕ್ಷಮೆ ಕೇಳಿದ್ದಾರೆ ಅಂತಾರೆ. ಮಹಾತ್ಮಾ ಗಾಂಧಿ ಅವರು ಹೀಸ್ ಹೈನೆಸ್ ಎಂದು ಬರೆದಿದಾರೆ ಎಂದರು.

 '21 ದಿನ ಗಣೇಶ ಮೂರ್ತಿಯನ್ನು ಕೂರಿಸುತ್ತೇವೆ'

'21 ದಿನ ಗಣೇಶ ಮೂರ್ತಿಯನ್ನು ಕೂರಿಸುತ್ತೇವೆ'

ಕಳೆದ ಎರಡು ವರ್ಷದಿಂದ ಮೂರು ದಿನ ಗಣೇಶ ಕೂರಿಸುವ ನಿರ್ಬಂಧವನ್ನು ಹೇರಲಾಗಿತ್ತು. ಮೂರು ದಿನ ಕೂರಿಸಬೇಕು, ಐದೇ ಜನ ಇರಬೇಕು ಎಂದು ನಿಯಮ ಇತ್ತು. 21 ದಿನ ಗಣೇಶ ಮೂರ್ತಿಯನ್ನು ಕೂರಿಸುತ್ತೇವೆ ಎಂದು ನಾನು ಬೊಮ್ಮಾಯಿ ಅವರಿಗೆ ಹೇಳಿದ್ದೆ. ನನ್ನ ತಲೆಯಲ್ಲಿ ಬಂದ ಒಂದು ವರ್ಷನೂ ಕೂರಿಸಿ, ಡಿಜೆ ಹಾಕಿಸುತ್ತೇನೆ ಅಂದಿದ್ದೆ ಎಂದರು.

 ಪಾಕಿಸ್ತಾನದಲ್ಲೂ ಗಣಪತಿ ಕೂರಿಸ್ತೇವೆಂದ ಶಾಸಕ

ಪಾಕಿಸ್ತಾನದಲ್ಲೂ ಗಣಪತಿ ಕೂರಿಸ್ತೇವೆಂದ ಶಾಸಕ

ಕರ್ನಾಟಕ ಇರುವುದು ಭಾರತದಲ್ಲಿಯೋ ಪಾಕಿಸ್ತಾನದಲ್ಲಿದೆಯೊ?. ಇನ್ನು ಐದು ವರ್ಷದೊಳಗೆ ಪಾಕಿಸ್ತಾನದಲ್ಲೂ ಗಣಪತಿ ಕೂರಿಸುತ್ತೇವೆ. ನಮ್ಮ ಸರ್ಕಾರ, ರಾಷ್ಟ್ರ ಪತಿ ನಮ್ಮವರು, ಉಪರಾಷ್ಟ್ರಪತಿ ನಮ್ಮವರಿದ್ದಾರೆ. ಪ್ರಧಾನ ಮಂತ್ರಿ ನಮ್ಮವರು, ಮುಖ್ಯಮಂತ್ರಿ ನಮ್ಮವರಿದ್ದಾಗ ಯಾಕೆ ಪರ್ಮಿಷನ್ ತೆಗೆದುಕೊಳ್ಳಬೇಕು? ಮೊದಲು ಮಸೀದಿ ಮೇಲಿನ ಸ್ಪೀಕರ್ ತೆರವುಗೊಳಿಸಿ, ಆಮೇಲೆ ಡಿಜೆ ಬಂದ್ ಮಾಡುತ್ತೇವೆ ಎಂದು ಗುಡುಗಿದರು.

 ಮತ್ತೆ ಹೊಸಬಾಂಬ್‌ ಸಿಡಿಸಿದ ಯತ್ನಾಳ್‌

ಮತ್ತೆ ಹೊಸಬಾಂಬ್‌ ಸಿಡಿಸಿದ ಯತ್ನಾಳ್‌

ಜೈಲಿಗೆ ಹಾಕಿ ಲಾಠಿ ಚಾರ್ಜ್ ಮಾಡಿಸುತ್ತೀರಾ? ಗುಂಡು ಹಾಕುತ್ತೀರಾ? ಹರ್ಷ, ಪ್ರವೀಣ್ ಹತ್ಯೆ ಮಾಡಿದವರಿಗೆ ಕೊಲೆ ಮಾಡಿದವರಿಗೆ ಗುಂಡು ಹಾಕಬೇಕಿತ್ತು. ಹಿಂದೂಗಳು ಸಂಭಾವಿತರು ಎಂದು ಡಿಜೆ ಹಾಕಬೇಡಿ ಎಂದು ಅಡ್ಡಿಪಡಿಸುವುದು ಸರಿನಾ? ನಾನೇನಾದರೂ ಇದ್ದಿದ್ದರೆ ರೂಟ್‌ ನಿಯಮವನ್ನು ಉಲ್ಲಂಘನೆ ಮಾಡುತ್ತಿದೆ. ನಮ್ಮವರು ನನ್ನನ್ನು ಹೊರಗಡೆ ಬಿಡುತ್ತಿಲ್ಲ. ಎಲ್ಲ ಅವರೇ ಮಾರಿಗಳನ್ನು ತೆಗೆದುಕೊಂಡು ಅಡ್ಡಾಡುತ್ತಿದ್ದಾರೆ. ಯತ್ನಾಳ್‌ನನ್ನು ಮುಂದೆ ಬಿಟ್ಟರೆ ನಂಬರ್ 1 ಆಗುತ್ತಾನೆ ಅದಕ್ಕೆ ಬೇಡ ಅಂತಿದ್ದಾರೆ. ಅದಕ್ಕಾಗಿಯೇ ಸಂಚಾರವನ್ನು ಬಿಟ್ಟಿದ್ದು, ಗಣಪತಿಗಾಗಿ ಅಡ್ಡಾಡುತ್ತಿದ್ದೇನೆ. ಇವನನ್ನು ಹೊರಗೆ ಹಾಕಲಿಕ್ಕೆ ಆಗುತ್ತಿಲ್ಲ, ಇಟ್ಟುಕೊಳ್ಳುವುದಕ್ಕೂ ಆಗುತ್ತಿಲ್ಲ ಅಂತಿದ್ದಾರೆ. ನಾನು ಹಿಂದೂ ಪರವಾಗಿ ಮಾತನಾಡುತ್ತಿದ್ದೇನೆ. ಪ್ರಧಾನ ಮಂತ್ರಿ ಅವರ ಕೈಯಲ್ಲಿ ನಮ್ಮ ದೇಶ ಇದೆ. ಒಂದು ಕಾಲಕ್ಕೆ ಅಮೇರಿಕಾ ಮೋದಿ ಅವರಿಗೆ ವೀಸಾ ಕೊಡಲಿಲ್ಲ. ಇದೀಗ ಅಮೇರಿಕಾದ ಅಧ್ಯಕ್ಷರೂ ಒಂದು ಮೆಟ್ಟಿಲು ಇಳಿದು ಪ್ರಧಾನಿಗೆ ಗೌರವ ಕೊಡುತ್ತಾರೆ. ಈ ಹಿಂದೆ ಮನಮೋಹನ್‌ ಸಿಂಗ್ ಪ್ರಧಾನಿ ಆಗಿದ್ದಾಗ ಗೌರವ ಸಿಗುತ್ತಿರಲಿಲ್ಲ ಎಂದಿದ್ದಾರೆ.

English summary
Yatnal said bulldozers should be tried in state on model of Uttar Pradesh, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X